ಚೆನ್ನೈ: ಸಾಕುನಾಯಿಯೊಂದು ಬಾಲಕಿಯನ್ನು ಅಟ್ಟಿಸಿಕೊಂಡು ಹೋಗಿ ಕ್ರೂರವಾಗಿ ಕಚ್ಚಿ ಘಾಸಿ ಮಾಡಿದ್ದು, ಅದನ್ನು ಸಾಕಿದ ಮಾಲಕಿಯನ್ನು ಬಳಿಕ ಪೊಲೀಸರು ಬಂಧಿಸಿದ್ದಾರೆ. ಘಟನೆ ಚೆನ್ನೈನ ನೊಳಂಬೂರ್ನಲ್ಲಿ ನಡೆದಿದೆ.
ಜರ್ಮನ್ ಶೆಫರ್ಡ್ ಜಾತಿಯ ನಾಯಿ ಬಾಲಕಿಯನ್ನು ಕಚ್ಚಿರುವ ಘಟನೆ 2021ರ ಡಿಸೆಂಬರ್ 28ರಂದು ನಡೆದಿದೆ. ಅದರ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಮೀನುಗಾರರ 2 ಗುಂಪುಗಳ ನಡುವೆ ಕಿತ್ತಾಟ- 7 ಮಂದಿಗೆ ಗಾಯ
ಶ್ರೀರಾಮ್ ನಗರದಲ್ಲಿ ವಾಸವಾಗಿರುವ 9 ವರ್ಷದ ಬಾಲಕಿ ಅಪಾರ್ಟ್ಮೆಂಟ್ ಬಳಿ ತಿರುಗಾಡುತ್ತಿದ್ದಾಗ ನಾಯಿ ಆಕೆಯನ್ನು ಬೆನ್ನಟ್ಟಲು ಪ್ರಾರಂಭಿಸಿದೆ. ಬಾಲಕಿ ಎಡವಿ ಬಿದ್ದಾಗ ನಾಯಿ ಆಕೆಯನ್ನು ಕ್ರೂರವಾಗಿ ಕಚ್ಚಿದೆ. ಸ್ಥಳೀಯರು ಬಾಲಕಿಯನ್ನು ಕಾಪಾಡಲು ಬರುವಷ್ಟರಲ್ಲಿ ನಾಯಿ 16 ಬಾರಿ ಕಚ್ಚಿದೆ. ಇದನ್ನೂ ಓದಿ: ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!
ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ನಾಯಿಯ ಮಾಲಕಿ ವಿಜಯಲಕ್ಷ್ಮಿಯ ಮೇಲೆ ದೂರು ದಾಖಲಿಸಿ, ಆಕೆಯನ್ನು ಬಂಧಿಸಿದ್ದಾರೆ.