LatestMain PostNational

ಒಬ್ಬಳ ಹಿಂದೆ ಬಿದ್ದ ಇಬ್ಬರು ಹುಡುಗ್ರು – ಪ್ರೀತಿ ವಿಚಾರಕ್ಕೆ ನಡೀತು ಎರಡು ಗ್ಯಾಂಗ್ ಮಧ್ಯೆ ಗುದ್ದಾಟ

ಚೆನ್ನೈ: ಪ್ರೀತಿ ವಿಚಾರಕ್ಕೆ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ತಮಿಳುನಾಡಿನ (Tamil Nadu) ಕಡಲೂರಿನಲ್ಲಿ (Cuddalore) ಖಾಸಗಿ ಕಾಲೇಜು ಒಂದರಲ್ಲಿ ನಡೆದಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವರುಣ್ ಮತ್ತು ಸುಧಾಕರ್ ಎಂಬಾತ ವಿರುಧಾಚಲಂ ಪಟ್ಟಣದ (Virudhachalam town) ಕಾಲೇಜು ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇದೇ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿಯೊಬ್ಬಳನ್ನು ಇಬ್ಬರು ಪ್ರೀತಿಸುತ್ತಿದ್ದರಿಂದ ಇಬ್ಬರ ನಡುವೆ ಸಮಸ್ಯೆ ಶುರುವಾಗಿದೆ. ಇದಕ್ಕಾಗಿ ವರುಣ್ ಒಂದು ಗ್ಯಾಂಗ್ ಕಟ್ಟಿದರೆ, ಸುಧಾಕರ್ ಮತ್ತೊಂದು ಸ್ನೇಹಿತರ ಗ್ಯಾಂಗ್ ಅನನು ಕಟ್ಟಿದ್ದನು. ಒಂದು ಗ್ಯಾಂಗ್ ವರುಣ್‍ಗೆ ಸಪೋರ್ಟ್ ಮಾಡಿದರೆ, ಮತ್ತೊಂದು ಗ್ಯಾಂಗ್ ಸುಧಾಕರ್‌ಗೆ ಬೆಂಬಲಿಸುತ್ತಿತ್ತು. ಇದೀಗ ಪ್ರೀತಿ ವಿಚಾರಕ್ಕೆ ಈ ಎರಡು ಗ್ಯಾಂಗ್ ನಡುವೆ ಹೊಡೆದಾಟ ನಡೆದಿದೆ.

ಅಕ್ಟೋಬರ್ 28 ರಂದು ಕಾಲೇಜು ಬಸ್‍ಗಾಗಿ ಕಾಯುತ್ತಿದ್ದ ವೇಳೆ ವರುಣ್ ಮತ್ತು ಸುಧಾಕರ್ ನಡುವೆ ಹುಡುಗಿ ವಿಚಾರವಾಗಿ ವಾಗ್ವಾದ ನಡೆದಿದೆ. ಈ ವೇಳೆ ಇಬ್ಬರ ಸ್ನೇಹಿತರು ಸೇರಿಕೊಂಡು ಹೊಡೆದಾಡಿಕೊಂಡಿದ್ದಾರೆ. ನಂತರ ಪೊಲೀಸರು ಮಧ್ಯೆ ಪ್ರವೇಶಿ ಎರಡು ಗ್ಯಾಂಗ್ ಜಗಳ ಬಿಡಿಸಿದ್ದಾರೆ. ಇದೀಗ ಆರು ಮಂದಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button