Bengaluru CityKarnatakaLatestMain Post

ದಸರಾ, ದೀಪಾವಳಿಗೆ ಬೆಂಗಳೂರಿನಿಂದ ವಿಶೇಷ ರೈಲು – ಎಲ್ಲೆಲ್ಲಿಗೆ ಒಮ್ಮೆ ನೋಡಿ

ಬೆಂಗಳೂರು: ದಸರಾ (Dasara)  ಮತ್ತು ದೀಪಾವಳಿ (Deepavali) ಪ್ರಯುಕ್ತ ನಾಲ್ಕು ವಿಶೇಷ ರೈಲುಗಳ ಕಾರ್ಯಾಚರಣೆಗೆ ನೈರುತ್ಯ ರೈಲ್ವೇ (South Western Railways)  ವ್ಯವಸ್ಥೆ ಮಾಡಿದೆ.

ಯಶವಂತಪುರ (Yeshwanthpur) -ಕಣ್ಣೂರು, ಬೆಂಗಳೂರು ಕಂಟೋನ್ಮೆಂಟ್-ವಿಶಾಖಪಟ್ಟಣ, ಯಶವಂತಪುರ-ನರಸಾಪುರ, ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ – ಜಸೀಡೀಹ್‍ಗೆ (ಜಾರ್ಖಂಡ್) ವಿಶೇಷ ರೈಲುಗಳು ಸಂಚರಿಸಲಿವೆ. ಇದನ್ನೂ ಓದಿ: PFIನಿಂದ ಬೆದರಿಕೆ – ಐವರು RSS ನಾಯಕರಿಗೆ Y ಭದ್ರತೆ

ಯಶವಂತಪುರ – ಕಣ್ಣೂರು ವಿಶೇಷ ರೈಲು (06283/06284) ಯಶವಂತಪುರದಿಂದ ಅ.5ರಂದು ಬೆಳಗ್ಗೆ 7:10ಕ್ಕೆ ಹೊರಟು ಅದೇ ದಿನ ರಾತ್ರಿ 8:30ಕ್ಕೆ ಕಣ್ಣೂರು ತಲುಪಲಿದೆ. ಕಣ್ಣೂರಿನಿಂದ ರಾತ್ರಿ 11ಕ್ಕೆ ಹೊರಟು ಮರುದಿನ ಮಧ್ಯಾಹ್ನ 1 ಗಂಟೆಗೆ ಯಶವಂತಪುರಕ್ಕೆ ಬರಲಿದೆ.

ಕಂಟೋನ್ಮೆಂಟ್-ವಿಶಾಖಪಟ್ಟಣ ರೈಲು (08543/08544) ಅ.2ರಿಂದ ಅ.30ರವರೆಗೆ ವಾರಕ್ಕೊಮ್ಮೆ (ಭಾನುವಾರ) ಕಾರ್ಯಾಚರಣೆ ಮಾಡಲಿದೆ. ಮಧ್ಯಾಹ್ನ 3:50ಕ್ಕೆ ವಿಶಾಖಪಟ್ಟಣದಿಂದ ಹೊರಟು ಮರುದಿನ ಬೆಳಗ್ಗೆ 9:15ಕ್ಕೆ ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ. ಅದೇ ರೀತಿ ಸೋಮವಾರ 3:50ಕ್ಕೆ ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 11ಕ್ಕೆ ವಿಶಾಖಪಟ್ಟಣ ತಲುಪಲಿದೆ. ಇದನ್ನೂ ಓದಿ: ಕರ್ನಾಟಕದ ಜನರಿಗೆ ಪವರ್ ಸ್ಟ್ರೋಕ್ – ನವರಾತ್ರಿ ಹಬ್ಬಕ್ಕೆ ಕರೆಂಟ್ ಶಾಕ್ ಗಿಫ್ಟ್

ನರಸಾಪುರ (ತೆಲಂಗಾಣ) – ಯಶವಂತಪುರ ವಿಶೇಷ ರೈಲು (07153/07154) ಅ.2ರಂದು ಮಧ್ಯಾಹ್ನ 3:10ಕ್ಕೆ ನರಸಾಪುರದಿಂದ ಹೊರಟು ಮರುದಿನ ಬೆಳಗ್ಗೆ 10:50ಕ್ಕೆ ಯಶವಂತಪುರಕ್ಕೆ ಬರಲಿದೆ. ಅದೇ ರೀತಿ ಸೋಮವಾರ ಮಧ್ಯಾಹ್ನ 3:50ಕ್ಕೆ ಯಶವಂತಪುರದಿಂದ ಹೊರಟು ನರಸಾಪುರಕ್ಕೆ ಬೆಳಗ್ಗೆ 8:30ಕ್ಕೆ ತಲುಪಲಿದೆ.

ವಾರಕ್ಕೊಮ್ಮೆ ಕಾರ್ಯಾಚರಣೆ ಮಾಡುವ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್-ಜಸೀಡೀಹ್ ರೈಲು (22306/22305), ಜಸೀಡೀಹ್‍ನಿಂದ ಪ್ರತಿ ಶುಕ್ರವಾರ ಬೆಳಗ್ಗೆ 6:30ಕ್ಕೆ ಹೊರಟು ಶನಿವಾರ ರಾತ್ರಿ 8:15ಕ್ಕೆ ವಿಶೇಶ್ವರಯ್ಯ ಟರ್ಮಿನಲ್‍ಗೆ ಬರಲಿದೆ. ವಿಶ್ವೇಶ್ವರಯ್ಯ ನಿಲ್ದಾಣದಿಂದ ಭಾನುವಾರ ಬೆಳಗ್ಗೆ 10ಕ್ಕೆ ಹೊರಟು ಮಂಗಳವಾರ ರಾತ್ರಿ 12:55ಕ್ಕೆ ಜಸೀಡೀಹ್ ತಲುಪಲಿದೆ ಎಂದು ನೈರುತ್ಯ ರೈಲ್ವೇ ವೇಳಾಪಟ್ಟಿ ವಿವರಿಸಿದೆ.

Live Tv

Leave a Reply

Your email address will not be published. Required fields are marked *

Back to top button