ಮುಂಬೈ: ವಿಶ್ವದ ಬೇರೆಲ್ಲಾ ದೇಶಗಳಿಗಿಂತಲೂ ಭಾರತ ಸಂಸ್ಕೃತಿ ವಿಶಿಷ್ಟ. ಕಲೆ, ಆಹಾರ ಸಂಸ್ಕೃತಿ, ಕೇಶ ವಿನ್ಯಾಸ ಹಾಗೂ ಧರಿಸುವ ಬಟ್ಟೆ ಎಲ್ಲದರಲ್ಲೂ ಒಂದೊಂದು ವಿಶೇಷತೆ ಇದ್ದೇ ಇದೆ. ಅದಕ್ಕಾಗಿ ಎಲ್ಲರೂ ಭಾರತದ ಸಂಸ್ಕೃತಿಯನ್ನು ಇಷ್ಟಪಡುತ್ತಾರೆ. ಕೆಲ ಭಾರತೀಯರು ವಿದೇಶಕ್ಕೆ ತೆಳಿದ್ದರೂ ಆಗಾಗ್ಗೆ ಭಾರತದ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಜಾಲತಾಣಗಳಲ್ಲಿ ಹಾಸ್ಯ ಮಾಡಿ ಟ್ರೋಲ್‌ಗಳಿಗೂ ಗುರಿಯಾಗುತ್ತಿದ್ದಾರೆ.
Advertisement
ಹಾಗೆಯೇ ಏಷ್ಯಾಕಪ್ ಬ್ಯುಸಿಯಲ್ಲಿರುವ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾಗೂ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಭಾರತೀಯ ಗ್ರಾಮೀಣ ಶೈಲಿಯಲ್ಲಿ ತಮಗೆ ಊಟ ಬಡಿಸುತ್ತಿರುವ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಧೋನಿ ಹಿಡಿದ ಕ್ಯಾಚ್‍ಗಳಿಗಿಂತ ಬಿಟ್ಟ ಕ್ಯಾಚ್‍ಗಳು ಮಹತ್ವದ್ದಾಗಿತ್ತು: ಪಾಕ್ ಆಟಗಾರ ರಶೀದ್ ಲತೀಫ್ ಟೀಕೆ
Advertisement
View this post on Instagram
Advertisement
ಭಾರತೀಯ ಶೈಲಿಯಲ್ಲಿ ತಮಗೆ ಊಟ ಬಡಿಸುತ್ತಿರುವ ವೀಡಿಯೋ ಒಂದನ್ನು ಹರಿಯಬಿಟ್ಟಿದ್ದು, ಊಟ ಬಡಿಸುತ್ತಿದ್ದಂತೆ ಸಾಕು-ಸಾಕು, ಅರೆ ಸಾಕು ಅಂತ ಹೇಳ್ತಿಲ್ವಾ? ಊಟ ಬೇಕು ಅಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡಿ’ ಎನ್ನುವಂತೆ ಕೈ ಸನ್ನೆ ಮಾಡುತ್ತಿದ್ದಾರೆ. ಶೀಖರ್ ಧವನ್ ಅವರ ಈ ವೀಡಿಯೋ ಅವರ ಅಭಿಮಾನಿಗಳಿಗೆ ಭಾರೀ ಖುಷಿ ಕೊಟ್ಟಿದ್ದು, ಲಕ್ಷಾಂತರ ವೀಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ.
Advertisement
ಶಿಖರ್ ಧವನ್ ಕೇವಲ ಮನರಂಜನೆಯ ಉದ್ದೇಶದಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಅಭಿಮಾನಿಗಳು ಎಂಜಾಯ್ ಮಾಡಲಿ ಎನ್ನುವ ಉದ್ದೇಶದಿಂದ ಶಿಖರ್ ಧವನ್ ಆಗಾಗ ಇಂತಹ ಫನ್ನಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆದರೆ ಈ ವೀಡಿಯೋನಲ್ಲಿ ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಎನ್ನುವುದು ಚರ್ಚೆಯಾಗುತ್ತಿದೆ. ಇದನ್ನೂ ಓದಿ: T20 ಸರಣಿಯಲ್ಲಿ ಟೀಂ ಇಂಡಿಯಾದಿಂದ ಹೊರಬಿದ್ದ ಧವನ್‌ಗೆ ಅಪ್ಪನಿಂದಲೇ ಥಳಿತ!
ಕೆಲ ದಿನಗಳ ಹಿಂದೆಯಷ್ಟೇ ಐಪಿಎಲ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು ಗೆಲುವು ಸಾಧಿಸುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದೇ ಆವೃತ್ತಿಯಲ್ಲಿ ಧವನ್ 6 ಸಾವಿರ ರನ್‌ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಸಾಧನೆ ಮಾಡಿದರು. ಆದರೆ ಅವರು ಕ್ವಾಲಿಫೈಯರ್‌ಗೆ ಸೆಲೆಕ್ಟ್ ಆಗಲಿಲ್ಲ ವೆಂದು ತಮ್ಮ ತಂದೆ ಥಳಿಸಿರುವುದಾಗಿ ತಮಾಷೆಯ ವೀಡಿಯೋವನ್ನೂ ಹಂಚಿಕೊಂಡಿದ್ದರು.