ಬೆಂಗಳೂರು: ಬಿ.ಟೆಕ್ ವಿದ್ಯಾರ್ಥಿಯನ್ನು (Student) ಬರ್ಬರವಾಗಿ ಹತ್ಯೆಗೈದು ಸುಟ್ಟು ಹಾಕಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ಲಿನ (Anekal) ಕಾಳನಾಯಕನಹಳ್ಳಿ ಬಳಿ ನಡೆದಿದೆ.
ಹರ್ಷಿತ್ ಕೊಂಟಾಳ ಕೊಲೆಯಾದ ಬಿ.ಟೆಕ್ ವಿದ್ಯಾರ್ಥಿ. ಉತ್ತರಾಖಂಡ (Uttarakhand) ಮೂಲದ ಹಾಲ್‌ಧ್ವನಿ ಮೂಲದ ಈತ ಆನೇಕಲ್‌ನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಫೆಬ್ರವರಿ 22ರಂದು ಹರ್ಷಿತ್ ಹಾಸ್ಟೆಲ್‌ನಿಂದ ಕಾಣೆಯಾಗಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಾಸ್ಟೆಲ್‌ನಲ್ಲಿ ಹೊರಗಡೆ ಕಾಣಿಸಿಕೊಂಡಿದ್ದ ವಿಡಿಯೋ ಸಮೇತ ಆಡಳಿತ ಮಂಡಳಿ ದೂರು ನೀಡಿತ್ತು. ಭಾನುವಾರ ಬೆಳಗ್ಗೆ ಆನೇಕಲ್ಲಿನ ಕಾಳನಾಯಕನಹಳ್ಳಿ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಮಂಗಳೂರಿನಲ್ಲಿ ವಿದ್ಯಾರ್ಥಿನಿ ನಾಪತ್ತೆ – ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾ ಶಂಕೆ?
Advertisement
Advertisement
ಕಾಳನಾಯಕನಹಳ್ಳಿ ಬಳಿಯ ನೀಲಗಿರಿ ತೋಪಿನಲ್ಲಿ ಸುಟ್ಟು ಹಾಕಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಅಲ್ಲದೇ ಆತನ ಬ್ಯಾಗ್ ಹಾಗೂ ಮೊಬೈಲ್ ಶವದ ಪಕ್ಕದಲ್ಲಿಯೇ ಬಿದ್ದಿದೆ. ಯಾರೋ ಕಿಡಿಗೇಡಿಗಳು ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿರುವ ಸಾಧ್ಯತೆಯಿದ್ದು, ಘಟನೆಯಲ್ಲಿ ದೇಹದ ಅರ್ಧ ಭಾಗಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಯುವತಿ ಜೊತೆ ಸಲುಗೆಯಿಂದ ಇದ್ದಿದ್ದಕ್ಕೆ ಪೊಲೀಸರಿಗೆ ಹಣ ಕೊಟ್ಟು ಹಲ್ಲೆ ಮಾಡಿಸಿದ ಆರೋಪ – ಡಿವೈಎಸ್‍ಪಿಗೆ ದೂರು
Advertisement