ಚಾಮರಾಜನಗರ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳು ತಟ್ಟೆ ತೊಳೆಯಲು ನೀರು ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕೊಂಬುಡಿಕ್ಕಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ನೀರಿಲ್ಲದೇ ಪರದಾಡುತ್ತಿದ್ದಾರೆ. ಬಿಸಿಯೂಟ ಸೇವಿಸಿ ತಟ್ಟೆ ತೊಳೆಯಲು ನೀರಿಲ್ಲದೇ ಶಾಲೆಯಿಂದ ಒಂದು ಕಿಲೋ ಮೀಟರ್ ದೂರ ಹೋಗಿ ಹಳ್ಳದಲ್ಲಿ ನಿಂತಿರುವ ಕೊಳಚೆ ನೀರಿನಲ್ಲಿ ತಟ್ಟೆ ತೊಳೆಯುವ ಸ್ಥಿತಿ ಎದುರಾಗಿದೆ.
Advertisement
ವಾಟರ್ ಮ್ಯಾನ್‍ಗಳ ತಿಕ್ಕಾಟದಿಂದ ಮಕ್ಕಳು ಈ ರೀತಿಯ ಸಮಸ್ಯೆ ಅನುಭವಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇದೇ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ರು.