ಬೆಂಗಳೂರು: ದೇವಾಲಯಗಳ (Temple) ಹಣ ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದ್ದು ಚುನಾವಣಾ (Election) ಹತ್ತಿರ ಬರುತ್ತಿದಂತೆ ಬಿಜೆಪಿಯವರು (BJP) ಭಾವನೆಗಳ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅರ್ಚಕರ ಸಂಘ ಕಿಡಿಕಾರಿದೆ.
ಧರ್ಮದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ಬಿಜೆಪಿ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆಗಮಿಕರು ಹಾಗೂ ಅರ್ಚಕರ ಸಂಘ ಸುದ್ದಿಗೋಷ್ಠಿ ನಡೆಸಿತು. ಅರ್ಚಕರ ಸಂಘದ ಪ್ರಧಾನ ಸಲಹೆಗಾರ ರಾಧಾಕೃಷ್ಣ ಮಾತನಾಡಿ, ರಾಜ್ಯದ ಎ ದರ್ಜೆಯ ದೇವಾಲಯಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ (Congress) ಸರ್ಕಾರದಿಂದ ದೇವಾಲಯಗಳ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಎ ದರ್ಜೆಯ ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ. ಈ ಅಭಿವೃದ್ಧಿ ಸಹಿಸಲಾಗದೇ ಬಿಜೆಪಿ ಈ ರೀತಿಯ ಕೆಲಸ ಮಾಡುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಅರ್ಧ ಶತಕ ಸಿಡಿಸಿ ತಂದೆಗೆ ಸೆಲ್ಯೂಟ್ ಮಾಡಿದ ಧ್ರುವ್ ಜುರೆಲ್
ಚರ್ಚ್, ಮಸೀದಿಗಳಿಗೆ ಹಣ ಹೋಗುತ್ತಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಹಿಂದೂ (Hindu) ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಎ ದರ್ಜೆಯ ದೇವಸ್ಥಾನಗಳಲ್ಲಿ ಆಗುತ್ತಿದೆ. ನಿತ್ಯವೂ ಕೋಟ್ಯಂತರ ರೂ. ಹಣ ಸಂಗ್ರಹಣೆ ಆಗುತ್ತಿದ್ದು ಇದನ್ನು ಬಿಜೆಪಿ ಸಹಿಸುತ್ತಿಲ್ಲ. ಇದೇ ಕಾರಣ ಇಟ್ಟುಕೊಂಡು ಚರ್ಚ್, ಮಸೀದಿಗಳಿಗೆ ಹೋಗುತ್ತಿದೆ ಎಂಬ ಅಪಪ್ರಚಾರ ನಡೆಯುತ್ತಿದೆ. ದೇವಸ್ಥಾನಗಳನ್ನ ರಾಜಕೀಯಕ್ಕೆ ಎಳೆಯುವುದನ್ನ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಕೆಎಸ್‌ಎಸ್ ದೀಕ್ಷಿತ್ ಮಾತನಾಡಿ, ನಾವು ಪ್ರತಿ ಬಿಜೆಪಿಯವರ ಮನೆಗೆ ಹೋಗಿ ಪತ್ರಗಳನ್ನ ಕೊಟ್ಟು ಕಾಲಿಗೆ ಬಿದ್ದು ವಿರೋಧ ಮಾಡಬೇಡಿ ಎಂದು ಕೇಳಿಕೊಳ್ಳುತ್ತೇವೆ. ನಾವು ಯಾವುದೇ ಪ್ರತಿಭಟನೆ ಮಾಡುವುದಿಲ್ಲ. ನೇರವಾಗಿ ಭೇಟಿ ಮಾಡಿಯೇ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಸಂಘ ಹೇಳಿದ್ದೇನು?
ರಾಜ್ಯದಲ್ಲಿ 50 ವರ್ಷದಿಂದ ಹೋರಾಟ ನಡೆಸುತ್ತಿದ್ದು 42 ಸಾವಿರ ದೇವಾಲಯಗಳು ಬೀದಿ ಪಾಲಾಗಿದ್ದವು. ಅದಕ್ಕೆ ಪರಿಹಾರವಾಗಿ ತಸ್ತಿಕ್ ನೀಡಲಾಗುತ್ತಿದೆ. ನಾವೂ ಆ ಹಣದಲ್ಲಿ ದೇವಾಲಯದ ಪೂಜೆಗಳನ್ನು ಮಾಡಬೇಕು. ರಾಮಲಿಂಗಾ ರೆಡ್ಡಿ ನಮ್ಮ ಹಲವು ಬೇಡಿಕೆ ಈಡೇರಿಸಿದ್ದಾರೆ.
ಈ ಹಿಂದಿನ ಸರ್ಕಾರ ನಮಗೆ ತಸ್ತಿಕ್ ಕೊಟ್ಟಿರಲಿಲ್ಲ. ಆದರೆ ಹೊಸ ಸರ್ಕಾರ ಬಂದ ತಕ್ಷಣ ಬೇಡಿಕೆ ಈಡೇರಿದೆ. ದೇವಾಲಯದ ಹಣ ಯಾರ ಹುಂಡಿಗೂ ಸೇರುತ್ತಿಲ್ಲ. ದೇವಾಲಯದ ಒಂದು ರೂಪಾಯಿ ಕೂಡ ಬೇರೆ ಧರ್ಮಕ್ಕೆ, ಚರ್ಚ್ ಮಸೀದಿಗೆ ಹೋಗುತ್ತಿಲ್ಲ. ನೂರಾರು ಕೋಟಿ ಚರ್ಚ್, ಮಸೀದಿಗೆ ಹೋಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನೂ ಓದಿ: ನೀಲಗಿರಿ ತೋಪಿನಲ್ಲಿ ಬಿ.ಟೆಕ್ ವಿದ್ಯಾರ್ಥಿಯ ಬರ್ಬರ ಹತ್ಯೆ – ಸುಟ್ಟು ಹಾಕಿರುವ ಸ್ಥಿತಿಯಲ್ಲಿ ಶವ ಪತ್ತೆ