Connect with us

Dakshina Kannada

ಪ್ರತಿಪಕ್ಷಗಳು ಶಾಂತ ರೀತಿಯಲ್ಲಿ ಹೋರಾಟ ಮಾಡುವುದು ತಪ್ಪೇ: ಸರ್ಕಾರಕ್ಕೆ ಬಿಎಸ್‍ವೈ ಪ್ರಶ್ನೆ

Published

on

ಮಂಗಳೂರು: ನಗರದಲ್ಲಿ ಸಮಾವೇಶ ಬೇಕಾದ್ರೆ ನಡೆಸಲಿ. ಆದ್ರೆ ಬೈಕ್ ರ‍್ಯಾಲಿ ನಡೆಸಬಾರದು ಅಂತ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸರ್ಕಾರದ ನಡೆಯ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಬಂದೂಕುಗಳನ್ನಿಟ್ಟುಕೊಂಡು ಮಂಗಳೂರಿಗೆ ಬರ್ತಾ ಇದ್ದೇವಾ ಎಂದು ಪ್ರಶ್ನಿಸಿದ್ರು. ಮೋಟಾರ್ ಬೈಕ್ ನಲ್ಲಿ ಬಂದ್ದೇವೆ. ಯಾಕಂದ್ರೆ ರಾಜ್ಯದಲ್ಲಿ ಹಲವಾರು ಹಿಂದೂಗಳ ಕೊಲೆಯಾಗಿದೆ. ಆದ್ರೆ ಸರ್ಕಾರ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದ್ದು, ಮನಬಂದಂತೆ ಆಡಳಿತ ನಡೆಸುತ್ತಿದೆ. ಈ ರಾಜ್ಯದ ಉದ್ದಗಲಕ್ಕೂ ನಮ್ಮ ಕಾರ್ಯಕರ್ತರು ಮೋಟಾರ್ ಬೈಕಿನಲ್ಲಿ ಬರುತ್ತೇವೆ ಅಂದಾಗ ಅದನ್ನು ತಡೆಯುತ್ತಾರೆ. ಇಲ್ಲಿ ಮೆರವಣಿಗೆ ಮಾಡ್ತೀವಿ ಅಂದ್ರೆ ಸೆಕ್ಷನ್ ಹಾಕಿದ್ದೀವಿ ಅಂತಾರೆ. ಹಾಗಾದ್ರೆ ಪ್ರತಿಪಕ್ಷಗಳ ಕರ್ತವ್ಯವೇನು? ನಾವು ನಮ್ಮ ಹೋರಾಟ ಮಾಡುವುದು ಬೇಡ್ವಾ? ಕಾನೂನು ಸುವ್ಯವಸ್ಥೆಯನನ್ನು ಹೋರಾಟ ಮಾಡಿದಾಗ ಅಥವಾ ಅದನ್ನು ಅಡ್ಡಿ ಮಾಡಿದಾಗ ಈ ರೀತಿ ಸರ್ಕಾರ ವರ್ತಿಸುವುದು ಸರಿಯಲ್ಲ. ಇಲ್ಲಿ ನಾವು ಅದನ್ನು ಮಾಡಲು ಹೊರಟಿಲ್ಲವಲ್ಲ. ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಅಂದ್ರೆ ಸರ್ಕಾರ ಬದುಕಿದೆಯೋ ಸತ್ತಿದೆಯೋ? ಪೊಲೀಸ್ ಇಲಾಖೆ ಇದೆಯೋ ಇಲ್ಲವೋ? ಅಂತ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಮಾತನ್ನು ಮಾನ್ಯ ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ಹೇಳಲು ಇಚ್ಚಿಸುತ್ತೇನೆ. ಅದೇನಂದ್ರೆ ನೀವು ವಿರೋಧ ಪಕ್ಷಗಳ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಬಹಳ ದಿನ ನಡೆಯಲ್ಲ. ಕಾನೂನು ಚೌಕಟ್ಟಿನಲ್ಲಿ ಯಾರನ್ನು ಬೇಕಾದ್ರೂ ಬಂಧಿಸಬಹುದು. ಯಾರ ಮೇಲೆ ಬೇಕಾದ್ರೂ ಕ್ರಮ ತೆಗೆದುಕೊಳ್ಳಬಹುದು. ಅದಕ್ಕೆ ಅಡ್ಡಿ ಮಾಡಿ ಅಂತ ನಾನು ಹೇಳುವುದಿಲ್ಲ. ಅದು ನಿಮಗೆ ಬಿಟ್ಟ ವಿಚಾರ. ನಾಡಿನ ಆರೂವರೆ ಕೋಟಿ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಅಂದ್ರು.

ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಿತೂರಿಯಿಂದ ಈ ಘಟನಾವಳಿಗಳು ನಡೆಯುತ್ತಿವೆ. ಈ ರೀತಿಯ ಕೊಲೆಗಳು ಮುಂದುವರೆಯಬಾರದು. ಹೀಗಾಗಿ ಅವರನ್ನು ತಕ್ಷಣ ಸಚಿವ ಸಂಪುಟದಿಂದ ಕೈ ಬಿಡಬೇಕು ಅನ್ನೋದು ನಮ್ಮ ಉದ್ದೇಶ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯಾಯ್ತು ಯಾರು ಹೊಣೆ ಇದಕ್ಕೆ? ಈ ಸರ್ಕಾರದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟಿದೆ ಎನ್ನುವುದಕ್ಕೆ ಕಲಬುರ್ಗಿ ಹತ್ಯೆಯ ಬಳಿಕ ಇದೀಗ ಗೌರಿ ಹತ್ಯೆ ಪ್ರತ್ಯಕ್ಷ ಸಾಕ್ಷಿ. ಗಣಪತಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಮತ್ತೊಮ್ಮೆ ನೀಡಿದ್ದಾರೆ. ಅಲ್ಲಿ ಸುಪ್ರೀಂ ಕೋರ್ಟ್ ಕೂಡಾ ಛೀಮಾರಿ ಹಾಕಿದೆ. ನೀವು ಈ ಸಂದರ್ಭಗಳಲ್ಲಿ ಸರಿಯಾಗಿ ನಡೆದುಕೊಂಡಿಲ್ಲ. ಸಿಐಡಿ ತನಿಖೆ ಸರಿಯಾದ ರೀತಿಯಲ್ಲಿ ಆಗಿಲ್ಲ. ಅದಕ್ಕೊಸ್ಕರ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸವುದಾಗಿ ಹೇಳಿದೆ ಅಂತ ಸರ್ಕಾರದ ವಿರುದ್ಧ ಗುಡುಗಿದ್ರು.

ಭ್ರಷ್ಟ ಸಿಎಂ ಸರ್ಕಾರವನ್ನು ಹಾಗೂ ತೂಘಲಕ್ ದರ್ಬಾರನ್ನು ಕೊನೆಗೊಳಿಸುವವರೆಗೆ ನಮ್ಮ ಹೋರಾಟ ನಡೆಯುತ್ತದೆ ಅಂತ ಬಿಎಸ್ ವೈ ಎಚ್ಚರಿಸಿದರು.

Click to comment

Leave a Reply

Your email address will not be published. Required fields are marked *

www.publictv.in