ಬೆಂಗಳೂರು: ಕೋವಿಡ್ ಲಸಿಕೆ, ಪಡಿತರ ಅಕ್ಕಿ, ಗ್ಯಾಸ್, ಶೌಚಾಲಯ ಇವೆಲ್ಲಕ್ಕೂ ಅರ್ಜಿ ಹಾಕಿ ಎಂದು ನಾವು ಹೇಳಿಲ್ಲ. ಅರ್ಜಿ ಹಾಕಿ ಎನ್ನುತ್ತಿರುವುದು ಸಿದ್ದರಾಮಯ್ಯರ (Siddaramaiah) ಈ ಕಾಂಗ್ರೆಸ್ (Congress) ಸರ್ಕಾರ. ಸಿದ್ದರಾಮಯ್ಯ ಅವರಿಗೆ ನೈತಿಕತೆ, ತಾಕತ್ತಿದ್ದರೆ ತಲಾ 10 ಕೆಜಿ ಅಕ್ಕಿ ವಿತರಿಸಲಿ. ಇಲ್ಲದಿದ್ದರೆ ಸಿದ್ದರಾಮಯ್ಯ ನಂಬರ್ ಒನ್ ಸುಳ್ಳುಗಾರ ಎಂದು ಜನರಿಗೆ ತಿಳಿಸುತ್ತೇವೆ ಎಂದು ಪರಿಷತ್ ಸದಸ್ಯ ಎನ್ ರವಿಕುಮಾರ್ (N Ravikumar) ತಿರುಗೇಟು ನೀಡಿದರು.
Advertisement
ಬೆಂಗಳೂರಿನಲ್ಲಿ ಮಾತಾಡಿದ ರವಿಕುಮಾರ್, ಅಕ್ಕಿ ಕೊಡುತ್ತಿರುವುದು ಮೋದಿಜಿಯವರ ಸರ್ಕಾರ ಎಂಬುದು ಈಗ ಜನರಿಗೆ ಮನವರಿಕೆ ಆಗಿದೆ. ಇದನ್ನು ಜನರಿಗೆ ವಿವರವಾಗಿ ತಿಳಿಸುತ್ತೇವೆ. ತಲಾ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ಮುಂದುವರಿಸಲಿದೆ. ಅಕ್ಕಿ ನೀಡುವಿಕೆ ಸೇರಿ ಕಾಂಗ್ರೆಸ್‌ನ ವಿವಿಧ ಗ್ಯಾರಂಟಿಗಳ ಅನುಷ್ಠಾನಕ್ಕೆ ಆಗ್ರಹಿಸಿ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಿದ್ದೇವೆ ಎಂದು ಅವರು ನುಡಿದರು. ಇದನ್ನೂ ಓದಿ: ಪೊಲೀಸರು ನನ್ನನ್ನ ಒದ್ದು ಒಳಗೆ ಹಾಕಿದ್ರು – ಇಂಟರೆಸ್ಟಿಂಗ್ ಸಂಗತಿ ಹಂಚಿಕೊಂಡ ಸಿಎಂ
Advertisement
ಕೇಂದ್ರದ 5 ಕೆಜಿಗೆ 10 ಕೆಜಿ ಸೇರಿಸಿ ತಲಾ 15 ಕೆಜಿ ಅಕ್ಕಿ ಕೊಡಿ. ನಿರುದ್ಯೋಗ ಭತ್ಯೆಯನ್ನು ಕೇವಲ 2022-23ನೇ ಸಾಲಿನವರಿಗೆ ಕೊಡುವುದಲ್ಲ. ಎಲ್ಲ ನಿರುದ್ಯೋಗಿಗಳಿಗೂ ಕೊಡಿ ಎಂದು ಆಗ್ರಹಿಸಿದರು.
Advertisement
Advertisement
ಹಿಂದೆ 200 ಯೂನಿಟ್ ವಿದ್ಯುತ್ ಉಚಿತ ಎಂದಿದ್ದರು. ಈಗ 60-70 ಯೂನಿಟ್ ಬಳಸುತ್ತಿದ್ದರೆ 10 ಯೂನಿಟ್ ಹೆಚ್ಚುವರಿ ಬಳಸಿ ಎನ್ನುತ್ತಿದ್ದಾರೆ. ಕಾಂಗ್ರೆಸ್ಸಿಗರ ಮಾತನ್ನು ಇಟ್ಟುಕೊಂಡು ಹೋರಾಟ ಮಾಡಲು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಹಕ್ಕಿದೆ. ಸರ್ಕಾರ ಗ್ಯಾರಂಟಿ ಈಡೇರಿಸದೆ ಇದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬೆಲೆ ಏರಿಕೆ ಪಟ್ಟಿ ನೋಡಿದ್ರೆ ಎದೆ ನಡುಗುತ್ತೆ – ಹೆಚ್.ಡಿ ಕುಮಾರಸ್ವಾಮಿ