Bengaluru CityDistrictsKarnatakaLatestLeading NewsMain Post

ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ಅಲ್ಲ, ಚಿಕನ್ ಪಾಕ್ಸ್: ಸುಧಾಕರ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ನೆಗೆಟೀವ್ ಎಂದು ದೃಢಪಟ್ಟಿದ್ದು, ಅವರಿಗೆ ಚಿಕನ್ ಪಾಕ್ಸ್ ಇರುವುದು ಪತ್ತೆ ಆಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಆಫ್ರಿಕಾ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ಇರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಹಿನ್ನೆಲೆ ಪುಣೆಗೆ ರಿಪೋರ್ಟ್ ರವಾನೆ ಮಾಡಲಾಗಿತ್ತು. ಇದೀಗ ಪುಣೆಯಿಂದ ರಿಪೋರ್ಟ್ ಹೊರಬಿದ್ದಿದ್ದು, ಬೆಂಗಳೂರಿನ ವ್ಯಕ್ತಿಗೆ ಮಂಕಿಪಾಕ್ಸ್ ಇಲ್ಲವೆಂದು ದೃಢವಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಬೆಂಗಳೂರಿಗೆ ಬಂದಿದ್ದ ಇಥಿಯೋಪಿಯಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈಗ ಅವರ ಪರೀಕ್ಷಾ ವರದಿಯಲ್ಲಿ ಮಂಕಿಪಾಕ್ಸ್ ನೆಗಟೀವ್ ಎಂದು ಧೃಢಪಟ್ಟಿದ್ದು, ಚಿಕನ್ ಪಾಕ್ಸ್ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾಕ್ ಪ್ರಧಾನಿಗೆ ಸಮನ್ಸ್ ಜಾರಿ

ರಾಜ್ಯದಲ್ಲಿ ಮಂಕಿಪಾಕ್ಸ್ ತಡೆಗಟ್ಟುವ ಸೋಂಕು ಕಾಣಿಸಿಕೊಂಡಿದೆ. ದೇಶಗಳಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ ಮತ್ತು ದುಗ್ಧರಸ ಗ್ರಂಥಿಗಳ ಊತ ಮುಂತಾದ ಲಕ್ಷಣಗಳ ಪತ್ತೆಗಾಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಲಾಲ್, ಜಟ್ಕಾ ಜಟಾಪಟಿಯೇ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಕಾರಣವಾಯ್ತಾ..?

ಏನಿದು ಚಿಕನ್ ಪಾಕ್ಸ್: ಚಿಕನ್ ಪಾಕ್ಸ್ ಖಾಯಿಲೆ ಹಳೆಯದಾದ ಸಾಂಕ್ರಾಮಿಕ ಖಾಯಿಲೆಯಾಗಿದ್ದು, ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ವೆರೆಸೆಲ್ಲಾ ಬೋಸ್ಟರ್ ಎಂಬ ವೈರಾಣುವಿನಿಂದ ಹರಡುವ ರೋಗವಾಗಿದೆ. ಸೊಂಕು ಆಗಿರುವ ವ್ಯಕ್ತಿಯ ಗಾಯದ ಸ್ಪರ್ಶದಿಂದ ಮತ್ತು ಬಳಸಿದ ವಸ್ತುಗಳನ್ನು ಬಳಸುವುದರಿಂದ ಈ ಖಾಯಿಲೆ ಬರುತ್ತದೆ.

ರೋಗ ಲಕ್ಷಣಗಳು ಏನು?: ಜ್ವರ ,ಮೈ, ಕೈ ನೋವು, ಮೂಗು ಸೋರುವುದು. ಈ ರೋಗ ಲಕ್ಷಣ ಕಾಣಿಸಿಕೊಂಡ ಎರಡನೇ ದಿನದಂದು ಮೈಯೆಲ್ಲ ಮೊಡವೆಯಂತೆ ಗುಳ್ಳೆಗಳಾಗುತ್ತವೆ. ಕ್ರಮೇಣ ನೀರು ಗುಳ್ಳೆಗಳಾಗಿ ತುರಿಕೆ ಕಾಣಿಸಿಕೊಳ್ಳುತ್ತದೆ. ಮೊದಲು ಹೊಟ್ಟೆ ಮತ್ತು ಬೆನ್ನಿನ ಭಾಗದಲ್ಲಿ ಗುಳ್ಳೆಗಳಾಗಿ ದೇಹದ ಎಲ್ಲಾ ಭಾಗ ಆವರಿಸುತ್ತದೆ. 200 ರಿಂದ 250 ಗುಳ್ಳೆಗಳು ಆಗುತ್ತವೆ. ಬೇರೆ ಖಾಯಿಲೆಯಿಂದ ಬಳಲುತ್ತಾ ಇರುವವರು ಹೆಚ್ಚು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

Live Tv

Leave a Reply

Your email address will not be published.

Back to top button