ಮೈಸೂರು: ಪ್ರಶ್ನೆ ಕೇಳಿದವರ ಮೇಲೆ ಕಾನೂನಾತ್ಮಕ ಕ್ರಮಕ್ಕೆ ಒತ್ತಾಯಿಸುವ ಆರ್‌ಎಸ್‌ಎಸ್‌ನವರು (RSS) ಮೊದಲು ರಿಜಿಸ್ಟರ್ ಮಾಡಿಸಲಿ. ಆರ್‌ಎಸ್‌ಎಸ್ ಗಾಂಧೀಜಿಯವರನ್ನೇ (Mahatma Gandhi) ಟಾರ್ಗೆಟ್ ಮಾಡಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ (BK Hariprasad) ಕಿಡಿಕಾರಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ಧ ನೋಟಿಸ್ ದಾಖಲು ಮಾಡಲು ಕೋರ್ಟ್ ಸೂಚನೆ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಕಾನೂನಿಗೆ ನಾವು ಯಾವತ್ತೂ ತಲೆ ಬಾಗುತ್ತೇವೆ. ಆರ್‌ಎಸ್‌ಎಸ್ ಬ್ರಿಟಿಷರ ಪರ ಇತ್ತು. ಕಾನೂನಾತ್ಮಕವಾಗಿ ಪ್ರಶ್ನೆ ಮಾಡುವವರ ಮೇಲೆ ಆರ್‌ಎಸ್‌ಎಸ್ ಯಾವಾಗಲೂ ಟಾರ್ಗೆಟ್ ಮಾಡುತ್ತದೆ. ಈ ಟಾರ್ಗೆಟ್‌ಗೆ ನಾವ್ಯಾರೂ ಹೆದರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವೆನೆಜುವೆಲಾ ಭೂಕಂಪಕ್ಕೆ ಸಿಲುಕಿ ಅರ್ಜೆಂಟೀನಾ ಫುಟ್ಬಾಲ್ ಆಟಗಾರನ ಪತ್ನಿ, ಮಕ್ಕಳು ದುರಂತ ಸಾವು
ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್ ಈಶ್ವರ್ ಮೇಲೆ ಗಲಾಟೆ ನಡೆದ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಎಲ್ಲರಿಗೂ ಪ್ರಶ್ನೆ ಮಾಡುವ ಹಕ್ಕಿದೆ. ಪ್ರಶ್ನೆ ಮಾಡುವುದನ್ನೇ ತಪ್ಪು ಎಂದರೆ ಹೇಗೆ? ಈ ರೀತಿಯ ಘಟನೆ ನಡೆಯಬಾರದಿತ್ತು ಎಂದರು. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡ್ರಾ ಕೃತಿ ಸನೋನ್?
ಬಿಡದಿ ಹೋರಾಟ ವಿಚಾರವಾಗಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಸಿಎಂ ಚರ್ಚೆಗೆ ಕರೆದಿದ್ದಾರೆ. ವಿಧಾನಸೌಧಕ್ಕಿಂತಲೂ ಚರ್ಚೆಗೆ ಇನ್ಯಾವ ಜಾಗ ಬೇಕು? ವಿಧಾನಸೌಧದಲ್ಲಿ ಬಿಡದಿ ಟೌನ್‌ಶಿಪ್ ಸಾಧಕ ಭಾದಕ ಚರ್ಚೆ ಆಗಬೇಕು. ಎಲ್ಲೆಲ್ಲೋ ಕುಳಿತು ಆ ವಿಚಾರ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ – ವಿಶೇಷ ಪೂಜೆ ಸಲ್ಲಿಕೆ
ಸಂಪುಟ ಪುನರ್ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದನ್ನು ಸಿಎಂ ಹಾಗೂ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಅದು ಯಾವಾಗ ನಡೆಯುತ್ತದೆ ಎಂದು ಹೇಳಲು ನಾನು ಜ್ಯೋತಿಷಿ ಅಲ್ಲ ಎಂದು ನುಡಿದರು. ಇದನ್ನೂ ಓದಿ: ಕಿಂಚಿತ್ ಅಮಲು ಬೆರೆಸಿದರೂ ಗುಟ್ಕಾ, ಪಾನ್ ಮಸಾಲಾ ಕಂಪ್ಲೀಟ್ ಬ್ಯಾನ್: ಡಿಕೆಶಿ ಎಚ್ಚರಿಕೆ
