ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ (Student) ಪಾಠವೂ ಇಲ್ಲ, ಶುಚಿಯಾದ ಬಿಸಿ ಊಟವೂ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಿ.ಕಣಬೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ (School) 1 ರಿಂದ 7ನೇ ತರಗತಿವರೆಗೆ 117 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಶಾಲಾ ಅವಧಿಯಲ್ಲಿ ತರಗತಿಯೊಳಗೆ ಶಿಕ್ಷಕರು ಮೊಬೈಲ್‌ನಲ್ಲಿ ತಲ್ಲೀನರಾಗಿರುವ ವೀಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ. ಶಾಲಾ ಅವಧಿಯಲ್ಲಿ ಪಾಠ ಕಲಿಸುವ ಬದಲು ಮೊಬೈಲ್‌ನಲ್ಲಿ ಮಗ್ನರಾಗಿರುವುದಕ್ಕೆ ಶಿಕ್ಷಕರ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಶಾಲಾ ಅವಧಿಯಲ್ಲಿ ಶಿಕ್ಷಕರು ಮಾಡಿದ್ದೇ ಪಾಠ, ಮಕ್ಕಳು ಆಡಿದ್ದೇ ಆಟ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೊಠಡಿಯೊಳಗಡೆ ಮಕ್ಕಳು ಬೇಕಾಬಿಟ್ಟಿ ಗಲಾಟೆ ಮಾಡುತ್ತಿದ್ದರೂ ಕೂಡ, ಶಿಕ್ಷಕರಾದವರು ಮಕ್ಕಳ ಬಗ್ಗೆ ಕಾಳಜಿ ಇಲ್ಲದಂತೆ ವರ್ತಿಸಿದ್ದಾರೆ. ಇದು ಒಂದೆಡೆಯಾದರೆ ಮತ್ತೊಂದೆಡೆ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಬಿಸಿ ಊಟ ಇಲ್ಲ. ಹುಳ ಬಿದ್ದಿರುವ ಅಕ್ಕಿಯಲ್ಲಿ ಅನ್ನ ಮಾಡಿರುವ ವೀಡಿಯೋ ಕೂಡ ಸ್ಥಳೀಯರೇ ಸೆರೆ ಹಿಡಿದಿದ್ದು, ಸರ್ಕಾರ ಹಾಗೂ ಶಾಲಾಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ವರದಾ ನದಿಯಲ್ಲಿ ಮುಳುಗಿ ಯುವಕ ಸಾವು
ಬಿಸಿ ಊಟ ಕಾರ್ಯಕರ್ತರು ಮಾತನಾಡಿ, ನಮಗೆ ಬರುವುದೇ 3 ಕಾಸು ಸಂಬಳ ನಾವು ಮನೆಯಿಂದ ತಂದು ಮಾಡಲು ಸಾಧ್ಯವೇ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಪೋಷಕರು ಇದು ಸರ್ಕಾರಿ ಶಾಲೆಯ ಅಥವಾ ಖಾಸಗಿ ಶಾಲೆಯ ಎಂದು ಶಾಲಾಡಳಿತ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಟ್ ಆಂಡ್ ರನ್ ಕೇಸ್‌ಗೆ ಟ್ವಿಸ್ಟ್ – ಸಾರ್ವಜನಿಕರು, ಸಿಸಿಟಿವಿ ದೃಶ್ಯಗಳಿಂದ ನಿಜ ಬಯಲಿಗೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k