ಕಲಬುರಗಿ: ನಾವು ಅಡುಗೆ ಮಾಡುತ್ತಿದ್ದೇವೆ, ಅವರು ಬಡಿಸೋಕೆ ಬರುತ್ತಿದ್ದಾರೆ. ಬಿಜೆಪಿಯಲ್ಲಿ ಯಾರು ನಾಯಕತ್ವ ಇಲ್ಲ. ಅದಕ್ಕೆ ಮೋದಿ ಅವರನ್ನು ಕರೆತರುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರವಾಸ ವಿಚಾರ ಸಂಬಂಧ ಮಾತನಾಡಿ, ನಾವು ಮಾಡಿದ ಕೆಲಸಕ್ಕೆ ಅವರು ಚಾಲನೆ ನೀಡುತ್ತಾರೆ. ನಮ್ಮ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿದ ಕೆಲಸಗಳಿಗೆ ಅವರು ಚಾಲನೆ ನೀಡುತ್ತಿದ್ದಾರೆ. ಈ ಹಿಂದೆಯೂ ಲಂಬಾಣಿ ಜನಾಂಗದವರಿಗೆ ಹಕ್ಕು ಪತ್ರ ನೀಡಿದ್ರು. ಕಂದಾಯ ಗ್ರಾಮ ಘೋಷಣೆ ಮಾಡಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ. ಈಗ ಪ್ರಧಾನಿ ಮೋದಿ ಹಕ್ಕು ಪತ್ರ ಕೊಟ್ಟರು ಎಂದು ವಾಗ್ದಾಳಿ ನಡೆಸಿದರು.
ಕಾಗೋಡು ತಿಮ್ಮಪ್ಪ (Kagodu Thimmappa) ಅವರು ಕಾನೂನು ಮಂತ್ರಿ ಇದ್ದಾಗ ಕಂದಾಯ ಗ್ರಾಮ ಮಾಡಿದ್ದು. ನಾವು ಕಾನೂನು ತಂದವರು ಹಕ್ಕು ಪತ್ರ ಹಂಚಲು ಮೋದಿ ಅವರನ್ನು ಕರೆತರುತ್ತಿದ್ದಾರೆ. ನಾವು ಅಡುಗೆ ಮಾಡುತ್ತಿದ್ದೇವೆ ಅವರೂ ಬಡಿಸೋಕೆ ಬರುತ್ತಿದ್ದಾರೆ. ಬಿಜೆಪಿಯಲ್ಲಿ ಯಾರೂ ನಾಯಕತ್ವ ಇಲ್ಲ. ಅದಕ್ಕೆ ಮೋದಿ ಅವರನ್ನು ಕರೆತರುತ್ತಿದ್ದಾರೆ ಎಂದರು.
ಏನು ಕೆಲಸ ಮಾಡಿಲ್ಲವಲ್ಲ ರಾಜ್ಯ ಬಿಜೆಪಿ (BJP) ಗೆ ಮೋದಿಯೆ ಬಂಡವಾಳ. ಯಾಕಂದ್ರೆ ಜನ ವಿರೋಧಿ ಸರ್ಕಾರ 40% ಸರ್ಕಾರ ಇದು. ಮೋದಿ ಬಂದ್ರೆ ವೋಟ್ ಬರುತ್ತವೆ ಅಂತಾ ಬಿಜೆಪಿ ಅಂದುಕೊಂಡಿದೆ. ಆದರೆ ಬಿಜೆಪಿಯನ್ನ ಸೋಲಿಸಬೇಕು ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಅಂತಾ ಜನ ಈಗಾಗ್ಲೆ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಭವಾನಿ ರೇವಣ್ಣ ಸ್ಪರ್ಧೆ ಮಾಡೋದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ: ನಿಖಿಲ್
ಇದೇ ವೇಳೆ ಎಚ್ಡಿಕೆ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಹೇಳಿದ ಎಲ್ಲವನ್ನು ನಾನು ಒಪ್ಪುವುದಿಲ್ಲ. ಆರ್ಎಸ್ಎಸ್ ಅವರು ತೀರ್ಮಾನ ಮಾಡಿರಬಹುದು. ಆದ್ರೆ ಅವರು ಬಹುಮತ ಬಂದ್ರೆ ತಾನೇ ನಿರ್ಧಾರ ಮಾಡೋದು. ಬಿಜೆಪಿಯವರು ಯಾವಾಗ ಬಹುಮತ ಬಂದಿದೆ. 2023 ರಲ್ಲಿ ಬಿಜೆಪಿ 50 ರಿಂದ 60 ಸೀಟು ಬರುತ್ತವೆ ಅಷ್ಟೇ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಕೊನೆ ಚುನಾವಣೆ ಅಂತಾ ಅರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಶೋಕ್ಗಿಂತ ಮೊದಲು ನಾನು ರಾಜಕೀಯಕ್ಕೆ ಬಂದಿದ್ದೇನೆ. ನನಗೆ ಕೊನೆ ಚುನಾವಣೆ ಅಂತಾ ಹೇಳೊದಕ್ಕೆ ಅಶೋಕ್ಗೆ ಯಾವ ನೈತಿಕತೆ ಇದೆ..?. ನಾನು 45 ವರ್ಷಗಳಿಂದ ರಾಜಕೀಯದಲ್ಲಿ ಇರೋದು. ಪಾಪ ಯಡಿಯೂರಪ್ಪನಿಗೆ ಬಿಜೆಪಿಯವರು ಅನ್ಯಾಯ ಮಾಡಿರೋದು. ಯಡಿಯೂರಪ್ಪ (BS Yediyurappa) ಮನೆಗೆ ಕಳುಹಿಸಿ ಬೊಮ್ಮಾಯಿಯನ್ನ ತಂದರು. ಯಡಿಯೂರಪ್ಪ ಮಗನಿಗೆ ಮಂತ್ರಿ ಸ್ಥಾನ ಕೊಡಬೇಕಾಗುತ್ತದೆ ಅಂತಾ ಮಂತ್ರಿಮಂಡಲ ವಿಸ್ತರಣೆ ಮಾಡಲ್ಲ. ಮುಖ್ಯಮಂತ್ರಿಯ ಎಲ್ಲಾ ಇಲಾಖೆಗಳನ್ನ ಇವನೇ ವಿಜಯೇಂದ್ರ ನೋಡಿಕೊಳ್ಳೋದು ಎಂದು ಟೀಕಿಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k