ನಟ ಕಿಚ್ಚ ಸುದೀಪ್ (Sudeep) ತಮಗೆ ಕಾಲ್ ಶೀಟ್ ನೀಡದೇ ವಂಚನೆ ಮಾಡಿದ್ದಾರೆ ಎಂದು ಕೆಲವು ದಿನಗಳ ಹಿಂದೆಯಷ್ಟೇ ನಿರ್ಮಾಪಕ ಎಮ್.ಎನ್. ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದರು. ಅಡ್ವಾನ್ಸ್ ಪಡೆದುಕೊಂಡಿರುವ ಸುದೀಪ್, ಈವರೆಗೂ ನಮಗೆ ಕಾಲ್ ಶೀಟ್ ಕೊಡದೇ ಆಟವಾಡಿಸುತ್ತಿದ್ದಾರೆ. ಪರಭಾಷೆಯ ನಿರ್ಮಾಪಕರಿಗೆ ಮಣೆ ಹಾಕುತ್ತಿದ್ದಾರೆ ಎಂದು ಕುಮಾರ್ ಆರೋಪ ಮಾಡಿದ್ದರು.
Advertisement
ಈ ಆರೋಪಕ್ಕೆ ತಿರುಗೇಟು ನೀಡಿದ್ದ ಕಿಚ್ಚ ಸುದೀಪ್, ತಮ್ಮ ಮೇಲೆ ಆರೋ ಮಾಡಿದ ಕುಮಾರ್ ವಿರುದ್ಧ ಇಂದು ಮಾನನಷ್ಟ ಪ್ರಕರಣವನ್ನು ದಾಖಲಿಸುವುದಾಗಿ ತಿಳಿಸಿದ್ದರು. ಲಾಯರ್ ನೋಟಿಸ್ (Notice)ಕೂಡ ನೀಡಿದ್ದರು. ಕುಮಾರ್ ಮೇಲೆ ಮಾತ್ರವಲ್ಲ, ಮತ್ತೋರ್ವ ನಿರ್ಮಾಪಕ ಎಮ್.ಎನ್ ಸುರೇಶ್ (M.N. Suresh)ಅವರಿಗೂ ಕಿಚ್ಚ ನೋಟಿಸ್ ಕಳುಹಿಸಿದ್ದರು. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ
Advertisement
Advertisement
ವಂಚನೆ ಆರೋಪ ಮಾಡಿದ್ದ ಇಬ್ಬರು ನಿರ್ಮಾಪಕರಿಗೆ ನೋಟಿಸ್ ನೀಡಿರೋ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘವು (Producers Association) ಮಧ್ಯಾಹ್ನ ಮಹತ್ವದ ಸುದ್ದಿಗೋಷ್ಠಿ ಕರೆದಿದೆ. ಈ ಬಗ್ಗೆ ಈಗಾಗಲೇ ನಿರ್ಮಾಪಕ ಸಂಘಧ ಕಛೇರಿಯಲ್ಲಿ ಸಭೆ ನಡೆಯುತ್ತಿದ್ದು, ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕರ್ (Umesh Bankar) ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
Advertisement
ನಿರ್ಮಾಪಕರ ಸಂಘದಲ್ಲಿ ನಡೆಯುತ್ತಿರುವ ಮಹತ್ವದ ಸಭೆಯಲ್ಲಿ ಸುದೀಪ್ ವಿರುದ್ಧ ಆರೋಪ ಮಾಡಿದ್ದ ಎಂ.ಎನ್ ಕುಮಾರ್ (M.N. Kumar), ಎಂ.ಎನ್ ಸುರೇಶ್ ಕೂಡ ಭಾಗಿಯಾಗಿದ್ದಾರೆ. ತಮಗೆ ಸುದೀಪ್ ನೀಡಿರುವ ನೋಟಿಸ್ ಬಗ್ಗೆ ಸಭೆಯಲ್ಲಿ ಕುಮಾರ್ ಪ್ರಸ್ತಾಪ ಮಾಡಿದ್ದಾರೆ. ಮುಂದಿನ ನಡೆ ಬಗ್ಗೆ ಸಭೆಯ ತೀರ್ಮಾನದ ಬಳಿಕ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ.
Web Stories