DistrictsKarnatakaKoppalLatestMain Post

ಮುಖ್ಯಮಂತ್ರಿ ಯಾರಾಗಬೇಕೆಂದು ಜನ ನಿರ್ಧರಿಸ್ತಾರೆ, ನಾನೇ ಸಿಎಂ ಆಗ್ತೀನಿ ಅಂತ ಕೂರೋಕೆ ಆಗುತ್ತಾ – ಎಚ್‍ಡಿಕೆ ವಿರುದ್ಧ ಸಿದ್ದು ವ್ಯಂಗ್ಯ

Advertisements

ಕೊಪ್ಪಳ: ಮುಖ್ಯಮಂತ್ರಿ ಯಾರಾಗಬೇಕೆಂದು ಜನ ತೀರ್ಮಾನಿಸುತ್ತಾರೆ. ಅದನ್ನು ಬಿಟ್ಟು ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಕೂರುವುದಕ್ಕೆ ಆಗುತ್ತಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

KUMARASWAMY

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಸಿಎಂ ಆಗುತ್ತೇನೆ ಎಂಬ ಹೇಳಿಕೆ ವಿಚಾರವಾಗಿ ಕೊಪ್ಪಳ ತಾಲೂಕಿನ ಬಸಾಪೂರ ಬಳಿ ಇರುವ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಯಾರಾಗಬೇಕೆಂದು ಜನರು ನಿರ್ಧರಿಸುತ್ತಾರೆ. ಅದನ್ನು ಬಿಟ್ಟು ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಕೂರುವುದಕ್ಕೆ ಆಗುತ್ತಾ? ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಯಾವ ಸ್ಥಾನಕ್ಕೆ ಹೋಗಿದೆ. ಅಂತಹ ಪಾರ್ಟಿ ಅಧಿಕಾರಕ್ಕೆ ಬರತ್ತಾ? ಜೆಡಿಎಸ್ ಒಂದು ರಾಷ್ಟ್ರೀಯ ಪಕ್ಷ ಅಲ್ಲ. ಹಾಗಾಗಿ ಜೆಡಿಎಸ್‍ನ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಅವರು ಯಾರು ಅಂತ ಹೇಳುವುದಿಲ್ಲ. ಪಾಪ ಕುಮಾರಸ್ವಾಮಿ ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಪಾಪ ಹೇಳಿಕೊಳ್ಳಲಿ ಬಿಡಿ. ಬೇಡ ಅಂದವರ ಯಾರು? ಅವರು ಯಾವ ಮೂಲದಿಂದ ಮುಖ್ಯಮಂತ್ರಿ ಆಗುತ್ತಾರೆ ಗೊತ್ತಿಲ್ಲ. ರಾಜನಾಗುತ್ತೇನೆ ಎಂದು ಹೇಳಿಕೊಳ್ಳಲಿ. ಆದರೆ ಅದನ್ನು ಜನರು ತೀರ್ಮಾನಿಸುತ್ತಾರೆ ಎಂದು ಟಾಂಗ್ ನೀಡಿದ್ದಾರೆ.

ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ. ಇವರೆಲ್ಲ ಪ್ರಜಾಪ್ರಭುತ್ವದ ಬಗ್ಗೆ ಬಹಳ ಮಾತನಾಡುತ್ತಾರೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದಿದ್ದು ಪ್ರಜಾ ಪ್ರಭುತ್ವಕ್ಕೆ ಮಾರಕ ಅಂತಾರೆ. ಹಾಗಾದರೆ ಇವರು ಮಾಡುತ್ತಿರುವುದೇನು? ಮಧ್ಯ ಪ್ರದೇಶ ಸರ್ಕಾರ ಕಿತ್ತು ಹಾಕಿದವರು ಯಾರು? ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಕಿತ್ತು ಹಾಕಿದವರು ಯಾರು? ಆಪರೇಶನ್ ಕಮಲ ಶುರು ಮಾಡಿದವರೇ ಅವರು. ಆಪರೇಶನ್ ಕಮಲಕ್ಕೆ ಪಾಪದ ಹಣ ಖರ್ಚು ಮಾಡುತ್ತಿದ್ದಾರೆ. ಒಬ್ಬ ಶಾಸಕನಿಗೆ 25 ರಿಂದ 30 ಕೋಟಿ ಹಣ ನೀಡುತ್ತಾರೆ, ಇದೆಲ್ಲವೂ ಲೂಟಿ ಮಾಡಿರುವ ಹಣವಾಗಿದೆ. ಸರ್ಕಾರದಲ್ಲಿ 40 ಪರ್ಸೆಂಟ್ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

bjP

ಸಂಜಯ್ ರಾವತ್‍ಗೆ ಇಡಿ ನೋಟಿಸ್ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಇಡಿ ಛೂ ಬಿಡುತ್ತಿದ್ದಾರೆ. ಸುಮ್ಮನೆ ರಾಹುಲ್ ಗಾಂಧಿಗೆ ತೊಂದರೆ ಕೊಡಲಿಲ್ವಾ? ವಿಚಾರಣೆ ಮಾಡಿ ನಾನು ಬೇಡ ಎಂದು ಹೇಳುವುದಿಲ್ಲ. ಆದರೆ ವಿಚಾರಣೆ ಮಾಡುವುದಕ್ಕೆ ಕೇಸ್ ಇರಬೇಕು ಅಲ್ಲವಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ: ಕಾರಜೋಳ

ದಲಿತ ಮುಖ್ಯಮಂತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದಲಿತರನ್ನು ಮುಖ್ಯಮಂತ್ರಿ ಮಾಡುವುದು ಕಾಂಗ್ರೆಸ್ ಪಾರ್ಟಿ. ಹಿಂದೆನೂ ಮಾಡಿದ್ದೇವೆ, ಮುಂದೆ ಶಾಸಕರನ್ನು ಕೇಳಿಕೊಂಡು ಹೈಕಮಾಂಡ್ ತೀರ್ಮಾನ ಮಾಡತ್ತದೆ. ನಮ್ಮನ್ನು ಕೇಳುವುದಕ್ಕೆ ಬಿಜೆಪಿಯವರು ಯಾರು? ಅವರ ಏನು ಮಾಡುತ್ತಾರೆ ಎನ್ನುವುದನ್ನು ಮೊದಲು ಹೇಳಿ. ಬಿಜೆಪಿ ದಲಿತರನ್ನು ಸಿಎಂ ಮಾಡುತ್ತೇವೆ ಎಂದು ಹೇಳಲಿನೋಡೋಣ ಎಂದು ಸವಾಲೊಡ್ಡಿದ್ದಾರೆ. ಇದನ್ನೂ ಓದಿ: ಭಾರತೀಯ ಉಕ್ಕು ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ. ಕೃಷ್ಣಮೂರ್ತಿ ವಿಧಿವಶ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ವಿಚಾರವಾಗಿ ಮಾತನಾಡಿದ ಅವರು, ಉಮೇಶ್ ಕತ್ತಿ ಹಿ ಈಸ್ ಫೂಲ್. ಅವನು ಕನ್ನಡ ದ್ರೋಹಿ. ಏಕೀಕರಣ ಆಗಿದ್ದು ಯಾವ ಉದ್ದೇಶಕ್ಕೆ? ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತ ಮಾತಾಡುವುದು ಕನ್ನಡಿಗರಿಗೆ ಮಾಡುವ ದ್ರೋಹ ಎಂದು ಹರಿಹಾಯ್ದಿದ್ದಾರೆ.

ಬಿಜೆಪಿ ಸರ್ಕಾರ ಅನೈತಿಕ ಸರ್ಕಾರ, ಭ್ರಷ್ಟಾಚಾರ ಜಾಸ್ತಿ ಆಗಿದೆ. ನಾವು 150 ಸೀಟ್ ಗೆಲ್ಲಬೇಕು ಅಂದುಕೊಂಡಿದ್ದೇವೆ. ಸಿಂಪಲ್ ಮೆಜಾರಿಟಿಗೆ ಎಷ್ಟು ಬೇಕೋ ಅಷ್ಟು ನಾವೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

Live Tv

Leave a Reply

Your email address will not be published.

Back to top button