ಗಾಂಧಿನಗರ: ಕಾರ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ ನ ಪಾಲನ್ಪುರ್ ದಲ್ಲಿ ನಡೆದಿದೆ.
ಈ ಘಟನೆ ಸಬರ್ಕಾಂತದ ಹಿಮಾತ್ ನಗರದಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಕಾಕ್ರೋಲ್ ಗ್ರಾಮದ ಬಳಿ ಸಂಭವಿಸಿದೆ. ಮೃತರನ್ನು ನಿರ್ಮಲ್ ಪಟೇಲ್ (24), ಇವರ ಪತ್ನಿ ಭೂಮಿಕಾ ಪಟೇಲ್ (23) ಹಾಗೂ ಚಾಲಕ ಧರ್ಮೇಂದ್ರ ಪಟೇಲ್ (20) ಎಂದು ಗುರುತಿಸಲಾಗಿದೆ.
- Advertisement 2
ದಂಪತಿ ಅಹಮದಾಬಾದ್ ವಾಸ್ತ್ರಾಲ್ ನ ರಘುಲಿಲಾ ಅಪಾರ್ಟ್ ಮೆಂಟ್ ನಿವಾಸಿಗಳು ಎಂದು ತಿಳಿದುಬಂದಿದೆ. ಚಾಲಕ ಮೆಹಸಾನಾದ ಬೆಚಾರಾಜಿಯಲ್ಲಿರುವ ಜಂಟ್ರಲ್ ಗ್ರಾಮದ ನಿವಾಸಿಯಾಗಿದ್ದಾರೆ.
- Advertisement 3
- Advertisement 4
ಕಾರ್ ಶ್ಯಾಮಲಾಜಿನಿಂದ ಅಹಮದಾಬಾದ್ ಕಡೆಗೆ ಸಂಚರಿಸುತ್ತಿತ್ತು. ಟ್ರಕ್ ಅಹಮದಾಬಾದ್ ಕಡೆಯಿಂದ ರಾಜಸ್ಥಾನ್ ಕಡೆಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಸಬರ್ಕಾಂತದ ರಾಷ್ಟ್ರೀಯ ಹೆದ್ದಾರಿ 8 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ ಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಟ್ರಕ್ ಡಿಕ್ಕಿ ಹೊಡೆದು ನಂತರ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್, ಟ್ರಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ಸೇರಿ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಈ ಅಪಘಾತದಿಂದ ಗಾಯಗೊಂಡಿದ್ದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
Three killed, two injured in a collision between a car and a truck in Sabarkantha's Himatnagar #Gujarat pic.twitter.com/Nl8joRnMSp
— ANI (@ANI) April 20, 2018