ಜೊತೆ ಜೊತೆಯಲಿ ಧಾರಾವಾಹಿಯಿಂದ ನಟ ಅನಿರುದ್ಧ (Aniruddha) ಹೊರ ಬರುತ್ತಿದ್ದಂತೆಯೇ ಅಭಿಮಾನಿಗಳು ಮುಂದಿನ ಪ್ರಾಜೆಕ್ಟ್ ಏನು ಎಂದು ಕೇಳಿದ್ದರು. ಎಸ್.ನಾರಾಯಣ್ ಮತ್ತು ಅನಿರುದ್ಧ ಕಾಂಬಿನೇಷನ್ ನಲ್ಲಿ ‘ಸೂರ್ಯವಂಶ’ ಧಾರಾವಾಹಿ ಬರುತ್ತದೆ ಎಂದಾಗ ಕುತೂಹಲದಿಂದ ಕಾದರು. ಆದರೆ, ಆ ಧಾರಾವಾಹಿ ಬರಲೇ ಇಲ್ಲ. ಅನಿರುದ್ಧ ಅಭಿಮಾನಿಗಳಿಗೆ ಮತ್ತೆ ನಿರಾಸೆ ಆಯಿತು.
Advertisement
ನಿರಾಸೆಗೊಂಡ ಅಭಿಮಾನಿಗಳಿಗಾಗಿ ಅನಿರುದ್ಧ ಬಿಗ್ ಸರ್ ಪ್ರೈಸ್ ನೀಡುವುದಾಗಿ ತಿಳಿಸಿದ್ದಾರೆ. ‘ಇನ್ನು ಕೇವಲ ಎರಡೇ ಎರಡು ದಿನ ವೇಟ್ ಮಾಡಿ, ನಿಮಗಾಗಿ ಬಿಗ್ ಸರ್ ಪ್ರೈಸ್ ಕಾದಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಆ ಸರ್ ಪ್ರೈಸ್ ಏನು ಎನ್ನುವ ಕುರಿತು ಅವರು ಸಣ್ಣ ಸುಳಿವೂ ಕೂಡ ನೀಡಿಲ್ಲ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳು ಕಾಯುವಂತಾಗಿದೆ. ಇದನ್ನೂ ಓದಿ:ಅಪಘಾತದಿಂದ ಚೇತರಿಸಿಕೊಂಡ್ರಾ ಸಾಯಿ ಧರಂ ತೇಜ್- ನಟ ಹೇಳೋದೇನು?
Advertisement
Advertisement
ಜೊತೆ ಜೊತೆಯಲಿ ಧಾರಾವಾಹಿಯಿಂದ (Serial) ಅನಿರುದ್ಧ ಆಚೆ ಬಂದ ನಂತರ ಮತ್ತೆ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಇತ್ತು. ಸಿನಿಮಾ (Movie) ರಂಗದಲ್ಲೇ ಅವರು ನಟರಾಗಿ ಸಕ್ರೀಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೇ, ಡಾಕ್ಯುಮೆಂಟರಿ ನಿರ್ದೇಶನವನ್ನೂ ಮುಂದುವರೆಸುತ್ತಾರೆ ಎನ್ನಲಾಗಿತ್ತು. ಈ ಎರಡರಲ್ಲಿ ಯಾವುದಾದರೂ ಒಂದು ಸರ್ ಪ್ರೈಸ್ ರೀತಿಯಲ್ಲಿ ಹೇಳಬಹುದು ಎನ್ನುವ ಚರ್ಚೆ ಕೂಡ ಮಾಡಲಾಗುತ್ತಿದೆ.
Advertisement
ಸೂರ್ಯವಂಶ (Suryavamsa) ಧಾರಾವಾಹಿಯ ಹಲವು ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ಆದರೆ, ಅದು ಅರ್ಧಕ್ಕೆ ನಿಲ್ಲುವುದಕ್ಕೆ ಈವರೆಗೂ ಕಾರಣ ಸಿಕ್ಕಿಲ್ಲ. ಈ ಧಾರಾವಾಹಿಯ ಕುರಿತಾಗಿ ಅನಿರುದ್ಧ ಅಪ್ ಡೇಟ್ ನೀಡಬಹುದು ಎಂದೂ ಅಂದಾಜಿಸಲಾಗಿದೆ. ಅದು ಏನು ಎನ್ನುವುದು ತಿಳಿಯಬೇಕು ಅಂದರೆ ಇನ್ನೆರಡು ದಿನ ಕಳೆಯಲೇಬೇಕು.
Web Stories