ತುಮಕೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಡಿಗೇನಹಳ್ಳಿ ಪೊಲೀಸರು (Kodigenahalli Police) ಬಂಧಿಸಿರುವ ಘಟನೆ ಮಧುಗಿರಿ (Madhugiri) ತಾಲೂಕಿನ ಕಸಿನಾಯಕನಹಳ್ಳಿ ಗೇಟ್ ಬಳಿ ನಡೆದಿದೆ.
ಜಿಲಾನ್ (30), ಕಲ್ಯಾಣಕುಮಾರ್ (27), ಚರಣ್ (26) ಬಂಧಿತ ಆರೋಪಿಗಳು. ಬಂಧಿತರು ಕಸಿನಾಯಕನಹಳ್ಳಿ ಗೇಟ್ ಬಳಿ ಮಧುಗಿರಿ-ಹಿಂದೂಪುರ ರಸ್ತೆಯಲ್ಲಿ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ: ದರ್ಶನ್‌ಗೆ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ – ಖುದ್ದು ಹಾಜರಾತಿ ಅರ್ಜಿ ವಜಾ
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊಡಿಗೇನಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಗಳು ಮಧುಗಿರಿ ಹಾಗೂ ಚಿಕ್ಕಬಳ್ಳಾಪುರದವರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ISI ಬೆಂಬಲಿತ ಉಗ್ರ ಜಾಲದ ವಿರುದ್ಧ ಕಾರ್ಯಾಚರಣೆ – ಕರ್ನಾಟಕದಲ್ಲಿ ಮೂವರು ವಶಕ್ಕೆ

