ಸ್ಯಾಂಡಲ್ವುಡ್‌ನಲ್ಲಿ ಕಳೆದ ಕೆಲವು ದಿನಗಳಿಂದ ಸುದೀಪ್- ಕುಮಾರ್ ವಿವಾದ ಸಖತ್ ಸುದ್ದಿಯಾಗುತ್ತಿದೆ. ಸುದೀಪ್ ನನ್ನ ಬಳಿ ಹಣ ಪಡೆದು, ಸಿನಿಮಾ ಮಾಡಲು ಕಾಲ್‌ಶೀಟ್ ನೀಡುತ್ತಿಲ್ಲ ಎಂದು ನಿರ್ಮಾಪಕ ಎನ್.ಕುಮಾರ್ (N.Kumar) ಆರೋಪಿಸಿದ್ದರು. ಬಳಿಕ ಎನ್.ಕುಮಾರ್ ನಟ ರವಿಚಂದ್ರನ್ (Ravichandran) ಅವರನ್ನ ಭೇಟಿಯಾಗಿದ್ದರು. ಈ ಬೆನ್ನಲ್ಲೇ ಶಿವಣ್ಣರನ್ನ ಕುಮಾರ್ ಭೇಟಿ ಮಾಡಿದ್ದಾರೆ.
Advertisement
ಚಿತ್ರರಂಗದಲ್ಲಿ ಕುಮಾರ್- ಸುದೀಪ್ (Sudeep) ವಿಚಾರ ಸಂಚಲನ ಮೂಡಿಸುತ್ತಿದೆ. ಕುಮಾರ್ ಆರೋಪಕ್ಕೆ ಕೋರ್ಟ್‌ನಲ್ಲೇ ಉತ್ತರ ಕೊಡ್ತೀನಿ ಅಂತಾ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ರವಿಚಂದ್ರನ್ ಅವರನ್ನ ಎನ್.ಕುಮಾರ್ ಭೇಟಿ ಮಾಡಿರೋ ಬೆನ್ನಲ್ಲೇ ದೊಡ್ಮನೆ ನಟ ಶಿವಣ್ಣರನ್ನ ಮೀಟ್ ಮಾಡಿ, ಹಿರಿಯ ನಟರು ಹಾಗೂ ಫಿಲಂ ಚೇಂಬರ್ ಮಧ್ಯಸ್ಥಿಕೆಯಲ್ಲಿಯೇ ಸಮಸ್ಯೆ ಬಗೆಹರಿಸುವಂತೆ ಶಿವಣ್ಣಗೆ ನಿರ್ಮಾಪಕರು ಮನವಿ ಮಾಡಿದ್ದಾರೆ.
Advertisement
Advertisement
ಎನ್.ಕುಮಾರ್- ಸುದೀಪ್ ನಡುವೆ ಏನು ನಡೆದಿದೆ ಅಂತಾ ಅದು ಅವರಿಗಷ್ಟೇ ಗೊತ್ತು. ನಿರ್ಮಾಪಕರು- ನಟ ಇಬ್ಬರು ಚಿತ್ರರಂಗದಲ್ಲಿ ಪಿಲ್ಲರ್ ಇದ್ದ ಹಾಗೆ. ಅಪ್ಪಾಜಿ ಅವರು ಸಾಹುಕಾರ ಅಂತಾ ರವಿಚಂದ್ರನ್ ಅವರನ್ನು ಹೇಳುತ್ತಿದ್ದರು. ಅವರು ಚಿತ್ರರಂಗಕ್ಕೆ ಬಂದು 40 ವರ್ಷ ಆಯ್ತು. ರವಿಚಂದ್ರನ್ ಸರ್ ಏನ್ ಹೇಳ್ತಾರೆ ಅದರ ಮೇಲೆ ಎಲ್ಲವೂ ನಿಲ್ಲುತ್ತೆ. ಲೆಕ್ಕಾಚಾರದ ಬಗ್ಗೆ ನನ್ನ ಜೊತೆ ಮಾತನಾಡೋದು ತಪ್ಪಾಗುತ್ತೆ. ನಟರಾಗಿ ನಾನು ಸುದೀಪ್ ಜೊತೆ ಇದರ ಬಗ್ಗೆ ಮಾತನಾಡೋದಕ್ಕೆ ಆಗಲ್ಲ. ನಟನಿಗೆ ಗೌರವ ನೀಡಬೇಕು. ಲೆಕ್ಕಾಚಾರ ಬಿಟ್ಟು ಬೇರೆ ವಿಷಯ ರವಿಚಂದ್ರನ್ ಸರ್ ಜೊತೆ ಮಾತಾನಾಡಿ ಬಗೆಹರಿಸುತ್ತೇವೆ. ರವಿಚಂದ್ರನ್ ಸರ್ ಜೊತೆ ಇದರ ಬಗ್ಗೆ ನಾನು ಮಾತನಾಡಿಲ್ಲ. ಅಪ್ಪಾಜಿ ಯಾವಾಗಲು ಹೇಳುತ್ತಾರೆ ಸಿನಿಮಾರಂಗ ಒಂದು ಕುಟುಂಬ ಇದ್ದ ಹಾಗೆ ಎಂದು ಶಿವರಾಜ್‌ಕುಮಾರ್ (Shivarajukumar) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಎರಡೇ ಎರಡು ದಿನ ವೇಟ್ ಮಾಡಿ ಪ್ಲೀಸ್: ನಟ ಅನಿರುದ್ಧ ಮನವಿ
Advertisement
ಕುಮಾರ್ ಭೇಟಿಯ ನಂತರ ಮಾತನಾಡಿದ ರವಿಚಂದ್ರನ್, ಕುಮಾರ್ ಎಲ್ಲವನ್ನೂ ಹೇಳಿದ್ದಾರೆ. ಪರಿಸ್ಥಿತಿ ತಣ್ಣಗಾಗಬೇಕು. ಸುದೀಪ್ ಹತ್ತಿರ ನಾನು ಮಾತಾಡ್ಬೇಕು. ಎರಡು ಕಥೆಗಳನ್ನ ಕೇಳ್ತೀನಿ. ನನ್ನ ನಿರ್ಧಾರಕ್ಕೆ ಇಬ್ಬರೂ ಬದ್ಧರಾಗಬೇಕು. 20 ವರ್ಷದ ಕಥೆಯಂತೆ ಕಾಣ್ತಿದೆ. ಸುದೀಪ್ ಆದಷ್ಟು ಬೇಗ ಸಿಕ್ತಾರೆ. ಈಗಾಗಲೇ ಇಬ್ಬರೂ ನೊಂದಿದ್ದಾರೆ. ಚಿತ್ರರಂಗದಲ್ಲಿ ನಾವು ಸರಿಯಾಗಬೇಕು. ಒಕ್ಕೂಟದಲ್ಲಿ ಒಗ್ಗಟ್ಟಿರಬೇಕು. ಈ ಸಮಸ್ಯೆಯನ್ನು ಬಗೆಹರಿಸೋಕೆ ನಾನು ಟ್ರೈ ಮಾಡ್ತೀನಿ. ಪರಿಹಾರ ನಾನು ಹುಡುಕೋ ಪ್ರಯತ್ನ ಮಾಡ್ತೀನಿ. ಒಬ್ಬರ ಮೇಲೆ ಇನ್ನೊಬ್ಬರು ಟೀಕೆ ಮಾಡೋದು ಬಿಡಬೇಕು. ಎಲ್ಲರೂ ಚೆನ್ನಾಗಿರಬೇಕು ಅಂತ ನನ್ನಾಸೆ. ಸುದೀಪ್ (Sudeep) ನನಗೆ ಮಾಣಿಕ್ಯ ಚಿತ್ರದಿಂದ ತುಂಬಾ ಕ್ಲೋಸ್ ಆದವರು. ಕುಮಾರ್ ಮುಂಚೆಯಿಂದ ಗೊತ್ತು. ದಾಖಲೆಗಳನ್ನ ನಾನು ಮೊದಲು ನೋಡ್ತೀನಿ. ಆಮೇಲೆ ಸುದೀಪ್ ಹತ್ರ ಮಾತಾಡ್ತೀನಿ ಎಂದಿದ್ದಾರೆ.
ನಿರ್ಮಾಪಕ ಎನ್.ಕುಮಾರ್ ಮತ್ತು ಕಿಚ್ಚ ಸುದೀಪ್ ಆರೋಪಗಳ ವಿಚಾರದಲ್ಲಿ ಕೊನೆಗೂ ರವಿಚಂದ್ರನ್ ಎಂಟ್ರಿ ಪಡೆದಿದ್ದಾರೆ. ನಿನ್ನೆ ಮಧ್ಯಾಹ್ನ ಕೆಲ ನಿರ್ಮಾಪಕರು ರವಿಚಂದ್ರನ್ ಅವರನ್ನು ಭೇಟಿ ಮಾಡಿದ್ದಾರೆ. ನಿರ್ಮಾಪಕ ಎನ್.ಕುಮಾರ್ ಹಾಗೂ ಸುದೀಪ್ ನಡುವಿನ ಮನಸ್ತಾಪ ಕುರಿತು ಚರ್ಚಿಸಿದ್ದಾರೆ.
ನಿರ್ಮಾಪಕರ ಜೊತೆ ಮಾತನಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರವಿಚಂದ್ರನ್, ಪರಿಸ್ಥಿತಿ ಸರಿಯಿಲ್ಲ ಅಂದ್ರೆ ಮನಸ್ಥಿತಿನೂ ಸರಿ ಇರಲ್ಲ. ನನಗೆ ಏನು ಸ್ಟೋರಿ ಅಂತ ಪೂರ್ತಿಯಾಗಿ ಗೊತ್ತಿಲ್ಲ. ಅವರು ಏನು ಹೇಳಿದ್ರು, ಇವರು ಏನ್ ಹೇಳಿದ್ರು ಕೇಳ್ಕೊಂಡು ತೀರ್ಮಾನ ತೆಗೆದುಕೊಳ್ಳಲ್ಲ ನಾನು. ಸುದೀಪ್ ಗೆ ನೋವಾಗಿರೋದು ನಿಜ. ಕುಮಾರ್ ಅವರು ನನಗೆ ಫೋನ್ ಮಾಡಿದ್ದರು. ಶೂಟಿಂಗ್ ನಲ್ಲಿದ್ದೆ ಹಾಗಾಗಿ ಪಿಕ್ ಮಾಡೋಕೆ ಆಗ್ಲಿಲ್ಲ. ಈ ವಿಷಯದ ಕುರಿತು ನಾನು ಯೋಚನೆ ಮಾಡಬೇಕು. ನಾನು ಕೇವಲ ಮಾತನ್ನು ನಂಬಲ್ಲ, ದಾಖಲೆ ಕೊಡಬೇಕು ಎಂದರು.
ಮುಂದುವರೆದು ಮಾತನಾಡಿದ ರವಿಚಂದ್ರನ್, ಸುದೀಪ್ ಹತ್ತಿರ ಮಾತಾಡ್ಬೇಕಾ ಅನ್ನುವುದನ್ನು ಯೋಚನೆ ಮಾಡ್ತೀನಿ. ಗಂಡ ಹೆಂಡ್ತಿ ಜಗಳ ಇದ್ದಂಗೆ ಇದು. ಬೀದಿಗೆ ಬಂದಿದೆ ಏನು ಮಾಡೋಕೆ ಆಗಲ್ಲ. ನಾನು ಇಷ್ಟು ದಿನ ತಪ್ಪಿಸಿಕೊಂಡು ಓಡಾಡ್ತಿದ್ದೆ, ಈ ವಿಷಯ ಬಗ್ಗೆ ರಿಯ್ಯಾಕ್ಟ್ ಮಾಡೋದು ಬೇಡ ಅಂತ. ನನ್ನ ಮಗನ ಮೇಲೆ ಆರೋಪ ಬಂದಿದೆ. ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ ನಾನು. ಕುಮಾರ್ ಬರಲಿ. ಕೇಳುವ ಮಾತುಗಳು ಹರ್ಟ್ ಆಗಿ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ದಿನ ಬೆಳಗ್ಗೆ ಎದ್ದರೆ ಇದೆ ಶುರುವಾಗಿದೆ’ ಎಂದು ಬೇಸರ ಪಟ್ಟುಕೊಂಡರು.
ದಾಖಲೆ ನಾಳೆ ಕೊಡ್ತೀನಿ ಅಂದ್ರೆ ಏನದು ಎಂದು ಕುಮಾರ್‌ಗೆ ಪ್ರಶ್ನೆ ಮಾಡಿದ ರವಿಚಂದ್ರನ್, ದಾಖಲೆ ಮುಂದಿಟ್ಟು ಮಾತಾಡ್ಬೇಕು. ಮನಸ್ಥಿತಿ, ಪರಿಸ್ಥಿತಿ ಎರಡೂ ಬ್ಯಾಲೆನ್ಸ್ ಮಾಡಬೇಕು. ಫಸ್ಟ್ ಕೂಲ್ ಮಾಡೋಣ. ತೊಂದರೆ ಏನಂತ ಗೊತ್ತಿಲ್ಲದೇ ಸಪೋರ್ಟ್ ಮಾಡೋಕೆ ಆಗಲ್ಲ. ನಾನು 30 ವರ್ಷಗಳ ಹಿಂದೆ ಒಂದು ಪುಸ್ತಕ ಮಾಡಿಕೊಟ್ಟಿದೆ, ಹೇಗೆ ಅಸೋಸಿಯೇಷನ್ ಮಾಡಬೇಕು ಅಂತ. ಯಾರು ಫಾಲೋ ಮಾಡಿಲ್ಲ ಈಗ ಅನುಭವಿಸುತ್ತಿದ್ದಾರೆ. ಕುಮಾರ್ ಹೇಳ್ತಾರೆ ನಾನು ಆರೋಪ ಮಾಡಿಲ್ಲ ಮನವಿ ಮಾಡ್ದೆ ಅಂತ. ಅದು ಸುದೀಪ್‌ಗೆ ಬೇಜಾರ್ ಆಗಿದೆ. ಜೊತೆಗೆ ಕೂತು ಊಟ ಮಾಡಿದವರು ಈಗ ಬೆರಳು ತೋರಿಸಿ ಮಾತಾಡ್ತಿದ್ದಾರೆ ಅಂದರೆ ಹರ್ಟ್ ಆಗಲ್ವ..? ಎರಡು ಕಡೆ ಸಹನೆ ಮೀರಿದೆ. ಪ್ರತಿಭಟನೆ ಮಾಡ್ತಿರೋ ಕುಮಾರ್‌ಗೆ ಬಿಡೋಕೆ ಹೇಳಿ. ಸುದೀಪ್ ನ ನಾನು ಕರಿಸೋದಿಲ್ಲ, ನಾನೇ ಹೋಗಿ ಮಾತಾಡ್ತೀನಿ. ಸುದೀಪ್ ಗೆ ಸರಿ ಅನ್ಸಿದ್ರೆ ಮಾತ್ರ ಹೋಗಿ ಮಾತಾಡ್ತೀನಿ. ಕುಮಾರ್‌ದು ತಪ್ಪು ಅಂದ್ರೆ ಡೈರೆಕ್ಟ್ ಆಗಿ ಬೈತೀನಿ’ ಎನ್ನುವುದು ರವಿಚಂದ್ರನ್ ಮಾತು.