ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿದಿನದ ಕಾರ್ಯದಲ್ಲಿ ಇಂಧನ ಬೆಲೆಯ ಹೆಚ್ಚಳವು ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
ಸತತ 9 ದಿನಗಳಲ್ಲಿ 8ನೇ ಬಾರಿ ಇಂಧನ ಏರಿಕೆಯಾಗಿರುವುದರ ಕುರಿತು ವಾಗ್ದಾಳಿ ನಡೆಸಿದ ಅವರು, ಮೋದಿ ಅವರ ಮನ್ ಕಿ ಬಾತ್‍ನ್ನು ರೋಜ್ ಸುಬಾ ಕಿ ಬಾತ್ ಎಂದು ಲೇವಡಿ ಮಾಡಿ ಟ್ವೀಟ್ ಮಾಡಿದ್ದಾರೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?: ಪೆಟ್ರೋಲ್, ಡೀಸೆಲ್, ಗ್ಯಾಸ್ ದರವನ್ನು ಎಷ್ಟು ಹೆಚ್ಚಿಸಬೇಕು, ಯುವಕರಿಗೆ ಉದ್ಯೋಗದ ಕನಸುಗಳನ್ನು ಹೇಗೆ ತೋರಿಸುವುದು, ಇಂದು ಯಾವ ಸರ್ಕಾರಿ ಕಂಪನಿಯನ್ನು ಮಾರಾಟ ಮಾಡಬೇಕು?, ರೈತರನ್ನು ಹೆಚ್ಚು ಅಸಹಾಯಕರನ್ನಾಗಿ ಮಾಡುವುದು ಹೇಗೆ, ಇವು ಪ್ರಧಾನ ಮಂತ್ರಿ ಅವರು ಪ್ರತಿನಿತ್ಯ ಮಾಡುವ ಕೆಲಸವಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಇಂಧನ ಬೆಲೆ ಏರಿಕೆ ನಡುವೆಯೇ ಹಸಿರು ಹೈಡ್ರೋಜನ್ ಕಾರಿನಲ್ಲಿ ಪಾರ್ಲಿಮೆಂಟ್‌ಗೆ ಬಂದ ನಿತಿನ್ ಗಡ್ಕರಿ
Advertisement
प्रधानमंत्री की Daily To-Do List
1. पेट्रोल-डीज़ल-गैस का रेट कितना बढ़ाऊँ
2. लोगों की ‘खर्चे पे चर्चा’ कैसे रुकवाऊँ
3. युवा को रोज़गार के खोखले सपने कैसे दिखाऊं
4. आज किस सरकारी कंपनी को बेचूँ
5. किसानों को और लाचार कैसे करूँ#RozSubahKiBaat
— Rahul Gandhi (@RahulGandhi) March 30, 2022
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವನ್ನು ಕಾಂಗ್ರೆಸ್ ನಿರಂತರವಾಗಿ ಪ್ರಸ್ತಾಪಿಸುತ್ತಿದ್ದು, ನಾಳೆಯಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ. ಮೂರು ಹಂತದ ಪ್ರತಿಭಟನಾ ಅಭಿಯಾನದಲ್ಲಿ ಮೊದಲನೆಯದು ಮಾರ್ಚ್ 31ರಂದು, ಎರಡನೆಯದು ಏಪ್ರಿಲ್ 2 ಮತ್ತು ಏಪ್ರಿಲ್ 4ರ ನಡುವೆ ಮತ್ತು ಮೂರನೆಯದು ಏಪ್ರಿಲ್ 7ರಂದು ನಡೆಯಲಿದೆ. ಇದನ್ನೂ ಓದಿ: ಉಚಿತ ಊಟ ನೀಡಲು ಮುಂದಾದ ಯೋಗಿ ಸರ್ಕಾರ
Advertisement
ಪೆಟ್ರೋಲ್, ಡೀಸೆಲ್ ದರವು ಕಳೆದ 9 ದಿನಗಳಲ್ಲಿ 8ನೇ ಬಾರಿ ಏರಿಕೆಯಾಗಿದ್ದು, ಬುಧವಾರವೂ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‌ಗೆ 80 ಪೈಸೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಒಂದೇ ವಾರದಲ್ಲಿ ಲೀಟರ್‌ಗೆ 5.60ರೂ. ಏರಿಕೆಯಾಗಿದೆ.