Wednesday, 18th September 2019

Recent News

1 year ago

ಅಮಿತ್ ಶಾ ಹೆಲಿಪ್ಯಾಡ್ ಗಾಗಿ ಅಮಾಯಕನ ಹೊಲ ನಾಶಗೊಳಿಸಿದ ಬಿಜೆಪಿಗರು!

ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಲಿಪ್ಯಾಡ್ ಗಾಗಿ ಅಮಾಯಕ ರೈತರೊಬ್ಬರ ಹೊಲ ನಾಶ ಮಾಡಿರೋ ಆರೋಪವೊಂದು ಕೇಳಿ ಬಂದಿದೆ. ಬಿಜೆಪಿಯವರು ಜಗದೀಶ್ ಕರಡಿ ಎಂಬ ರೈತರ ಹೊಲದ ಬದುಗಳನ್ನು ಒಡೆದು ಜಾಗ ಸಮ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ರೈತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ ನಗರದ ನಾಗೂರು ರಸ್ತೆ ಬಳಿಯ ಹೆಲಿಪ್ಯಾಡ್ ಬಳಿ ಸರ್ವೆ ನಂಬರ್ 111 ರ ಹೊಲವನ್ನು ಬಿಜೆಪಿಯವರು ನಾಶ ಮಾಡಿದ್ದಾರೆ. ಹುನಗುಂದ ಶಾಸಕ ದೊಡ್ಡನಗೌಡ […]

2 years ago

ಬೆಂಗ್ಳೂರಲ್ಲಿ ಟೆಂಪೊಗೆ ಮಿನಿ ಬಸ್ ಡಿಕ್ಕಿ- ಮೂವರಿಗೆ ಗಂಭೀರ ಗಾಯ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ 407 ಟೆಂಪೊಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನವರಂಗ್ ಸಿಗ್ನಲ್ ಬಳಿ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೊ ಪಲ್ಟಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಬಸ್ ಮಲ್ಲೇಶ್ವರಂನಿಂದ ವಿಜಯನಗರಕ್ಕೆ ಹೋಗುತ್ತಿತ್ತು ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ....

ಪ್ರತಿಪಕ್ಷಗಳು ಶಾಂತ ರೀತಿಯಲ್ಲಿ ಹೋರಾಟ ಮಾಡುವುದು ತಪ್ಪೇ: ಸರ್ಕಾರಕ್ಕೆ ಬಿಎಸ್‍ವೈ ಪ್ರಶ್ನೆ

2 years ago

ಮಂಗಳೂರು: ನಗರದಲ್ಲಿ ಸಮಾವೇಶ ಬೇಕಾದ್ರೆ ನಡೆಸಲಿ. ಆದ್ರೆ ಬೈಕ್ ರ‍್ಯಾಲಿ ನಡೆಸಬಾರದು ಅಂತ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸರ್ಕಾರದ ನಡೆಯ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಬಂದೂಕುಗಳನ್ನಿಟ್ಟುಕೊಂಡು ಮಂಗಳೂರಿಗೆ ಬರ್ತಾ ಇದ್ದೇವಾ ಎಂದು...

ಶೌಚಾಲಯ ನಿರ್ಮಿಸಲು ವಿರೋಧ- ತಾನೇ ಸಲಿಕೆ ಹಿಡಿದು ಗುಂಡಿ ತೆಗೆಯಲು ಮುಂದಾದ ದಾವಣಗೆರೆ ಸಿಇಓ

2 years ago

ದಾವಣಗೆರೆ: ಗ್ರಾಮದಲ್ಲಿ ಶೌಚಾಲಯ ಕಟ್ಟಿಕೊಳ್ಳಲು ವಿರೋಧ ವ್ಯಕ್ತಪಡಿಸುತ್ತಿದ್ದರಿಂದ ಸ್ವತಃ ಸಿಇಓ ಅವರೇ ಸಲಿಕೆ ಹಿಡಿದು ಶೌಚಾಲಯ ಗುಂಡಿ ತೆಗೆಯಲು ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಕ್ಟೋಬರ್ 2ರ ಒಳಗೆ ಬಯಲು ಬಹಿರ್ದೆಸೆ ಜಿಲ್ಲೆಯನ್ನಾಗಿ ಮಾಡಬೇಕೆಂದು...

2 ಹೆಣ್ಣುಮಕ್ಕಳ ಜೊತೆ ತನ್ನನ್ನು ಬೀದಿಪಾಲು ಮಾಡಿದ್ರೂ ಪತಿ ಬೇಕೆಂದು ಪತ್ನಿ ಕಣ್ಣೀರು!

2 years ago

ವಿಜಯಪುರ: ಗಂಡು ಮಗು ಆಗಲಿಲ್ಲ ಎಂದು ವ್ಯಕ್ತಿಯೊಬ್ಬ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಬೀದಿ ಪಾಲು ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ಭಜಂತ್ರಿ ಕಾಲೋನಿ ನಿವಾಸಿಯಾದ ಕಾವ್ಯ ಮತ್ತು ಪ್ರಭು 2011 ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇವರಿಗೆ...

ದೇಶ ಕಟ್ಟಿದ್ದು, ಬೆಳೆಸಿದ್ದು ಕಾಂಗ್ರೆಸ್, ಸರ್ಕಾರದ ಅಭಿವೃದ್ಧಿಗೆ ಜನ್ರ ಮತ: ಆಂಜನೇಯ

2 years ago

ಬೆಂಗಳೂರು: ವಿಧಾನಸಭಾ ಕಲಾಪ ನಡೆಯುತ್ತಿದ್ದ ವೇಳೆಯಲ್ಲೇ ಕಾಂಗ್ರೆಸ್ ಮೇಲೆ ಸಾಕಷ್ಟು ಅಪಪ್ರಚಾರ ನಡೆಸಲಾಗಿತ್ತು. ಜನರು ಇದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ. ಜನ ಯಾವುದಕ್ಕೂ ಕಿವಿಗೊಡದೆ ಕಾಂಗ್ರೆಸ್‍ಗೆ ಮತಹಾಕಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರದ ಅಭಿವೃದ್ಧಿ ಗೆ ಮತದಾರರು ಮಣೆ ಹಾಕಿದ್ದಾರೆ ಅಂತಾ ಸಚಿವ...

ಸುಡುಬಿಸಿಲಿನಿಂದ ಪಾರಾಗಲು ರಾಯಚೂರಿನ ವೈದ್ಯಾಧಿಕಾರಿ ಮಾಡಿರೋ ಐಡಿಯಾ ಇದು

2 years ago

ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಜನ ನಾನಾ ದಾರಿಗಳನ್ನ ಹುಡುಕಿಕೊಳ್ಳುತ್ತಿದ್ದಾರೆ. ತಲೆಗೆ ಟೋಪಿ ಹಾಕಿಕೊಳ್ಳುವ ಜೊತೆಗೆ ತಮ್ಮ ವಾಹನಗಳಿಗೂ ಟೋಪಿ ಹಾಕಿ ಸವಾರಿ ಮಾಡುತ್ತಿದ್ದಾರೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಿಸುತ್ತಿದ್ದಾರೆ. ರಾಯಚೂರು ಜಿಲ್ಲಾ ಆಯುಷ್ ವೈದ್ಯಾಧಿಕಾರಿ...