ಬೆಂಗಳೂರಿನ ಓರಾಯನ್ ಮಾಲ್‍ನಲ್ಲಿ ಕೆಜಿಎಫ್-2 ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ಭಾನುವಾರ ನೆರವೇರಿತು. ಈ ಕಾರ್ಯಕ್ರಮಕ್ಕೆ ಸಿನಿ ಲೆಜೆಂಡ್‍ಗಳು ಭಾಗಿಯಾಗಿದ್ದು, ಕೆಜಿಎಫ್-2 ತಂಡ ಅವರನ್ನೆಲ್ಲ ಸ್ವಾಗತಿಸಲು ವಿಶೇಷ ತಂಡವನ್ನು ರೆಡಿ ಮಾಡಿತ್ತು. ವಿಶೇಷ ಅತಿಥಿಯಾಗಿ ಕನ್ನಡದ ನಟ ಶಿವರಾಜ್‍ಕುಮಾರ್ ಬಂದಿದ್ದು, ಅವರೇ ಟ್ರೈಲರ್ ರಿಲೀಸ್ ಮಾಡಿದರು.
Advertisement
ಶಿವಣ್ಣ ಟ್ರೈಲರ್ ರಿಲೀಸ್ ಮಾಡುತ್ತಿದ್ದಂತೆ ರಾಕಿಬಾಯ್ ಅಭಿಮಾನಿಗಳು ಟ್ರೈಲರ್ ವೀಕ್ಷಣೆ ಮಾಡಿದ್ದು, ಸಿನಿಮಾ ಇಂಡಸ್ಟ್ರಿಯಲ್ಲೇ ದೊಡ್ಡ ಇತಿಹಾಸ ಸೃಷ್ಟಿಮಾಡಿದೆ. ಕೆಜಿಎಫ್ – 2 ಟ್ರೈಲರ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಕ್ಕೂ ಹೆಚ್ಚು ವ್ಯೂ ಆಗಿದ್ದು, ಇಂದು ಸಿನಿಲೋಕದ ಇತಿಹಾಸದಲ್ಲಿ ಮೊದಲಬಾರಿಗೆ ಎಂಬುದು ಈ ತಂಡದ ಮತ್ತೊಂದು ಯಶಸ್ಸು ಆಗಿದೆ. ಇದನ್ನೂ ಓದಿ: ಕೆಜಿಎಫ್-2 ಸಿನಿಮಾದ ಪೂರ್ತಿ ಕ್ರೆಡಿಟ್ ನಮ್ಮ ಕನ್ನಡ ಇಂಡಸ್ಟ್ರಿಗೆ ಹೋಗಬೇಕು: ರಾಕಿಬಾಯ್
Advertisement
Advertisement
ಕೆಜಿಎಫ್-2 ಟ್ರೈಲರ್ ರಿಲೀಸ್ ಆದ 30 ನಿಮಿಷಕ್ಕೆ 1.1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಕನ್ನಡದಲ್ಲಿ 1.1 ಮಿಲಿಯನ್ , ತೆಲುಗು 1.1 ಮಿಲಿಯನ್, ತಮಿಳು 7.30 ಲಕ್ಷ, ಮಲಯಾಳಂ 4 ಲಕ್ಷ. ಹಿಂದಿ 6 ಸಾವಿರ ವೀಕ್ಷಣೆ ಪಡೆದಿಕೊಂಡಿದೆ. ಈ ಟ್ರೈಲರ್ ನೋಡಿದ ರಾಕಿಬಾಯ್ ಅಭಿಮಾನಿಗಳು ಯಶ್ ಡೈಲಾಗ್‍ಗೆ ಫಿದಾ ಆಗಿದ್ದಾರೆ.
Advertisement
ಈ ಟ್ರೈಲರ್‌ನಲ್ಲಿರುವ ‘ವೈಲೆನ್ಸ್.. ವೈಲೆನ್ಸ್ ಐ ಡೋಂಟ್ ಲೈಕ್ ವೈಲೆನ್ಸ್, ಬಟ್ ವೈಲೆನ್ಸ್ ಲೈಕ್ಸ್ ಮಿ’ ಎಂಬ ಡೈಲಾಗ್ ಫುಲ್ ಟ್ರೆಂಡ್ ಕ್ರಿಯೇಟ್ ಆಗಿದೆ. ಅಲ್ಲದೇ ಶಿವಣ್ಣ ಸಹ ತಮ್ಮ ಮಾತನ್ನು ಪ್ರಾರಂಭಿಸುವ ಮುನ್ನ ಈ ಡೈಲಾಗ್ ಹೇಳಿದ್ದು, ಅಭಿಮಾನಿಗಳಲ್ಲಿ ಸಂತೋಷ ಇನ್ನೂ ಹೆಚ್ಚಾಗಿದೆ. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು
ಟ್ರೈಲರ್‌ನಲ್ಲಿ ರವೀನಾ, ಸಂಜಯ್ ದತ್, ಶ್ರೀನಿಧಿ ಮತ್ತು ಯಶ್ ಅಭಿನಯ ಎಲ್ಲರಲ್ಲೂ ಕುತೂಹಲ ಕೆರಳಿಸುತ್ತಿದೆ. ಇಡೀ ಸಿನಿಮಾ ಹೇಗೆ ಇರಬಹುದು ಎಂಬುದು ಅಭಿಮಾನಿಗಳು ಕುತೂಹಲ ಮೂಡಿಸಿದೆ.