– ಮಾಜಿ ಸಿಎಂ ಮನೆಯಲ್ಲಿ ಭರ್ಜರಿ ಬಾಡೂಟ ಸವಿದ ʻಕೈʼ ನಾಯಕರು
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಮೈಸೂರಿನ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಇಂದು ಭರ್ಜರಿ ಬಾಡೂಟ ಸವಿದರು.
ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಮೊದಲ ಬಾರಿಗೆ ಮೈಸೂರಿಗೆ (Mysuru) ಆಗಮಿಸಿದ್ದ ಸಿದ್ದರಾಮಯ್ಯ ಅವರು ಎಸ್‌ಐಆರ್ ಕುರಿತ ಕಾಂಗ್ರೆಸ್ ಪಕ್ಷದ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಬಳಿಕ ಕಾಂಗ್ರೆಸ್‌ನ ನಾಯಕರಿಗೆ ತಮ್ಮ ಮನೆಯಲ್ಲೇ ಬಾಡೂಟದ ವ್ಯವಸ್ಥೆ ಮಾಡಿದ್ದರು. ನಾಟಿಕೋಳಿ ಸಾರು, ಮುದ್ದೆ, ಚಿಕನ್ ಚಾಪ್ಸ್, ಪಲಾವ್ ಹಾಗೂ ಸಸ್ಯಾಹಾರದ ಊಟ ವ್ಯವಸ್ಥೆಯನ್ನೂ ಮಾಡಿದ್ದರು. ಇದನ್ನೂ ಓದಿ: ಗಾಂಧೀಜಿಯವರನ್ನೇ ಆರ್‌ಎಸ್‌ಎಸ್ ಟಾರ್ಗೆಟ್ ಮಾಡಿತ್ತು: ಬಿಕೆ ಹರಿಪ್ರಸಾದ್
ಮೈಸೂರಿನ ಟಿ.ಕೆ ಬಡಾವಣೆಯಲ್ಲಿರುವ ಸಿದ್ದರಾಮಯ್ಯ ನಿವಾಸ ಮುಂದೆ ಜರ್ಮನ್ ಟೆಂಟ್ ಹಾಕಿ ಊಟದ ವ್ಯವಸ್ಥೆ ಮಾಡಲಾಗಿತ್ತು. ತಾವು ಕೂಡ ಕಾಂಗ್ರೆಸ್ ಶಾಸಕರು ಹಾಗೂ ಸಂಸದರೊಟ್ಟಿಗೆ ಕುಳಿತು ಊಟ ಸವಿದಿದ್ದಾರೆ. ಇದನ್ನೂ ಓದಿ: ಈ ವರ್ಷವೇ ನಾನು ಬಾಂಗ್ಲಾದೇಶಕ್ಕೆ ಮರಳಲಿದ್ದೇನೆ : ಶೇಖ್ ಹಸೀನಾ
