ಬೆಂಗಳೂರು: ಗೋವಾದ ನೈಟ್ ಕ್ಲಬ್ ದುರಂತದಿಂದ ಎಚ್ಚರ ವಹಿಸಿರುವ ಬೆಂಗಳೂರು ಪೊಲೀಸರು (Bengaluru Police) ಪಬ್ ಬಾರ್, ರೆಸ್ಟೋರೆಂಟ್‌ಗಳಿಗೆ ಹೊಸ ವರ್ಷಕ್ಕಾಗಿ ಗೈಡ್‌ಲೈನ್ಸ್ (New Year Guidelines) ಬಿಡುಗಡೆ ಮಾಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ವೆಲ್‌ಕಮ್ ಮಾಡಲು ಯುವ ಸಮೂಹ ಸಜ್ಜಾಗಿದ್ದು, ಹೊಸ ವರ್ಷಕ್ಕೆ ಇಪ್ಪತ್ತು ದಿನ ಮುಂಚೆಯೇ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದೆ. ಪಬ್, ಬಾರ್, ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ನಡೆಸಿದ ಪೊಲೀಸ್ ಅಧಿಕಾರಿಗಳು, ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕಟ್ಟು ನಿಟ್ಟಿನ ರೂಲ್ಸ್ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ಮತಕಳ್ಳತನ ಮಾಡಿದ್ದು ಇಂದಿರಾ ಗಾಂಧಿ, ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್‌ನಿಂದ ರಾಜ್ಯಪಾಲ ಹುದ್ದೆ: ನಿಶಿಕಾಂತ್ ದುಬೆ
ಗೈಡ್‌ಲೈನ್ಸ್ ಏನು?
* ಪಬ್ ಬಾರ್ & ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಲು ಫೈರ್ ಡಿಪಾರ್ಟ್‌ಮೆಂಟ್ ಪರ್ಮಿಷನ್ ಬೇಕು.
* ಫೈರ್ ಅಂಡ್ ಸೇಫ್ಟಿ ಡಿಪಾರ್ಟ್‌ಮೆಂಟ್ ಪರ್ಮಿಷನ್ ಇಲ್ಲದಿದ್ರೆ ಅಂತಹ ಬಾರ್, ಪಬ್ ಕ್ಲೋಸ್.
* ಒಂದು ವೇಳೆ ಪರ್ಮಿಷನ್ ಇಲ್ಲದೇ ಸರ್ವಿಸ್ ನೀಡಿದ್ರೆ ಕಾನೂನು ಕ್ರಮ.
* ಪಾರ್ಟಿ ವೇಳೆ ಹೆಚ್ಚು ಗ್ರಾಹಕರು ಸೇರಿ ಅನಾಹುತ ನಡೆದರೆ ಅದಕ್ಕೆ ಮಾಲೀಕರೇ ಹೊಣೆ.
* ಇದರ ಜೊತೆಗೆ ಪಬ್, ಬಾರ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಗ್ರಾಹಕರನ್ನ ಸೇರಿಸುವಂತಿಲ್ಲ.
* ನಿಗದಿ ಮಾಡುವ ಸಮಯ ಮೀರಿ ಸೇವೆ ನೀಡುವಂತಿಲ್ಲ.
* ಪ್ರತಿ ಬಾರ್ ಮತ್ತು ಪಬ್‌ನ ಸೆಲೆಬ್ರೆಷನ್ ನಡೆಯೋ ಜಾಗದಲ್ಲಿ ಸಿಸಿಟಿವಿ ಕಡ್ಡಾಯ.
* ಮಹಿಳೆಯ ಸುರಕ್ಷತೆ ಕುರಿತು ಎಚ್ಚರಿಕೆ ವಹಿಸಬೇಕು.
ಹೀಗೆ ಹತ್ತು ಹಲವು ರೂಲ್ಸ್ ಮಾಡಿ ಪಾರ್ಟಿ ಸೆಲೆಬ್ರೇಷನ್ ಸ್ಥಳಗಳನ್ನ ಪೊಲೀಸರು ಕಾನೂನಿನ ಮೂಲಕ ಬಿಗಿ ಮಾಡಿದ್ದಾರೆ. ಇದನ್ನೂ ಓದಿ: ರಾ.ಹೆದ್ದಾರಿ ಅಗಲೀಕರಣಕ್ಕಾಗಿ ಜಮೀನು ವಶಕ್ಕೆ ಪಡೆದು ಅನ್ಯಾಯ – 3 ವರ್ಷ ಕಳೆದ್ರೂ ಪರಿಹಾರ ನೀಡದ್ದಕ್ಕೆ ಎಸಿ ಕಚೇರಿ ಜಪ್ತಿ

