ನಮಗೆ ಸವಾಲು ಹಾಕುವ ಧಮ್ ನಿಮಗೆ ಇಲ್ಲ: ಬೊಮ್ಮಾಯಿ ವಿರುದ್ಧ ಸಿದ್ದು ಕಿಡಿ

Public TV
2 Min Read
siddu bommai

ಬೆಂಗಳೂರು: ನಮಗೆ ಸವಾಲು ಹಾಕುವ ಧಮ್ ನಿಮಗೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

BASAVARJ BOMMAI AND SIDDARAMIHA

ಜನ ಸ್ಪಂದನ ಕಾರ್ಯಕ್ರಮದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಜನಮರ್ದನ’ ಅಲ್ಲಲ್ಲ, `ಜನಸ್ಪಂದನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ವೀರಾವೇಶದ ಭಾಷಣ ಕೇಳಿ ಖುಷಿಯಾಯಿತು. ಸಂಘ ಪರಿವಾರ ಇಂತಹ ಜೋರು ಮಾತುಗಳನ್ನು ಸಹಿಸವುದಿಲ್ಲ, ಇದೇ ರೀತಿ ಮಾತನಾಡಿಯೇ ಪಾಪ ಯಡಿಯೂರಪ್ಪ ಜೈಲು ಸೇರಿದ್ದು ಎನ್ನುವುದು ನೆನಪಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಲಕ್ನೋ ಅಗ್ನಿ ದುರಂತ – ನಿರ್ಲಕ್ಷ್ಯವಹಿಸಿದ 15 ಅಧಿಕಾರಿಗಳನ್ನು ಅಮಾನತುಗೊಳಿಸಿದ ಯೋಗಿ

Siddaramaiah 1

ಧಮ್ ಇದ್ದರೆ ಯಾತ್ರೆ ನಿಲ್ಲಿಸಿ ಎಂಬ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ನಾವು ಯಾಕೆ ಹಿಮ್ಮೆಟ್ಟಿಸಬೇಕು. ಸಮಾವೇಶದಲ್ಲಿ ಖಾಲಿ ಕುರ್ಚಿ ನೋಡಿದರೆ, ನಿಮ್ಮ ಜಾತ್ರೆಯನ್ನು ನಮ್ಮ ಜನರೇ ಹಿಮ್ಮೆಟ್ಟಿಸಿದ್ದಾರೆ ಅಂತ ಅನಿಸಲ್ವಾ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಮಗೆ ಸವಾಲು ಹಾಕುವ ಧಮ್ ನಿಮಗೆ ಇಲ್ಲ. ನಿಮಗೆ ನಿಜವಾದ ಧಮ್ ಇದ್ದರೆ ಖಾಲಿ ಸ್ಥಾನಗಳನ್ನು ಮೊದಲು ತುಂಬಿ. ಯತ್ನಾಳ್ ವಿರುದ್ಧ ಕ್ರಮ ತೆಗದುಕೊಳ್ಳಿ. ಆಮೇಲೆ ನಿಮ್ಮ ಧಮ್ ನೋಡೋಣ ಎಂದು ಸವಾಲೊಡ್ಡಿದ್ದಾರೆ.

bjp janaspandana Basavaraj Bommai

ನನ್ನ ಆಡಳಿತ ಕಾಲದ ಹಗರಣ ತನಿಖೆ ಬಯಲಿಗೆಳೆಯುತ್ತೇನೆ ಎಂದು ಹೇಳುತ್ತಿದ್ದಾರೆ. ಮೊನ್ನೆ ಮಾಜಿ ಸಿಎಂ ಬಿಎಸ್‍ವೈ ನೋಟಿಸ್ ಕೊಟ್ಟಿದ್ದು ನೋಡಿದರೆ, ನೀವು ಹೇಳಿದ್ದು ನನಗೋ, ಯಡಿಯೂರಪ್ಪನವರಿಗೆ ಎಂದು ಗೊಂದಲವಾಗುತ್ತಿದೆ ಅಂತ ವ್ಯಂಗ್ಯವಾಡಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ಸಿನವರಿಗೆ ತಾಕತ್, ಧಮ್ ಇದ್ದರೇ ನಮ್ಮನ್ನು ತಡೆಯಲಿ: ಬೊಮ್ಮಾಯಿ ಸವಾಲು

bsy 123

ನನ್ನ ಅಧಿಕಾರವಧಿಯ ಹಗರಣಗಳನ್ನ ಬಯಲಿಗೆಳೆಯುತ್ತೇವೆ ಎಂದು ಧಮ್ಕಿ ಹಾಕುತ್ತಿದ್ದೀರಾ. ನಿಮಗೆ ಧಮ್ ಇದ್ದರೆ ಮೊದಲು ತನಿಖೆ ಮಾಡಿಸಿ. ಆ ಸವಾಲು ಸ್ವೀಕಾರ ಮಾಡಲು ನಾನು ಸಿದ್ಧ. ಈ ಬ್ಲಾಕ್ ಮೇಲ್ ತಂತ್ರಗಳನ್ನ ನಿಮ್ಮವರು ಮೇಲೆ ಬಳಸಿಕೊಳ್ಳಿ ಎಂದು ಹರಿಹಾಯ್ದಿದ್ದಾರೆ.

ನಮ್ಮ ಸರ್ಕಾರದ ಹಗರಣವನ್ನು ಬಯಲಿಗೆಳೆಯುವ ಮೊದಲು ಬಿಜೆಪಿ ನಾಯಕರ ಮೇಲೆ ನ್ಯಾಯಾಲಯದಲ್ಲಿ ಇರುವ ಸಾಲು ಸಾಲು ಹಗರಣಗಳನ್ನು ಮೊದಲು ನೀವು ಇತ್ಯರ್ಥಪಡಿಸಿಕೊಂಡು ಬನ್ನಿ. ಬೀಸುವ ಕತ್ತಿ ನಿಮ್ಮ ಕುತ್ತಿಗೆಯನ್ನೇ ಕೊಯ್ಯದಿರಲಿ ಎಂದಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಚರ್ಚೆಗೆ ನೀವು ಸಿದ್ಧರಿದ್ದಿರಾ ಬೊಮ್ಮಾಯಿ ಅವರೇ? ನಮ್ಮ ಪಕ್ಷ ಸಿದ್ಧ ಇದೆ. ನೀವು ಸಿದ್ಧ ಇದ್ದರೆ ಸಾರ್ವಜನಿಕ ಚರ್ಚೆಗೆ ಸ್ಥಳ-ಸಮಯ ನೀವೇ ನಿರ್ಧರಿಸಿ ತಿಳಿಸಿ ನಾನು ಬರುತ್ತೇನೆ. ಧಮ್ ಎಂದರೆ ಧಮ್ ಬಿರಿಯಾನಿ ಎಂದು ನೀವು ತಿಳಿದುಕೊಂಡ ಹಾಗಿದೆ. ಭ್ರಷ್ಟಾಚಾರವನ್ನೇ ವಿಷಯವನ್ನಾಗಿಟ್ಟು ಚುನಾವಣೆ ಎದುರಿಸುವ ಧಮ್ ನಿಮಗಿದೆಯೇ ಬೊಮ್ಮಾಯಿ ಅವರೇ? ನಿಮಗೆ ಆ ಧಮ್ ಇಲ್ಲ. ಕೊನೆಗೆ ಹಿಂದೂ-ಮುಸ್ಲಿಂ, ಮಂದಿರ ಮಸೀದಿ, ಹಿಜಾಬ್ – ಕೇಸರಿ ಶಾಲುಗಳ ವಿವಾದದಲ್ಲಿಯೆ ನಿಮ್ಮ ಪ್ರಚಾರ ಕೊನೆಗೊಳ್ಳುವುದು. ಬೇರೆ ದಾರಿ ನಿಮಗಿಲ್ಲ. ಇದು ಜನಮರ್ದನ ಸರ್ಕಾರ ಎಂದು ಕಿಡಿಕಾರಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *