ಕೊಪ್ಪಳ: ದಸರಾ ಹಬ್ಬದ ದಿನವೇ ಖಾಸಗಿ ಶಾಲಾ ಶಿಕ್ಷಕಿಯೊಬ್ಬರು (Teacher) ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಖಾಸಗಿ ಶಾಲಾ ಶಿಕ್ಷಕಿ ಸಂಗೀತ ಮೇಟಿ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಅ.19 ರಂದು ಕೊಪ್ಪಳಕ್ಕೆ ಹೋಗಿಬರುವುದಾಗಿ ಹೇಳಿ ಸಂಗೀತ ಹೋಗಿದ್ದರು. ಇಂದು ಬೆಳಗ್ಗೆ ವಿಜಯನಗರ ಜಿಲ್ಲೆಯ ಗಡಿ ಭಾಗದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ರಾಜಸ್ಥಾನಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 35 ಟನ್ ಪಡಿತರ ಅಕ್ಕಿ ಜಪ್ತಿ: ಲಾರಿ ತಡೆದು ಸ್ಥಳೀಯರ ಆಕ್ರೋಶ
ಪ್ರಿಯತಮ ಸೇರಿ ಮೂವರನ್ನು ಗಲ್ಲಿಗೇರಿಸಿ
ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿರುವ ಸಂಗೀತ, ಸುಮಾರು 14 ವರ್ಷಗಳಿಂದ ತನ್ನ ಸಂಬಂಧಿ ವಿಕಾಸ್ನನ್ನ ಪ್ರೀತಿ ಮಾಡುತ್ತಿರುವುದಾಗಿ ಉಲ್ಲೇಖಿಸಿದ್ದಾಳೆ. ಪ್ರೀತಿಯ ವಿಚಾರ ಇಬ್ಬರ ಮನೆಯವರಿಗೂ ಗೊತ್ತಿತ್ತು. ಆದರೆ ಮದುವೆ ವಿಚಾರಕ್ಕೆ ವಿಕಾಸ್ ಮನೆಯಲ್ಲಿ ಗೊಂದಲವಿತ್ತು.
ವಿಕಾಸ್ ಸಹೋದರ ವಸಂತ್ ಹಾಗೂ ಆತನ ಪತ್ನಿ ರೇಣುಕಾ ಮದುವೆಗೆ ಅಡ್ಡಿ ಮಾಡುತ್ತಿದ್ದಾರೆ. ಈ ಮೂವರಿಗೂ ಗಲ್ಲು ಶಿಕ್ಷೆ ಆಗಬೇಕು ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಶೋರೂಮ್ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು – ಬೈಕ್ ಸವಾರರಿಗೆ ಗಂಭೀರ ಗಾಯ
