ಕೆಲವೇ ಗಂಟೆಗಳ ಹಿಂದೆ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ವಿಶೇಷ ಫೋಟೋ ಶೇರ್ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ ಗಿಣಿಮೂಗ ಸುಂದರಿ ಸೋನಾಕ್ಷಿ ಸಿನ್ಹಾ. ಹಾಕಿರುವ ಫೋಟೋ ಮಾಮೂಲಿಯದ್ದಲ್ಲ ಅನಿಸಿದರೂ, ಅವರು ಆ ಫೋಟೋಗೆ ನೀಡಿರುವ ಕ್ಯಾಪ್ಷನ್ ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ
ಸೋನಾಕ್ಷಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ಅವರು ಬೆರಳಗಿಗೆ ವಜ್ರದುಂಗುರ ಹಾಕಿರುವ ಮತ್ತು ಆ ಬೆರಳುಗಳನ್ನು ಮತ್ತೊಂದು ಕೈ ಹಿಡಿದಿರುವ ಹಾಗೂ ಸೋನಾಕ್ಷಿ ಇನ್ನ್ಯಾರದೋ ತೋಳಿಗೆ ಆಸರೆ ಆಗಿರುವ ಸನ್ನಿವೇಶಗಳಿವೆ. ಹಾಗಾಗಿ ಸೋನಾಕ್ಷಿ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಅನ್ನುವ ಪ್ರಶ್ನೆ ಅವರ ಅಭಿಮಾನಿಗಳದ್ದು. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ
ಫೋಟೋ ಹಾಕುವುದಷ್ಟೇ ಅಲ್ಲ, ಇಂತಹ ದಿನಕ್ಕಾಗಿ ನಾನು ಕಾಯುತ್ತಿದ್ದೆ. ನನ್ನ ಜೀವನದಲ್ಲಿ ದೊಡ್ಡದೊಂದು ದಿನ ಬಂದಿದೆ. ಅದನ್ನು ನಿಮ್ಮೊಂದಿಗೆ ಹೇಗೆ ಹಂಚಿಕೊಳ್ಳಬೇಕು ಎನ್ನುವ ಕಾತುರ. ಎಂದೂ ಬರೆದುಕೊಂಡಿದ್ದಾರೆ. ‘ಕನಸಿನ ದಿನ’, ‘ದೊಡ್ಡ ದಿನ’ ಎಂದು ಬರೆದುಕೊಂಡಿದ್ದಕ್ಕೆ ಹಲವರು ‘ಮುಂದಿನ ದೊಡ್ಡ ದಿನದಲ್ಲಿ ನಿಮ್ಮನ್ನು ನಾವು ಎದುರುಗೊಳ್ಳುತ್ತೇವೆ’ ಎಂದು ಕಾಮೆಂಟ್ ಮಾಡಿರುವುದು ಸೋನಾಕ್ಷಿ ಮದುವೆಗೆ ಮುನ್ನೂಡಿಯಾ ಎಂದೂ ಅನಿಸದೇ ಇರದ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ
ಜಾಹೀರ್ ಇಕ್ಬಾಲ್ ಮತ್ತು ಸೋನಾಕ್ಷಿ ಸಿನ್ಹಾ ಹಲವು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಅನೇಕ ಖಾಸಗಿ ಸಮಾರಂಭಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದೆ. ತಡರಾತ್ರಿ ಪಾರ್ಟಿಗಳಲ್ಲೂ ಇಬ್ಬರೂ ಭಾಗಿಯಾಗಿದ್ದಾರೆ. ಹಾಗಾಗಿ ಸೋನಾಕ್ಷಿ ಅವರು ಜಾಹೀರ್ ಇಕ್ಬಾಲ್ ಜತೆ ಎಂಗೇಜ್ ಮೆಂಟ್ ಮಾಡಿಕೊಂಡಿರಬಹುದಾ ಎಂಬ ಅನುಮಾನವೂ ಶುರುವಾಗಿದೆ.
ಅನೇಕರು ಸೋನಾಕ್ಷಿಯನ್ನು ಈ ಕುರಿತು ಪ್ರಶ್ನೆಗಳನ್ನು ಕೇಳಿದ್ದು, ಅವರು ಮಾತ್ರ ಫೋಟೋ ಹಾಕಿ ಸುಮ್ಮನಾಗಿದ್ದಾರೆ. ಆದರೆ, ಅವರು ಹಾಕಿರುವ ಫೋಟೋ ಮತ್ತು ಬರೆದಿರುವ ಕ್ಯಾಪ್ಷನ್ ಇನ್ನೇನೋ ಹೊಸ ಕಥೆಯನ್ನು ಹೇಳುವಂತಿವೆ.