Connect with us

Bollywood

ಸನ್ನಿ ಲಿಯೋನ್ ಜೊತೆ ಹಾಟ್ ಸೀನ್ ಗಳಲ್ಲಿ ಅರ್ಬಾಜ್ ಖಾನ್-ರಿಲೀಸ್ ಆಯ್ತು ಟ್ರೇಲರ್

Published

on

ಮುಂಬೈ: ಬಾಲಿವುಡ್ ನ ಮಾದಕ ಬೆಡಗಿ ಸನ್ನಿ ಲಿಯೋನ್ ಜೊತೆ ಮೊದಲ ಬಾರಿಗೆ ಅರ್ಬಾಜ್ ಖಾನ್ ಸಖತ್ ಹಾಟ್ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದು, `ತೇರಾ ಇಂತಜಾರ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಟ್ರೇಲರ್ ನಲ್ಲಿ ಸನ್ನಿ ಮತ್ತು ಅರ್ಬಾಜ್ ನಡುವಿನ ಹಾಟ್ ಆ್ಯಂಡ್ ಸೆಕ್ಸಿ ಸೀನ್‍ಗಳ ಕೆಮಿಸ್ಟ್ರಿ ವರ್ಕೌಟ್ ಆಗಿದೆ.

ಸನ್ನಿ ಲಿಯೋನ್ ಬಹುದಿನಗಳ ನಂತರ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೇರಾ ಇಂತಜಾರ್ ಸಿನಿಮಾದಲ್ಲಿ ಸನ್ನಿಯೊಂದಿಗೆ ಅರ್ಬಾಜ್ ಖಾನ್ ಬೋಲ್ಡ್ ಆಗಿ ನಟಿಸುವುದರ ಜೊತೆಗೆ ಕೆಲವು ಕಡೆ ಲಿಪ್ ಲಾಕ್ ಸಹ ಮಾಡಿದ್ದಾರೆ. ಎಂದಿನಂತೆ ಸನ್ನಿ ತಮ್ಮ ಮೈಮಾಟದ ಮೂಲಕ ಅಭಿಮಾನಿ ಬಳಗವನ್ನು ಸಿನಿಮಾದತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಸಿನಿಮಾದಲ್ಲಿ ಸನ್ನಿ ಮತ್ತು ಅರ್ಬಾಜ್ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸುತ್ತಿರುತ್ತಾರೆ. ಇದ್ದಕ್ಕಿದಂತೆ ನಾಯಕ ನಟ ಅರ್ಬಾಜ್ ಕಾಣೆಯಾಗುತ್ತಾನೆ. ಕಾಣೆಯಾದ ಬಳಿಕ ಅರ್ಬಾಜ್ ಕೊಲೆಯೂ ನಡೆಯುತ್ತದೆ. ಪ್ರಿಯತಮನ ಕೊಲೆಯ ರಹಸ್ಯವನ್ನು ಬೇಧಿಸುವಲ್ಲಿ ಕಥಾ ನಾಯಕಿ ಸಕ್ರೀಯಳಾಗುತ್ತಾಳೆ. ಕೊಲೆಯ ರಹಸ್ಯವನ್ನು ತಿಳಿಯಲು ನಾಯಕಿ ಅನುಭವಿಸುವ ತೊಂದರೆಗಳನ್ನು ಟ್ರೇಲರ್ ನಲ್ಲಿ ನೋಡಬಹುದಾಗಿದೆ.

ಸನ್ನಿ ಮತ್ತು ಅರ್ಬಾಜ್ ಜೊತೆ ಸುಧಾ ಚಂದ್ರನ್, ಸಲಿಲ್ ಅಂಕೋಲಾ, ಋಚಾ ಶರ್ಮಾ, ಗೌಹರ್ ಖಾನ್, ಹನೀಫ್ ನೊಯಿಡಾ, ಭಾನಿ ಸಿಂಹ ಮತ್ತು ಆರ್ಯ ಬಬ್ಬರ್ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾ ಹೊಂದಿದೆ. ಸಿನಿಮಾಗೆ ಅಮನ್ ಮೆಹ್ತಾ ಮತ್ತು ಬಿಜಲ್ ಮೆಹ್ತಾ ಬಂಡವಾಳ ಹೂಡಿದ್ದು, ರಾಜೀವ್ ವಾಲಿಯಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ತೇರಾ ಇಂತಜಾರ್ ರೋಮ್ಯಾಂಟಿಕ್ ಮತ್ತು ಸಸ್ಪೆನ್ಸ್ ಕಥಾ ಹಂದರವನ್ನು ಹೊಂದಿದ್ದು, ನವೆಂಬರ್ 24ರಂದು ದೇಶಾದದ್ಯಂತ ತೆರೆಕಾಣಲಿದೆ.

Click to comment

Leave a Reply

Your email address will not be published. Required fields are marked *