
ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹಾ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಬಗೆಯ ಫೋಟೋಶೂಟ್ ಮಾಡಿಸಿ,ನೆಟ್ಟಿಗರ ಗಮನ ಸೆಳೆದಿದ್ದಾರೆ. ಡ್ರೆಸ್ ಕಲರ್‌ಗೆ ಹೇರ್ ಕಲರ್ ಮಾಡಿಸಿ ಭಿನ್ನವಾಗಿ ಫೋಟೋಶೂಟ್ ಮಾಡಿಸಿರುವ ಸೋನಾಕ್ಷಿ ಲುಕ್ ಸಖತ್ ವೈರಲ್ ಆಗುತ್ತಿದೆ.
ಬಿಟೌನ್‌ನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಸೋನಾಕ್ಷಿ ಸದ್ಯ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಡ್ರೆಸ್ ಕಲರ್‌ಗೆ ಹೋಲುವಂತೆ ಕಪ್ಪಗಿರುವ ಕೂದಲನ್ನು ಸಿಲ್ವರ್ ಬಣ್ಣ ಮಾಡಿಸಿದ್ದಾರೆ. ಒಂದ್‌ಕಡೆ ಸೋನಾಕ್ಷಿ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದ್ ಕಡೆ ಫ್ಯಾನ್ಸ್ ಭಯವಾಗುತ್ತಿದೆ. ಯಾಕೆ ಈ ಹೊಸ ಅವತಾರ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ:`ಮಣಿರತ್ನಂ’ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಐಶ್ವರ್ಯ ರೈ
View this post on Instagram
ಡ್ರೆಸ್ ಮತ್ತು ಕೂದಲು ಒಂದೇ ತರಹದ ಸಿಲ್ವರ್ ಬಣ್ಣ ಇರುವುದು ನೋಡುಗರನ್ನ ಅಟ್ರಾಕ್ಟ್ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸೋನಾಕ್ಷಿ ಲುಕ್ ವೈರಲ್ ಆಗುತ್ತಿದೆ. ಫೋಟೋಶೂಟ್ ಮೂಲಕ ಸೋನಾಕ್ಷಿ ಸಿನ್ಹಾ ಹೊಸ ಪ್ರಯೋಗ ಮಾಡ್ತಿದ್ದಾರೆ.
Live Tv