‘ಜಾಕಿ’ (Jackie) ನಟಿ ಭಾವನಾ ಮೆನನ್ (Bhavana Menon) ಬಹುಭಾಷೆಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಆಗಾಗ ಅವರ ವೈಯಕ್ತಿಕ ಬದುಕಿನ ಬಗ್ಗೆ ನಟಿಗೆ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಭಾವನಾ ಬಗ್ಗೆ ಆಗಾಗ ಡಿವೋರ್ಸ್ (Divorce) ಕುರಿತು ವದಂತಿಗಳು ಚರ್ಚೆಯಾಗುತ್ತಲೇ ಇರುತ್ತದೆ. ಈ ಕುರಿತು ನಟಿ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ದೃಷ್ಟಿಬೊಟ್ಟು’ ಸೀರಿಯಲ್ ನಟಿ
ಇತ್ತೀಚಿನ ಸಂದರ್ಶನವೊಂದರಲ್ಲಿ ಭಾವನಾಗೆ ಡಿವೋರ್ಸ್ ವದಂತಿಗಳು ಕೇಳಿ ಬಂದಾಗ ಅದನ್ನು ಹೇಗೆ ಸ್ವೀಕರಿಸುತ್ತೀರಾ? ಎಂದು ಕೇಳಲಾಗಿದೆ. ಅದಕ್ಕೆ ನಟಿ, ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವಂತಹ ಜೋಡಿ ನಾವಲ್ಲ. ಚಿನ್ನ, ಮುದ್ದು ಅಂತ ಕ್ಯಾಪ್ಷನ್ ಕೊಡಲ್ಲ. ಏನಾದರೂ ನಾನು ಫೋಟೋವೊಂದನ್ನು ಪೋಸ್ಟ್ ಮಾಡಿದರೆ, ಅಯ್ಯೋ ಇದು ಹಳೆಯ ಫೋಟೋ ಎನ್ನುತ್ತಾರೆ. ನಿಮ್ಮ ನಡುವೆ ಸಮಸ್ಯೆ ಇದ್ಯಾ? ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಾರೆ. ಅದಕ್ಕೆ ನಾನು ಪ್ರತಿ ನಿತ್ಯ ನಾವು ಫೋಟೋ ತೆಗೆದುಕೊಳ್ಳಲ್ಲ ಎನುತ್ತೇನೆ ಎಂದಿದ್ದಾರೆ.
ಮನೆಯಲ್ಲಿ ಅಮ್ಮ, ಅಣ್ಣ ಎಲ್ಲರೂ ಇದ್ದಾರೆ. ಎಲ್ಲರೊಂದಿಗೆ ಪ್ರತಿದಿನ ಫೋಟೋ ಕ್ಲಿಕ್ಕಿಸಿಕೊಂಡು ಕೂರೋಕೆ? ಆಗುತ್ತಾ ಎಂದಿದ್ದಾರೆ. ನನ್ನ ವೈಯಕ್ತಿಕ ಜೀವನವನ್ನು ಪಬ್ಲಿಕ್ ಮಾಡಿ ಹೇಳಿಕೊಳ್ಳುವಂತಹ ವ್ಯಕ್ತಿ ನಾನಲ್ಲ. ನಾನು ಮತ್ತು ನವೀನ್ ಚೆನ್ನಾಗಿದ್ದೇವೆ. ಸದ್ಯಕ್ಕೆ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ನಾವು ಚೆನ್ನಾಗಿದ್ದೇವೆ ಎಂದು ಪ್ರೂವ್ ಮಾಡಲು ಯಾವಾಗಲೂ ಫೋಟೋ ಹಾಕ್ತಾ ಕೂರುವುದಕ್ಕೆ ಆಗಲ್ಲ ಎಂದು ಡಿವೋರ್ಸ್ ವದಂತಿಗೆ ನಟಿ ತೆರೆ ಎಳೆದಿದ್ದಾರೆ.
ಅಂದಹಾಗೆ, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ರೋಮಿಯೋ’ (Romeo Film) ಸಿನಿಮಾದ ನಿರ್ಮಾಪಕ ನವೀನ್ (Naveen) ಜೊತೆ ಭಾವನ್ ಮೆನನ್ 2018ರಲ್ಲಿ ಮದುವೆಯಾದರು.
ದಿ ಡೋರ್, ಶಿವಣ್ಣ ಮತ್ತು ಡಾಲಿ ಧನಂಜಯ ಜೊತೆ ಉತ್ತರಕಾಂಡ, ಪಿಂಕ್ ನೋಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಭಾವನ್ ಮೆನನ್ ಬ್ಯುಸಿಯಾಗಿದ್ದಾರೆ.
ಇನ್ನೂ ಬಚ್ಚನ್, ಜಾಕಿ, 99, ಟಗರು, ಜಾಕಿ, ಮೈತ್ರಿ, ಭಜರಂಗಿ 2, ಯಾರೇ ಕೂಗಾಡಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಭಾವನಾ ನಟಿಸಿದ್ದಾರೆ.