ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

Public TV
2 Min Read
FotoJet 8 8

ದೇಶಾದ್ಯಂತ ಇದೀಗ ಕೆಜಿಎಫ್ 2 ಹವಾ ಕ್ರಿಯೇಟ್ ಆಗಿದೆ. ನೆನ್ನೆಯಷ್ಟೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಭಾರತೀಯ ಸಿನಿಮಾ ರಂಗದ ಬಹುತೇಕ ಸ್ಟಾರ್ ನಟರು ಟ್ರೈಲರ್ ಮೆಚ್ಚಿಕೊಂಡು, ಅದನ್ನು ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಂತೂ ಹಬ್ಬದ ರೀತಿಯಲ್ಲೇ ಸಂಭ್ರಮಿಸುತ್ತಿದ್ದಾರೆ. ಈಗ ಕನ್ನಡದ ಚಿತ್ರವೊಂದು ಬಾಲಿವುಡ್ ದಾಟಿಕೊಂಡು ಹಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದೆ. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

FotoJet 7 14

ಹಲವು ದಾಖಲೆಗಳನ್ನು ಬರೆದಿರುವ ಮತ್ತು ತಾನೇ ಬರೆದ ದಾಖಲೆಯನ್ನು ಮುರಿದಿರುವ ‘ಕೆಜಿಎಫ್’ ಸಿನಿಮಾ ಶುರುವಾಗಿದ್ದು 2015ರಂದು. ನಟ ಯಶ್ ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಸಿನಿಮಾದ ಗೆಲುವಿನಲ್ಲಿದ್ದರು. ನಿರ್ದೇಶಕ ಪ್ರಶಾಂತ್ ನೀಲ್ ‘ಉ್ರಗಂ’ ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿದ್ದರು. ಪುನೀತ್ ರಾಜ್ ಕುಮಾರ್ ನಟನೆಯ ‘ನಿನ್ನಿಂದಲೇ’ ಚಿತ್ರದ ಮೂಲಕ ಹೊಂಬಾಳೆ ಫಿಲ್ಮ್ ಬ್ಯಾನರ್ ಸಿನಿಮಾ ರಂಗ ಪ್ರವೇಶ ಮಾಡಿತ್ತು. ಈ ಮೂವರು ಸೇರಿ ಮೊದಲು ‘ಕೆಜಿಎಫ್’ ಕನಸು ಕಂಡವರು. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ

FotoJet 112

21 ಡಿಸೆಂಬರ್ 2018ರಲ್ಲಿ ತೆರೆಕಂಡ ‘ಕೆಜಿಎಫ್’ ಸಿನಿಮಾ ಐತಿಹಾಸಿಕ ದಾಖಲೆ ಮಾಡಿತು. ಪ್ಯಾನ್ ಇಂಡಿಯಾ ಪರಿಕಲ್ಪನೆಯ ಪಕ್ಕಾ ಸಿನಿಮಾ ಎನಿಸಿತು. ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿ ಬಾಚಿತು. ಯಶ್ ಎಂಬ ಕನ್ನಡದ ಹುಡುಗ ಪ್ಯಾನ್ ಇಂಡಿಯಾ ನಾಯಕನಾಗಿ ಹೊರಹೊಮ್ಮಿದರು. ಭಾರತೀಯ ಸಿನಿಮಾ ರಂಗವೇ ಈ ಸಿನಿಮಾವನ್ನು ಬೆರಗಿನಿಂದ ನೋಡಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಈ ಸಿನಿಮಾದಿಂದ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಲಿಲ್ಲ. ತೆಲುಗಿಗೂ ಹಾರಿದರು. ಇಷ್ಟೆಲ್ಲ ಗೆಲುವಿಗೆ ಇಂಬು ಕೊಟ್ಟಿದ್ದು ‘ಕೆಜಿಎಫ್ 2’ ಚಿತ್ರ.  ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

FotoJet 6 17

2018ರಲ್ಲೇ ‘ಕೆಜಿಎಫ್ 2’ ಸಿನಿಮಾದ ಕೆಲಸ ಶುರುವಾದವು. ಇದೀಗ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. ಈ ಸಿನಿಮಾ ಕೂಡ ಭಾರತದ ಸಹಿತ 70 ದೇಶಗಳಲ್ಲಿ ಬಿಡುಗಡೆ ಆಗುತ್ತಿರುವುದು ಮತ್ತೊಂದು ಹೆಮ್ಮೆಯ ಸಂಗತಿ. ಬರೋಬ್ಬರಿ ಎಂಟು ವರ್ಷಗಳ ಕಾಲ ಯಶ್, ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ ಸಂಜಯ್ ದತ್

FotoJet 2 83

ಎಂಟು ವರ್ಷಗಳ ಕಾಲ ಯಶ್ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ‘ಕೆಜಿಎಫ್’ನಲ್ಲೇ ಮುಳುಗಿದ್ದಾರೆ. ಪ್ರಶಾಂತ್ ನೀಲ್ ತೆಲುಗಿನಲ್ಲಿ ಸಿನಿಮಾ ಮಾಡುತ್ತಿದ್ದರೂ, ಕೆಜಿಎಫ್ 2 ಸಿನಿಮಾದ ಕೆಲಸ ಮುಗಿದ ನಂತರವೇ ಮತ್ತೊಂದು ಕೆಲಸಕ್ಕೆ ಕೈ ಹಾಕಿದ್ದಾರೆ. ಹೊಂಬಾಳೆ ಫಿಲ್ಮ್ ಬೇರೆ ಬೇರೆ ಚಿತ್ರಗಳನ್ನೂ ಮಾಡಿದರೂ, ಕೆಜಿಎಫ್ ಟೆನ್ಷನ್ ಮಾತ್ರ ಹಾಗೆಯೇ ಇತ್ತು. ಇವರೆಲ್ಲ ಇಷ್ಟೊಂದು ನಿರಾಳತೆಯಿಂದ ಕೆಲಸ ಮಾಡಲು ಕಾರಣ ಅವರ ಪತ್ನಿಯರು ಎನ್ನುವುದು ವಿಶೇಷ. ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರ ಅವರೇ ಈ ಮಾತನ್ನು ಹೇಳಿದ್ದಾರೆ.

FotoJet 5 26

“ಪ್ರಶಾಂತ್ ನೀಲ್ ಪತ್ನಿ ಲಿಖಿತ, ಯಶ್ ಪತ್ನಿ ರಾಧಿಕಾ ಪಂಡಿತ್ ಮತ್ತು ನನ್ನ (ವಿಜಯ ಕಿರಗಂದೂರ) ಪತ್ನಿ ಸಹಕಾರದಿಂದಾಗಿ ಎಂಟು ವರ್ಷಗಳ ಕಾಲ ಒಂದೇ ಸಿನಿಮಾದ ಬಗ್ಗೆ ಅಷ್ಟೂ ಶಕ್ತಿಯನ್ನು ವ್ಯಹಿಸಿದ್ದೇವೆ. ನಾವು ಕೂಲ್ ಆಗಿ ಕೆಲಸ ಮಾಡಿದ್ದೇವೆ ಎಂದರೆ, ಅದರ ಅಷ್ಟೂ ಕ್ರೆಡಿಟ್ಸ್ ಅವರಿಗೆ ಸಲ್ಲಬೇಕು’ ಎಂದಿದ್ದಾರೆ ವಿಜಯ್ ಕಿರಗಂದೂರ.

Share This Article
Leave a Comment

Leave a Reply

Your email address will not be published. Required fields are marked *