ಟಾಲಿವುಡ್ ನಟ ಪವನ್ ಕಲ್ಯಾಣ್ (Pawan Kalyan) ಇದೀಗ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿದ್ದಾರೆ. ಸದ್ಯ ಸಿನಿಮಾಗೆ ಬ್ರೇಕ್ ಹಾಕಿ ರಾಜಕೀಯದಲ್ಲಿ ಪವನ್ ಬ್ಯುಸಿಯಾಗಿದ್ದಾರೆ. ತೆಲುಗು ಸಿನಿಮಾಗಳು ಥಿಯೇಟರ್ ವಿಚಾರದಲ್ಲಿ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನಲೆ ಪವನ್ ಕಲ್ಯಾಣ್ರನ್ನು ಸೌತ್ನ ಖ್ಯಾತ ನಿರ್ಮಾಪಕರು ಭೇಟಿಯಾಗಲಿದ್ದಾರೆ. ಇದನ್ನೂ ಓದಿ:ಸರಳವಾಗಿ ಜರುಗಿತು ಝಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ
Advertisement
‘ಪುಷ್ಪ 2’ (Pushpa 2) ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕ ನವೀನ್ ಮತ್ತು ರವಿಶಂಕರ್, ‘ಆರ್ಆರ್ಆರ್’ ಸಿನಿಮಾದ ನಿರ್ಮಾಪಕ ಡಿವಿವಿ ದಾನಯ್ಯ, ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ನಿರ್ಮಾಪಕ, ಖ್ಯಾತ ನಿರ್ಮಾಪಕ ದಿಲ್ ರಾಜು, ನಾಗ ವಂಶಿ ಸೇರಿದಂತೆ ಅನೇಕ ನಿರ್ಮಾಪಕರು ಜೊತೆಯಾಗಿ ನಟ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:250 ಕೋಟಿ ಸಾಲದ ಸುಳಿಯಲ್ಲಿ ರಕುಲ್ ಪ್ರೀತ್ ಸಿಂಗ್ ಪತಿ
Advertisement
Advertisement
ಈ ದೊಡ್ಡ ದೊಡ್ಡ ನಿರ್ಮಾಪಕರು ಪವನ್ರನ್ನು ಭೇಟಿ ಮಾಡಲು ಬರುತ್ತಿರುವುದು ಕಾಲ್ಶೀಟ್ಗಾಗಿ ಅಲ್ಲ. ಚಿತ್ರರಂಗದ ಕುರಿತು ಕೆಲವು ವಿಚಾರಗಳನ್ನು ತಿಳಿಸಲು ಭೇಟಿಯಾಗ್ತಿದ್ದಾರೆ. ಥಿಯೇಟರ್ ಸಮಸ್ಯೆ, ಟಿಕೆಟ್ ರೇಟ್ ಸೇರಿದಂತೆ ಹಲವು ವಿಚಾರಗಳನ್ನು ನಿವಾರಿಸುವ ಸಲುವಾಗಿ ಪವನ್ ಕಲ್ಯಾಣ್ಗೆನಿರ್ಮಾಪಕರು ಮನವಿ ಮಾಡಿಕೊಳ್ಳಲಿದ್ದಾರಂತೆ.