Recent News

5 months ago

ಶಿವಸೇನೆ ಜೊತೆ ಮೈತ್ರಿ ಇಲ್ಲ – ಎಲ್ಲ 288 ಕ್ಷೇತ್ರಗಳಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ?

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಎಲ್ಲ 288 ಕ್ಷೇತ್ರಗಳಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಈ ಸಂದರ್ಭದಲ್ಲೇ ವಿಧಾನಸಭಾ ಚುನಾವಣೆಯ ಸೀಟ್ ಸಹ ಹಂಚಿಕೆಯಾಗಿತ್ತು. ಆದರೆ ಈಗ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿದೆ ಎಂದು ಆಂಗ್ಲ ವಾಹಿನಿ ವರದಿ ಮಾಡಿದೆ. ಬಿಜೆಪಿ ಮತ್ತು ಶಿವಸೇನೆ 132 ಸ್ಥಾನಗಳಲ್ಲಿ ಸ್ಪರ್ಧಿಸಲು ಮಾತುಕತೆ ನಡೆದಿತ್ತು. ಇದರಲ್ಲಿ ಬಿಜೆಪಿಯ 122 ಮಂದಿ ಸ್ಪರ್ಧಿಸಿದರೆ ಉಳಿದ 10 ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸೇರ್ಪಡೆಯಾದವರಿಗೆ […]

6 months ago

ಆಪರೇಷನ್ ಕಮಲ ನಿಂತಿಲ್ಲ – ಮತ್ತೆ 8 ಶಾಸಕರ ರಾಜೀನಾಮೆ ಸಾಧ್ಯತೆ

ಬೆಂಗಳೂರು: 15 ಶಾಸಕರು ರಾಜೀನಾಮೆ ನೀಡಿದ್ದರೂ ಮತ್ತಷ್ಟು ದೋಸ್ತಿ ಪಕ್ಷದ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ. ಹೌದು. ರಾಜೀನಾಮೆ ನೀಡಿದ ಶಾಸಕರ ಪೈಕಿ ಹಳೆ ಮೈಸೂರು ಭಾಗದವರು ಇದ್ದಾರೆ. ಈ ಭಾಗದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಉಪಚುನಾವಣೆ ನಡೆದರೆ ಇಲ್ಲಿ ಜಯಗಳಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಉತ್ತರ ಕರ್ನಾಟಕ ಭಾಗದ 8 ಶಾಸಕರನ್ನು ಸೆಳೆಯಲು...

ನನ್ನ, ಆನಂದ್ ಸಿಂಗ್ ಗಲಾಟೆಯಿಂದ ಮೂರನೇಯವರಿಗೆ ಲಾಭ: ಕಂಪ್ಲಿ ಗಣೇಶ್

8 months ago

ಬಳ್ಳಾರಿ: ನನ್ನ ಅಮಾನತು ವಾಪಸ್ ಪಡೆಯೋದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು, ಒಂದು ವೇಳೆ ಅಮಾನತು ವಾಪಸ್ ಪಡೆಯದಿದ್ದರೆ ಕ್ಷೇತ್ರದ ಮುಖಂಡರ, ಕಾರ್ಯಕರ್ತರ ಮತ್ತು ಜನರ ನಿರ್ಧಾರಕ್ಕೆ ಬದ್ಧ ಎಂದು ಹೇಳುವ ಶಾಸಕ ಜೆ.ಎನ್.ಗಣೇಶ್ ಹೊಸಬಾಂಬ್ ಸಿಡಿಸಿದ್ದಾರೆ. ಅಲ್ಲದೇ ನನ್ನ ಹಾಗೂ ಆನಂದ್...

ಕೋಲಾರ ಸಂಸದ ಮುನಿಸ್ವಾಮಿಗೆ ಬಿಸಿ ಮುಟ್ಟಿಸಿದ ಆಯೋಗ

8 months ago

ಕೋಲಾರ: ಈ ಬಾರಿ ಲೊಕಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಿಂದ ನೂತನ ಸಂಸದರಾಗಿ ಆಯ್ಕೆಯಾದ ಎಸ್ ಮುನಿಸ್ವಾಮಿ ಅವರಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದೆ. ಜಿಲ್ಲೆಯಲ್ಲಿ ಲೋಕಸಭಾ ಸಮರ ಮುಗಿದಿದ್ದು, ಈಗ ಪುರಸಭೆ ಚುನಾವಣಾ ಕಾವು ಹೆಚ್ಚಾಗಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರವನ್ನು...

ಚಿಂಚೋಳಿಯಲ್ಲಿ ಲಿಂಗಾಯತರು ಯಾರೂ ಬಿಜೆಪಿಗೆ ವೋಟ್ ಹಾಕಿಲ್ಲ- ಚಿಂಚನಸೂರ್

8 months ago

ಕಲಬುರಗಿ: ಚಿಂಚೋಳಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅವಿನಾಶ್ ಜಾಧವ್ ಅವರಿಗೆ ಲಿಂಗಾಯತರು ಮತ ಹಾಕಿಲ್ಲ ಎಂದು ಬಾಬುರಾವ್ ಚಿಂಚನಸೂರ್ ಅವರು ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರು ಉಮೇಶ್ ಜಾಧವ್ ಅವರಿಗೆ 14 ಸಾವಿರ...

ಸ್ಪೀಕರ್‌ಗೆ ರಾಜೀನಾಮೆ ನೀಡಬೇಕು, ಮಾಧ್ಯಮಗಳ ಮುಂದೆಯಲ್ಲ: ಪ್ರಜ್ವಲ್‍ಗೆ ಪ್ರೀತಂಗೌಡ ಟಾಂಗ್

8 months ago

– ದೇವೇಗೌಡರನ್ನು ಹಾಡಿ ಹೊಗಳಿದ ಶಾಸಕರು ಹಾಸನ: ನೂತನ ಸಂಸದರು ರಾಜೀನಾಮೆಗೂ ಮುನ್ನ ಪ್ರಮಾಣ ವಚನ ಸ್ವೀಕರಿಸಬೇಕು. ಅಷ್ಟೇ ಅಲ್ಲ ರಾಜೀನಾಮೆಯನ್ನು ಸ್ಪೀಕರ್‍ಗೆ ರಾಜೀನಾಮೆ ನೀಡಬೇಕೆ ಹೊರತು ಮಾದ್ಯಮಗಳ ಮುಂದಲ್ಲ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ, ಸಂಸದ ಪ್ರಜ್ವಲ್ ರೇವಣ್ಣ...

ಸುಮಲತಾ ಅಭಿನಂದನಾ ಫ್ಲೆಕ್ಸ್​ನಲ್ಲಿ ಮಾಜಿ ಸಿಎಂ ಜೊತೆ ಕೈ ನಾಯಕರ ಫೋಟೋ

8 months ago

ಮಂಡ್ಯ: ಲೋಕಸಭಾ ಕ್ಷೇತ್ರಕ್ಕೆ ನೂತನವಾಗಿ ಸಂಸದೆಯಾಗಿ ಆಯ್ಕೆಯಾದ ಸುಮಲತಾ ಅಂಬರೀಶ್‍ಗೆ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್​ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರ ಫೋಟೋಗಳು ರಾರಾಜಿಸುತ್ತಿದೆ. ಮಂಡ್ಯ ನಗರದ ವಿವಿಧೆಡೆ ಅಳವಡಿಸಿರುವ ನೂತನ ಸಂಸದೆ ಸುಮಲತಾ ಅವರಿಗೆ ಶುಭಾಶಯ ಕೋರಿ ಫ್ಲೆಕ್ಸ್ ಅಳವಡಿಸಲಾಗಿದೆ....

ಮನೆಯಲ್ಲಿದ್ದವರು 9 ಮಂದಿ, ಬಂದಿದ್ದು 5 ಮತ ಮಾತ್ರ – ಕಣ್ಣೀರಿಟ್ಟ ಅಭ್ಯರ್ಥಿ

8 months ago

ಚಂಡೀಗಢ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೂ 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.50ರಷ್ಟು ಮತಗಳನ್ನು ಪಡೆದಿದೆ. ಆದರೆ ಪಂಜಾಬ್ ರಾಜ್ಯದಲ್ಲಿ ಅಭ್ಯರ್ಥಿಯೊಬ್ಬರು ಕೇವಲ 5 ಮತಗಳನ್ನು ಪಡೆದಿದ್ದು, ಕಣ್ಣೀರು ಹಾಕಿದ್ದಾರೆ. ನೀತು ಶುಟ್ಟರ್ನ್ ವಾಲಾ ಕಣ್ಣೀರು ಹಾಕಿದ ಅಭ್ಯರ್ಥಿ....