ಬೆಂಗಳೂರು: ಎರಡು ವರ್ಷಗಳ ಕೊರೊನಾ ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಹೊಡೆತ ಕೊಟ್ಟಿತ್ತು. ಈಗ ಕೊರೊನಾ ಎಫೆಕ್ಟ್ ಕಡಿಮೆ ಆಗುತ್ತಲೇ ಅದರ ಪರಿಣಾಮಗಳು ಶಿಕ್ಷಣ ಕ್ಷೇತ್ರದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತಿವೆ.
Advertisement
ಕೊರೊನಾದಿಂದಾಗಿ ರಾಜ್ಯದಲ್ಲಿ ಸಾವಿರಾರು ಮಕ್ಕಳು ಶಾಲೆಯಿಂದ ದೂರ ಉಳಿದಿರುವ ಆಘಾತಕಾರಿ ಅಂಶ ಈಗ ಬಯಲಾಗಿದೆ. ಶಿಕ್ಷಣ ಇಲಾಖೆಯ ಅಂಕಿ ಅಂಶಗಳಲ್ಲಿ ಕೆಲವೊಂದು ಆಘಾತಕಾರಿ ಅಂಶ ಹೊರಬಿದ್ದಿದೆ. ಹೈಕೋರ್ಟ್ ಸೂಚನೆ ಮೇರೆಗೆ ಶಿಕ್ಷಣ ಇಲಾಖೆ ಆಪರೇಷನ್ ಡ್ರಾಪ್ ಔಟ್ ಚಿಲ್ಡ್ರನ್ಸ್ ಅಭಿಯಾನ ಪ್ರಾರಂಭ ಮಾಡಿದೆ. ಮಕ್ಕಳನ್ನ ಶಾಲೆಗೆ ವಾಪಸ್ ಕರೆತರಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವಿಶೇಷ ಟಾಸ್ಕ್ ನೀಡಲಾಗಿದೆ.
Advertisement
Advertisement
ಶಾಲೆ ಬಿಟ್ಟ ಮಕ್ಕಳ ರಿಪೋರ್ಟ್: ಈ ವರ್ಷ 24,308 ವಿದ್ಯಾರ್ಥಿಗಳು ಶಾಲೆಯಿಂದ ಡ್ರಾಪ್ ಔಟ್ ಆಗಿದ್ದಾರೆ. ಈವರೆಗೂ 18,584 ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ಪತ್ತೆಹಚ್ಚಿದೆ. ಇನ್ನು 5,724 ವಿದ್ಯಾರ್ಥಿಗಳ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಇಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಕೊರೊನಾ ಏರಿಕೆ – 2 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ
Advertisement
14,871 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಮರು ಸೇರ್ಪಡೆ ಆಗಿದ್ದಾರೆ. ಉಳಿದ 3,713 ವಿದ್ಯಾರ್ಥಿಗಳು ಶಾಲೆಯಿಂದ ದೂರವಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 9437 ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿದ್ದಾರೆ. ಇದೀಗ ಮಕ್ಕಳ ಡ್ರಾಪ್ ಔಟ್ ವಿಚಾರ ಶಿಕ್ಷಣ ಇಲಾಖೆಗೆ ದೊಡ್ಡ ತಲೆ ನೋವು ತಂದಿದ್ದು, ಮಕ್ಕಳ ಪತ್ತೆ ಡಿಡಿಪಿಐಗಳು, ಬಿಇಓಗಳು & ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.