CricketLatestMain PostSports

ಧೋನಿ ಹಿಡಿದ ಕ್ಯಾಚ್‍ಗಳಿಗಿಂತ ಬಿಟ್ಟ ಕ್ಯಾಚ್‍ಗಳು ಮಹತ್ವದ್ದಾಗಿತ್ತು: ಪಾಕ್ ಆಟಗಾರ ರಶೀದ್ ಲತೀಫ್ ಟೀಕೆ

ಇಸ್ಲಾಮಾಬಾದ್: ಭಾರತ ಕಂಡ ಲೆಜೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಮಹೇಂದ್ರ ಸಿಂಗ್ ಧೋನಿ ಕೀಪಿಂಗ್‍ನಲ್ಲಿ ಬಿಟ್ಟ ಕ್ಯಾಚ್‍ಗಳು ಹಿಡಿದ ಕ್ಯಾಚ್‍ಗಳಿಗಿಂತ ಹೆಚ್ಚು ಮಹತ್ವದಾಗಿತ್ತು ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಶೀದ್ ಲತೀಫ್ ಟೀಕೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಯೂಟ್ಯೂಬ್ ವಾಹಿನಿಯೊಂದರಲ್ಲಿ ಮಾತನಾಡಿದ ರಶೀದ್ ಲತೀಫ್, ಧೋನಿ ಕೀಪಿಂಗ್‍ನಲ್ಲಿ ಹಿಡಿದ ಕ್ಯಾಚ್‍ಗಿಂತ ಬಿಟ್ಟಂತಹ ಶೇ.21ರಷ್ಟು ಕ್ಯಾಚ್‍ಗಳು ಹೆಚ್ಚು ಮಹತ್ವದಾಗಿತ್ತು. ಧೋನಿ ಹಿಡಿದ ಕ್ಯಾಚ್, ಸ್ಟಂಪ್‍ಔಟ್ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಯಾರು ಕೂಡ ಅವರು ಬಿಟ್ಟ ಕ್ಯಾಚ್‍ಗಳ ಬಗ್ಗೆ ಮಾತನಾಡಲಿಲ್ಲ. ನನ್ನ ಪ್ರಕಾರ ಕ್ವಿಂಟನ್ ಡಿಕಾಕ್ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಎಂದಿದ್ದಾರೆ. ಇದನ್ನೂ ಓದಿ: ನಿವೃತ್ತಿ ಘೋಷಿಸಿದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್

ಧೋನಿ 2020ರ ಆಗಸ್ಟ್‌ನಲ್ಲಿ ಅಂತಾರಾಷ್ಟ್ರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುವ ಮುನ್ನ ಟೆಸ್ಟ್ ಕ್ರಿಕೆಟ್‍ನಲ್ಲಿ 256 ಕ್ಯಾಚ್, 38 ಸ್ಟಂಪ್, ಏಕದಿನ ಕ್ರಿಕೆಟ್‍ನಲ್ಲಿ 321 ಕ್ಯಾಚ್, 123 ಸ್ಟಂಪ್‍ಔಟ್ ಮಾಡಿದ್ದಾರೆ. ಜೊತೆಗೆ ಟಿ20 ಕ್ರಿಕೆಟ್‍ನಲ್ಲಿ 57 ಕ್ಯಾಚ್, 34 ಸ್ಟಂಪ್‍ಔಟ್ ಮಾಡಿದ್ದಾರೆ. ಸದ್ಯ ಧೋನಿ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಇದನ್ನೂ ಓದಿ: ನಿಮ್ಮದು ಅದ್ಭುತ ಸಾಧನೆ – ಪಿ.ವಿ ಸಿಂಧುರನ್ನ ಹೊಗಳಿದ ಆಸ್ಟ್ರೇಲಿಯಾ ಸ್ಟಾರ್ ಡೇವಿಡ್ ವಾರ್ನರ್

MS DHONI (2)

ಇದೀಗ ಲತೀಫ್ ಮಾತಿನಿಂದಾಗಿ ಧೋನಿ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಧೋನಿ ಕುರಿತಾಗಿ ಮಾತನಾಡುವ ಯೋಗ್ಯತೆ ನಿಮಗಿಲ್ಲ ಎಂದು ತಿರುಗಿ ಬಿದ್ದಿದ್ದಾರೆ.

Live Tv

Leave a Reply

Your email address will not be published.

Back to top button