ವಾಷಿಂಗ್ಟನ್: ಮಧ್ಯಪ್ರಾಚ್ಯ ಯುದ್ಧವನ್ನು ಕೊನೆಗೊಳಿಸಲು ಇರಾನ್ ಮತ್ತು ಅಮೆರಿಕ ನಡುವಿನ ಒಪ್ಪಂದದ ನಂತರ ಶುಕ್ರವಾರದಿಂದ ಹಾರ್ಮುಜ್ ಜಲಸಂಧಿ (Strait of Hormuz) ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ.
ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೂ ಮುನ್ನ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯ ಆರಂಭದಲ್ಲಿ ಮಾತನಾಡಿದ ಟ್ರಂಪ್, ಲಂಡನ್ ಮತ್ತು ಪ್ಯಾರಿಸ್ ಜಂಟಿ ನೌಕಾ ಕಾರ್ಯಾಚರಣೆಯನ್ನು ಪ್ರಸ್ತಾಪಿಸಿದ ನಂತರ, ಜಲಸಂಧಿಯನ್ನು ಮುಕ್ತವಾಗಿಡಲು ನಮಗೆ ಹೆಚ್ಚಿನ ಸಹಾಯ ಬೇಕಾಗುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: 106 ದಿನಗಳ ಮಹಾಯುದ್ಧಕ್ಕೆ ಬ್ರೇಕ್: ಅಮೆರಿಕ, ಇರಾನ್ ಜವಾಬ್ದಾರಿಗಳೇನು? ಒಪ್ಪಂದ ಜಾರಿಗೆ ಇರೋ ಪ್ರಮುಖ ಷರತ್ತು ಏನು?

ಜಲಸಂಧಿಯನ್ನು ಈಗಾಗಲೇ ಭಾಗಶಃ ತೆರೆಯಲಾಗಿದೆ. ಆದರೂ, ನೆಲಬಾಂಬ್ ತೆಗೆಯುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಯ ನಡೆಯುತ್ತಿದೆ. ಇಸ್ಲಾಮಿಕ್ ಗಣರಾಜ್ಯದೊಂದಿಗಿನ ಒಪ್ಪಂದ ಶ್ಲಾಘನೀಯ. ಮುಖ್ಯ ವಿಷಯವೆಂದರೆ ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿರುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲಿ ಯುದ್ಧದ ಮೊದಲ ದಿನದಂದು ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರ, ಇರಾನ್‌ನಲ್ಲಿನ ಹೊಸ ನಾಯಕತ್ವದೊಂದಿಗೆ ಅಮೆರಿಕ ಚೆನ್ನಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ದಾಳಿಗೆ ಭಾರತದ ನಾವಿಕರು ಸಾವು; ಟ್ರಂಪ್ ಒಬ್ಬ ಕೋಲ್ಡ್ ಮರ್ಡರರ್: ಕೇಜ್ರಿವಾಲ್ ಕಿಡಿ
ಮಧ್ಯಪ್ರಾಚ್ಯದಲ್ಲಿ ಇದೀಗ ಬಹಳಷ್ಟು ಉತ್ತಮ ಸಂಗತಿಗಳು ನಡೆಯಲಿವೆ ಎಂದು ನಾನು ಭಾವಿಸುತ್ತೇನೆ ಅಂತ ಟ್ರಂಪ್ ಹೇಳಿದ್ದಾರೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಆದರೆ, ಎಲ್ಲಿ ಎಂದು ನಿರ್ದಿಷ್ಟಪಡಿಸಿಲ್ಲ.
