ಮಹಿಳೆಗೆ ಜಸ್ಟ್ ಮೆಸೇಜ್ ಮಾಡಿದ್ದಕ್ಕೆ ಟೈಲರ್ ಹತ್ಯೆ – ಐವರು ಅರೆಸ್ಟ್

Advertisements

ಹಾಸನ: ಮಹಿಳೆಗೆ ಮೆಸೇಜ್ ಮಾಡಿದ ಕಾರಣಕ್ಕೆ ಟೈಲರ್ (Tailor) ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದ ಪ್ರಕರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisements

ಅಕ್ಟೋಬರ್ 13 ರಂದು ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ (Channarayapattana) ತಾಲೂಕಿನ ಜನಿವಾರ ಬಳಿ ಈ ಘಟನೆ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಊಪಿನಹಳ್ಳಿಯ ಟೈಲರ್ ಗಂಗಾಧರ್ ಮೃತದುರ್ದೈವಿ. ತನ್ನ ಪತ್ನಿಗೆ ಮಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಮಹಿಳೆ ಪತಿ ಭರತ್ ಆತನ ನಾಲ್ವರು ಸ್ನೇಹಿತರೊಂದಿಗೆ ಸೇರಿಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿ ಗಂಗಾಧರ್ ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ವಿವಾಹ ಮುಚ್ಚಿಟ್ಟು ಎರಡನೇ ಮದುವೆ – ತಾಳಿಕಟ್ಟೋ ಮುನ್ನವೇ ನಯವಂಚಕನ ಬಣ್ಣ ಕಳಚಿಟ್ಟ ಪತ್ನಿ

Advertisements

ಬಂಧಿತ ಆರೋಪಿಗಳನ್ನು ಭರತ್, ಅಭಿಷೇಕ, ಕುಮಾರ್, ಚಿರಂಜೀವಿ ಮತ್ತು ಅಭಿ ಎಂದು ಗುರುತಿಸಲಾಗಿದ್ದು, ಗಂಗಾಧರ್ ಟೈಲರ್ ಶಾಪ್ ಬಳಿ ಬಂದು ಆತನನ್ನು ಎಳೆದೊಯ್ದು ಜನಿವಾರ ಗ್ರಾಮದ ಬಳಿ ಹಲ್ಲೆ ನಡೆಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗಂಗಾಧರ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ: ಒಬ್ಬಳ ಹಿಂದೆ ಬಿದ್ದ ಇಬ್ಬರು ಹುಡುಗ್ರು – ಪ್ರೀತಿ ವಿಚಾರಕ್ಕೆ ನಡೀತು ಎರಡು ಗ್ಯಾಂಗ್ ಮಧ್ಯೆ ಗುದ್ದಾಟ

ತನ್ನ ಪತ್ನಿಗೆ ಮೆಸೇಜ್, ಫೋನ್ ಮಾಡುತ್ತಾನೆ ಎನ್ನುವ ಕಾರಣಕ್ಕೆ ಗಂಗಾಧರ್ ಜೊತೆಗೆ ಜಗಳ ಮಾಡಿದ್ದ ಭರತ್, ಇದೇ ಕಾರಣಕ್ಕೆ ತನ್ನ ನಾಲ್ವರು ಸ್ನೇಹಿತರ ಜೊತೆ ಸೇರಿ ಹತ್ಯೆ ಮಾಡಿದ್ದು ವಿಪರ್ಯಾಸ ಎಂದೇ ಹೇಳಬಹುದು. ಈ ಘಟನೆ ಚನ್ನರಾಯಪಟ್ಟಣ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.

Advertisements

Live Tv

Advertisements
Exit mobile version