ಕಿಚ್ಚ ಸುದೀಪ್ (Sudeep) ಅಭಿಮಾನಿಗಳು ನಿರ್ಮಾಪಕ ಎನ್.ಕುಮಾರ್ (N. Kumar) ವಿರುದ್ಧ ಗರಂ ಆಗಿದ್ದಾರೆ. ಒಂದು ಕಡೆ ಸುದೀಪ್ ಈಗಾಗಲೇ ಕೋರ್ಟ್ ಮೆಟ್ಟಿಲು ಏರಿದ್ದರೆ ಮತ್ತೊಂದು ಕಡೆ ಕಿಚ್ಚನ ಅಭಿಮಾನಿಗಳು ರಾಜ್ಯದ ಹಲವು ಕಡೆ ಕುಮಾರ್ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಸಂಖ್ಯಾತ ಅಭಿಮಾನಿಗಳಿಗೆ ಕುಮಾರ್ ನೋವನ್ನುಂಟು ಮಾಡಿದ್ದಾರೆ ಎಂದು ದೂರಿನಲ್ಲಿ (Complaint) ಅಭಿಮಾನಿಗಳು ಬರೆದಿದ್ದಾರೆ.
Advertisement
ಚಾಮರಾಜನಗರದ ಕಿಚ್ಚ ಸುದೀಪ್ ಅಭಿಮಾನಿಗಳ (Fans) ಸಂಘದವರು ಪೊಲೀಸ್ ಠಾಣೆಗೆ ತೆರಳಿ, ಎನ್.ಕುಮಾರ್ ಮತ್ತು ಎಮ್.ಎನ್ ಸುರೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ತಮ್ಮ ಹಾಗೂ ನೆಚ್ಚಿನ ನಟನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
Advertisement
Advertisement
ತಿಪಟೂರಿನಲ್ಲೂ ಎನ್.ಕುಮಾರ್ ಮತ್ತು ಎಮ್.ಎನ್ ಸುರೇಶ ವಿರುದ್ಧ ದೂರು ದಾಖಲಿಸಿರುವ ಸುದೀಪ್ ಅಭಿಮಾನಿಗಳು, ನಮ್ಮೆಲ್ಲರ ನೆಚ್ಚಿನ ನಟ ಸುದೀಪ್ ಅವರು ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದವರು. ಅಪಾರ ಸಂಖ್ಯೆಯಲ್ಲಿ ಬೆಂಬಲಿಗರನ್ನು ಹೊಂದಿದ್ದಾರೆ. ಅವರ ಮಾನಹಾನಿ ಮಾಡುವಂತಹ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement
ನಿರ್ಮಾಪಕ ಎನ್.ಕುಮಾರ್ ಮತ್ತು ಕಿಚ್ಚ ಸುದೀಪ್ ಆರೋಪಗಳ ವಿಚಾರದಲ್ಲಿ ಕೊನೆಗೂ ರವಿಚಂದ್ರನ್ (Ravichandran) ಎಂಟ್ರಿ ಪಡೆದಿದ್ದಾರೆ. ನಿನ್ನೆ ಮಧ್ಯಾಹ್ನ ಕೆಲ ನಿರ್ಮಾಪಕರು ರವಿಚಂದ್ರನ್ ಅವರನ್ನು ಭೇಟಿ ಮಾಡಿದ್ದಾರೆ. ನಿರ್ಮಾಪಕ ಎನ್.ಕುಮಾರ್ ಹಾಗೂ ಸುದೀಪ್ ನಡುವಿನ ಮನಸ್ತಾಪ ಕುರಿತು ಚರ್ಚಿಸಿದ್ದಾರೆ. ಇದನ್ನೂ ಓದಿ:2 ಸಾವಿರಕ್ಕೆ ʼಆಪನ್ ಹೈಮರ್’ ಚಿತ್ರದ ಟಿಕೆಟ್ ಸೇಲ್- ಬೆಂಗಳೂರಿನಲ್ಲಿ ಹೆಚ್ಚಿದ ಡಿಮ್ಯಾಂಡ್
ನಿರ್ಮಾಪಕರ ಜೊತೆ ಮಾತನಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರವಿಚಂದ್ರನ್, ‘ಪರಿಸ್ಥಿತಿ ಸರಿಯಿಲ್ಲ ಅಂದ್ರೆ ಮನಸ್ಥಿತಿನೂ ಸರಿ ಇರಲ್ಲ. ನನಗೆ ಏನು ಸ್ಟೋರಿ ಅಂತ ಪೂರ್ತಿಯಾಗಿ ಗೊತ್ತಿಲ್ಲ. ಅವರು ಏನು ಹೇಳಿದ್ರು, ಇವರು ಏನ್ ಹೇಳಿದ್ರು ಕೇಳ್ಕೊಂಡು ತೀರ್ಮಾನ ತೆಗೆದುಕೊಳ್ಳಲ್ಲ ನಾನು. ಸುದೀಪ್ ಗೆ ನೋವಾಗಿರೋದು ನಿಜ. ಕುಮಾರ್ ಅವರು ನನಗೆ ಫೋನ್ ಮಾಡಿದ್ದರು. ಶೂಟಿಂಗ್ ನಲ್ಲಿದ್ದೆ ಹಾಗಾಗಿ ಪಿಕ್ ಮಾಡೋಕೆ ಆಗ್ಲಿಲ್ಲ. ಈ ವಿಷಯದ ಕುರಿತು ನಾನು ಯೋಚನೆ ಮಾಡಬೇಕು. ನಾನು ಕೇವಲ ಮಾತನ್ನು ನಂಬಲ್ಲ, ದಾಖಲೆ ಕೊಡಬೇಕು ಎಂದರು.
ಮುಂದುವರೆದು ಮಾತನಾಡಿದ ರವಿಚಂದ್ರನ್, ‘ಸುದೀಪ್ ಹತ್ತಿರ ಮಾತಾಡ್ಬೇಕಾ ಅನ್ನುವುದನ್ನು ಯೋಚನೆ ಮಾಡ್ತೀನಿ. ಗಂಡ ಹೆಂಡ್ತಿ ಜಗಳ ಇದ್ದಂಗೆ ಇದು. ಬೀದಿಗೆ ಬಂದಿದೆ ಏನು ಮಾಡೋಕೆ ಆಗಲ್ಲ. ನಾನು ಇಷ್ಟು ದಿನ ತಪ್ಪಿಸಿಕೊಂಡು ಓಡಾಡ್ತಿದ್ದೆ, ಈ ವಿಷಯ ಬಗ್ಗೆ ರಿಯ್ಯಾಕ್ಟ್ ಮಾಡೋದು ಬೇಡ ಅಂತ. ನನ್ನ ಮಗನ ಮೇಲೆ ಆರೋಪ ಬಂದಿದೆ. ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ ನಾನು. ಕುಮಾರ್ ಬರಲಿ. ಕೇಳು ಮಾತುಗಳು ಹರ್ಟ್ ಆಗಿ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ದಿನ ಬೆಳಗ್ಗೆ ಎದ್ದರೆ ಇದೆ ಶುರುವಾಗಿದೆ’ ಎಂದು ಬೇಸರ ಪಟ್ಟುಕೊಂಡರು.
ದಾಖಲೆ ನಾಳೆ ಕೊಡ್ತೀನಿ ಅಂದ್ರೆ ಏನದು ಎಂದು ಕುಮಾರ್ ಗೆ ಪ್ರಶ್ನೆ ಮಾಡಿದ ರವಿಚಂದ್ರನ್, ದಾಖಲೆ ಮುಂದಿಟ್ಟು ಮಾತಾಡ್ಬೇಕು. ಮನಸ್ಥಿತಿ, ಪರಿಸ್ಥಿತಿ ಎರಡೂ ಬ್ಯಾಲೆನ್ಸ್ ಮಾಡಬೇಕು. ಫಸ್ಟ್ ಕೂಲ್ ಮಾಡೋಣ. ತೊಂದರೆ ಏನಂತ ಗೊತ್ತಿಲದೇ ಸಪೋರ್ಟ್ ಮಾಡೋಕೆ ಆಗಲ್ಲ. ನಾನು 30 ವರ್ಷಗಳ ಹಿಂದೆ ಒಂದು ಪುಸ್ತಕ ಮಾಡಿಕೊಟ್ಟಿದೆ, ಹೇಗೆ ಅಸೋಸಿಯೇಷನ್ ಮಾಡಬೇಕು ಅಂತ. ಯಾರು ಫಾಲೋ ಮಾಡಿಲ್ಲ ಈಗ ಅನುಭವಿಸುತ್ತಿದ್ದಾರೆ. ಕುಮಾರ್ ಹೇಳ್ತಾರೆ ನಾನು ಆರೋಪ ಮಾಡಿಲ್ಲ ಮನವಿ ಮಾಡ್ದೆ ಅಂತ. ಅದು ಸುದೀಪ್ ಗೆ ಬೇಜಾರ್ ಆಗಿದೆ. ಜೊತೆಗೆ ಕೂತು ಊಟ ಮಾಡಿದವರು ಈಗ ಬೆರಳು ತೋರಿಸಿ ಮಾತಾಡ್ತಿದ್ದಾರೆ ಅಂದರೆ ಹರ್ಟ್ ಆಗಲ್ವ..? ಎರಡು ಕಡೆ ಸಹನೆ ಮೀರಿದೆ. ಪ್ರತಿಭಟನೆ ಮಾಡ್ತಿರೋ ಕುಮಾರ್ ಗೆ ಬಿಡೋಕೆ ಹೇಳಿ. ಸುದೀಪ್ ನ ನಾನು ಕರಿಸೋದಿಲ್ಲ, ನಾನೇ ಹೋಗಿ ಮಾತಾಡ್ತೀನಿ. ಸುದೀಪ್ ಗೆ ಸರಿ ಅನ್ಸಿದ್ರೆ ಮಾತ್ರ ಹೋಗಿ ಮಾತಾಡ್ತೀನಿ. ಕುಮಾರ್ ದು ತಪ್ಪು ಅಂದ್ರೆ ಡೈರೆಕ್ಟ್ ಆಗಿ ಬೈತೀನಿ’ ಎನ್ನುವುದು ರವಿಚಂದ್ರನ್ ಮಾತು.
Web Stories