ಪಾಟ್ನಾ: ವಿದೇಶಿ ಮಹಿಳೆಯರು ತಮ್ಮ ಬಾಯ್‍ಫ್ರೆಂಡ್‍ನನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ವಿದೇಶಿ ಮಹಿಳೆಯರಿಗೆ ಹೋಲಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗುರುವಾರ ಇಂದೋರ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ವಿದೇಶ ಪ್ರವಾಸದಲ್ಲಿದ್ದಾಗ, ಅಲ್ಲಿನ ಮಹಿಳೆಯರು ತಮ್ಮ ಬಾಯ್‍ಫ್ರೆಂಡ್‍ಗಳನ್ನು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳುತ್ತಾರೆ ಎಂದು ಒಬ್ಬರು ಹೇಳಿದ್ದರು. ಬಿಹಾರದ ಮುಖ್ಯಮಂತ್ರಿ ಕೂಡ ಅದೇ ರೀತಿ ಆಗಿದ್ದಾರೆ, ಅವರು ಯಾವಾಗ ಯಾರ ಕೈ ಹಿಡಿಯುತ್ತಾರೆ ಅಥವಾ ಬಿಡುತ್ತಾರೆ ಎಂಬುವುದೇ ತಿಳಿಯುವುದಿಲ್ಲ ಎಂದು ಹೇಳಿದ್ದಾರೆ.
भाजपा के राष्ट्रीय महासचिव द्वारा नारी सम्मान का नया नमूना ???? pic.twitter.com/DEGr5ojM5r
— Randeep Singh Surjewala (@rssurjewala) August 18, 2022
ಈ ವೀಡಿಯೋವನ್ನು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಿಳೆಯರಿಗೆ ಯಾವ ರೀತಿ ಗೌರವ ತೋರಿಸುತ್ತಿದ್ದಾರೆ ಎಂಬುವುದಕ್ಕೆ ಇಂದೊಂದು ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ನೆಲೆಸಲು ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಗೊತಬಯ ರಾಜಪಕ್ಸೆ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‍ಡಿಎ ಸಮ್ಮಿಶ್ರ ಸರ್ಕಾರದಿಂದ ಬೇರ್ಪಟ್ಟು ಜೆಡಿಯು ಮತ್ತು ಬಿಜೆಪಿ ಜೊತೆಗೆ ವಾರಗಟ್ಟಲೆ ಹಗ್ಗಜಗ್ಗಾಟ ನಡೆಸಿದ ನಂತರ ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಕೈಜೋಡಿಸಿದೆ. ಕಳೆದ ವಾರ, ನಿತೀಶ್ ಕುಮಾರ್ ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಮರುದಿನ ಆರ್‌ಜೆಡಿ ಬೆಂಬಲದೊಂದಿಗೆ ಮತ್ತೆ ಸಿಎಂ ಕುರ್ಚಿಯನ್ನು ಅಲಂಕರಿಸಿದರು. ಇದನ್ನೂ ಓದಿ: ಕೊರೋನಾ ಬಳಿಕ ಶಾಲೆಗೆ ಬರುತ್ತಿಲ್ಲ 5 ಸಾವಿರ ಮಕ್ಕಳು!