ಕನ್ನಡದ ಕೆಜಿಎಫ್ ಸೇರಿದಂತೆ ಹಲವಾರು ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ಅಂಬುಮಣಿ (Ambumani) ಹಾಗೂ ಅರಿವುಮಣಿ (Arivumani) ಸಹೋದರರು, ಇದೀಗ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಅದೂ ಕಮಲ್ ಹಾಸನ್ (Kamal Haasan) ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿದೆ.
ಇದು ಕಮಲ್ ಹಾಸನ್ ಅವರ 237ನೇ ಚಿತ್ರವಾಗಿದ್ದು, ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಸದ್ಯಕ್ಕೆ ಚಿತ್ರಕ್ಕೆ ಕೆಎಚ್ 237 ಎಂದು ತಾತ್ಕಾಲಿಕ ಟೈಟಲ್ ಇಟ್ಟು ಕೆಲಸ ಶುರು ಮಾಡಿದ್ದಾರೆ. ಅಂಬುಮಣಿ ಹಾಗೂ ಅರಿವುಮಣಿ. ಈ ಸಹೋದರರು ಕಮಲ್ ಹಾಸನ್ ಅವರ ಅದೆಷ್ಟೋ ಚಿತ್ರಗಳಿಗೆ ಸಾಹಸ ದೃಶ್ಯಗಳ ಸಂಯೋಜನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಈ ಚಿತ್ರವು ರಾಜ್ ಕಮಲ್ ಫಿಲ್ಮ್ಸ್ ಇಂಟರ್ ನ್ಯಾಷನಲ್ ಲಾಂಛನದಲ್ಲಿ ಮೂಡಿ ಬರಲಿದ್ದು, ಚಿತ್ರದಲ್ಲಿ ಕಮಲ್ ಹೊಸ ರೀತಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಆ ತುಣುಕನ್ನು ಸ್ವತಃ ಕಮಲ್ ಹಾಸನ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.