ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಅದ್ಧೂರಿ ತಾರಾಗಣ, ಭರ್ಜರಿ ಮೇಕಿಂಗ್ ಮತ್ತು ಭಾರೀ ಬಜೆಟ್ ನಲ್ಲಿ ಮೂಡಿ ಬಂದಿರುವ ಸಿನಿಮಾದ ಸಾಕಷ್ಟು ಅಂಶಗಳನ್ನು ಈ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಯಶ್, ರವೀನಾ ಟಂಡನ್, ಸಂಜಯ್ ದತ್, ಪ್ರಕಾಶ್ ರೈ, ಮಾಳ್ವಿಕಾ ಅವಿನಾಶ್, ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಾವ್ ರಮೇಶ್, ಈಶ್ವರಿ ರಾವ್, ಹರೀಶ್ ರೈ, ದಿನೇಶ್ ಮಂಗಳೂರು, ಅರ್ಚನಾ ಹೀಗೆ ಬಹುತೇಕ ಕಲಾವಿದರನ್ನು ಈ ಟ್ರೈಲರ್ ಒಳಗೊಂಡಿದೆ. ಹಾಗಾಗಿ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು
Advertisement
ಟ್ರೈಲರ್ ಶುರುವಾಗುವುದೇ ಒಂದು ಇಂಟ್ರಸ್ಟಿಂಗ್ ಸಂಗತಿಯಿಂದ. ‘ಕೆಜಿಎಫ್ ನಲ್ಲಿ ಗರುಡ ಸಾಯಿಸಿದ ನಂತರ ಮುಂದೇನಾಯಿತು ಎಂದು ನೀವು ಓದ್ತಿರಾ’ ಎಂಬ ಸಾಲಿನಿಂದ ಟ್ರೈಲರ್ ಶುರುವಾಗುತ್ತದೆ. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ
Advertisement
Advertisement
ಮಹಾಕ್ರೂರಿ, ಕೆಜಿಎಫ್ ಅಧಿಪತಿಯಾದ ಗರುಡನ ರುಂಡ ಚೆಂಡಾಡಿ, ಗರುಡ ಸತ್ತ ನಂತರ ನರಾಚಿ ಕೋಟೆಯ ಅಧಿಪತಿಯಾಗುತ್ತಾನೆ ರಾಕಿ. ನಂತರ ಈ ರಾಕಿ ಭಾಯ್ ಏನಾದ ಎನ್ನುವ ಕುತೂಹಲದೊಂದಿಗೆ ಚಾಪ್ಟರ್ 1 ಮುಗಿದಿತ್ತು. ಅಂದರೆ, ಗರುಡ ಸತ್ತ ನಂತರದ ಮತ್ತೊಂದು ಅಧ್ಯಾಯವನ್ನು ಚಾಪ್ಟರ್ 2 ಕಥೆ ಒಳಗೊಂಡಿದೆ. ಕಳೆದ ಬಾರಿ ಅನಂತ್ ನಾಗ್ ನಿರ್ವಹಿಸಿದ್ದ ಪಾತ್ರದಂತೆಯೇ ಕಾಣುವ ಅಥವಾ ಅದೇ ಪಾತ್ರದ ಮುಂದುವರಿಕೆ ಎನ್ನುವಂತೆ ಪ್ರಕಾಶ್ ರೈ ಕಾಣಿಸುತ್ತಾರೆ. ಪ್ರಕಾಶ್ ರೈ ಮಾಡಿರುವ ಪಾತ್ರವೇ ಹೇಳುವಂತೆ, ‘ರಕ್ತದಿಂದ ಬರೆದಿರೋ ಕಥೆಯಿದು. ಶಾಯಿಯಿಂದ ಮುಂದುವರೆಸೋಕೆ ಆಗಲ್ಲ. ಮತ್ತೆ ರಕ್ತನೇ ಕೇಳುತ್ತದೆ’ ಎಂಬ ಡೈಲಾಗ್, ಕೆಜಿಎಫ್ ಚಾಪ್ಟರ್ 2 ಕಥೆಯು ಒಂದು ರಕ್ತಸಿಕ್ತ ಅಧ್ಯಾಯ ಅನ್ನುವುದು ಪಕ್ಕಾ ಮಾಡುತ್ತದೆ. ಚಾಪ್ಟರ್ 1 ಗಿಂತಲೂ ಈ ಬಾರಿ ಘರ್ಷನೆ, ಹಿಂಸೆ ಮತ್ತು ಸಂಘರ್ಷ ಹೆಚ್ಚೇ ಇರಲಿದೆ. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು
Advertisement
ರಾಕಿಭಾಯ್ ಹೇಳುವ ಸಂಭಾಷಣೆ ‘ನನಗೆ ಹಿಂಸೆ ಇಷ್ಟವಿಲ್ಲ. ಆದರೆ, ನನ್ನನ್ನು ಹಿಂಸೆಯೇ ಇಷ್ಟಪಡುತ್ತಿದೆ. ಅದನ್ನು ನಿವಾರಿಸಲು ಆಗದು’ ಎಂದು ಇಂಗ್ಲಿಷ್ ನಲ್ಲಿ ಹೇಳುವುದು ಯಾವ ಮಟ್ಟಿಗೆ ವೈಲೆನ್ಸ್ ಸಿನಿಮಾದಲ್ಲಿ ಇರಲಿದೆ ಎನ್ನುವುದನ್ನು ನೀವೇ ಊಹಿಸಿಕೊಳ್ಳಿ. ಚಾಪ್ಟರ್ 1 ರಲ್ಲಿ ಗರುಡನ ಹವಾ ಇತ್ತು. ಈ ಬಾರಿ ಅಧೀರನ ಪಾತ್ರ ಪ್ರವೇಶವಾಗಿದೆ. ಈ ಪಾತ್ರವನ್ನು ಸಂಜಯ್ ದತ್ ನಿರ್ವಹಿಸಿದ್ದಾರೆ ಅಂದರೆ, ಅಧೀರ ಪಾತ್ರದ ತೂಕ ಎಷ್ಟಿರಲಿದೆ ಎಂದು ಅಂದಾಜಿಸುವುದು ಕಷ್ಟ. ವಿಚಿತ್ರ ಗೆಟಪ್ ನಲ್ಲಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ರಾಕಿಭಾಯ್ ಗೆ ಸರಿಯಾದ ಎದುರಾಳಿಯನ್ನೇ ನಿರ್ದೇಶಕ ಪ್ರಶಾಂತ್ ನೀಲ್ ತಂದಿದ್ದಾರೆ. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ
ಚಾಪ್ಟರ್ 1ರಲ್ಲಿ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಂಡಿದ್ದ ರಾಕ್ ಭಾಯ್, ಈ ಬಾರಿ ಉದ್ಯಮಿಯಾಗಿಯೂ ಬದಲಾಗಿದ್ದಾರೆ. ಅಮ್ಮನಿಗೆ ಚಿನ್ನವನ್ನು ತಂದುಕೊಡುವ ಬಾಲ ರಾಕಿಭಾಯ್ ಕನಸು, ಈ ಸಿನಿಮಾದಲ್ಲಿ ಈಡೇರಿದಂತಿದೆ. ಟ್ರೈಲರ್ ನಲ್ಲಿ ಅಂಥದ್ದೊಂದು ಡೈಲಾಗ್ ಇಟ್ಟು, ನಾಳೆವರೆಗೂ ಕಾಯೋಣ ಅನಿಸುತ್ತದೆ. ‘ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್…’ ಎನ್ನುತ್ತಾ ಎಂಟ್ರಿ ಕೊಡುವ ನಾಯಕನ ಮಾತೇ ಇಡೀ ಸಿನಿಮಾದ ಕಥಾ ಮತ್ತು ಕೇಂದ್ರ ವಸ್ತುವಾಗಿದೆ.