ಉಡುಪಿ: ಮೌಲ್ವಿಯೊಬ್ಬನ ಕಾಮಪ್ರಸಂಗ ಬೀದಿಗೆ ಬಂದಿದೆ. ಊರಿಗೆಲ್ಲಾ ಬುದ್ಧಿ ಹೇಳುತ್ತಿದ್ದ ಮೌಲ್ವಿಯೊಬ್ಬ ಪರಸ್ತ್ರೀ ಸಂಗ ನಡೆಸಲು ಹೋಗಿ ಊರ ಮಂದಿಯಿಂದ ಧರ್ಮದೇಟಿಗೆ ಒಳಗಾಗಿದ್ದಾನೆ.
ಜಮಾತ್ ಸದಸ್ಯರೇ ಸೇರಿ ಮೌಲ್ವಿ ಖತೀಬ್ ನ ಚಳಿ ಬಿಡಿಸಿದ್ದಾರೆ. ಈ ವಿಡಿಯೋ ತುಣುಕು ಇದೀಗ ವಾಟ್ಸಪ್, ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.
Advertisement
Advertisement
ಉಡುಪಿಯ ಕಾಪು ತಾಲೂಕಿನ ಬೆಳಪು ಮಸೀದಿಯಲ್ಲಿ ಈ ಘಟನೆ ನಡೆದಿದೆ. ಕೆಲವು ತಿಂಗಳ ಹಿಂದಷ್ಟೇ ಬೆಳಪು ಮಸೀದಿಗೆ ಖತೀಬ್ ಮುಖ್ಯ ಧರ್ಮಗುರುವಾಗಿ ನೇಮಕಗೊಂಡಿದ್ದ. ನಂತರ ಈತ ವಿವಾಹಿತ ಮಹಿಳೆಯೊಬ್ಬರ ಜೊತೆ ಸಖ್ಯ ಬೆಳೆಸಿದ್ದ. ಧಾರ್ಮಿಕ ವಿಚಾರ ಹೇಳುತ್ತಲೇ ಆಕೆಯನ್ನು ಪುಸಲಾಯಿಸಿ ಮಂಗಳೂರಿನ ಲಾಡ್ಜ್ ವೊಂದಕ್ಕೆ ಕರೆದೊಯ್ದಿದ್ದ. ಅಲ್ಲಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ದುರಾದೃಷ್ಟಕ್ಕೆ ಆ ಮಹಿಳೆಯ ಸಂಬಂಧಿಕರೊಬ್ಬರು ಇವರನ್ನು ಕಂಡಿದ್ದು ತಕ್ಷಣ ಬೆಳಪು ಮಸೀದಿಯ ಆಡಳಿತ ಮಂಡಳಿಯವ್ರಿಗೆ ತಿಳಿಸಿದ್ದಾರೆ.
Advertisement
ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡಬಾರದು, ಹೆಣ್ಣು ಮಕ್ಕಳು ಹೇರ್ ಸ್ಟ್ರೈಟ್ನಿಂಗ್ ಮಾಡಬಾರದು, ಮೇಕಪ್ ಮಾಡಬಾರದೆಂದು ಈತ ಉಪದೇಶ ಮಾಡುತ್ತಿದ್ದ. ಬಾಯಲ್ಲಿ ಉಪದೇಶ ಮಾಡುವ ನಿಮ್ಗೆ ಪರಸ್ತ್ರೀ ಜೊತೆ ಕಾಮದಾಟ ನಡೆಸಲು ನಾಚಿಕೆಯಾಗೋದಿಲ್ವೇ ಅಂತ ಪ್ರಶ್ನಿಸಿ ಜಮಾತ್ ಸದಸ್ಯರು ಧರ್ಮದೇಟು ನೀಡಿದ್ದಾರೆ.
Advertisement
ಸದ್ಯ ಬೆಳಪು ಮಸೀದಿಯಿಂದ ಮೌಲ್ವಿಯನ್ನು ಹೊರದಬ್ಬಲಾಗಿದೆ. ಈ ಕುರಿತು ಇಲ್ಲಿಯವರೆಗೆ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.