ಬೆಂಗಳೂರು: ಶಕ್ತಿ ಯೋಜನೆಗೆ (Shakti Yojana) ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಸೋಮವಾರ ಒಂದೇ ದಿನ 41 ಲಕ್ಷ ಮಹಿಳಾ ಪ್ರಯಾಣಿಕರು ಉಚಿತವಾಗಿ ಸಂಚಾರ (Free Bus Travel) ಮಾಡಿದ್ದಾರೆ.
ಸೋಮವಾರ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ 8,83,53,434 ರೂ. ಆಗಿದೆ. ಭಾನುವಾರ ಒಟ್ಟು 5.71 ಲಕ್ಷ ಮಂದಿ ಪ್ರಯಾಣ ಮಾಡಿದ್ದು ಆ ದಿನದ ಪ್ರಯಾಣದ ಮೌಲ್ಯ 1,40,22,878 ರೂ. ಆಗಿದೆ ಎಂದು ಸರ್ಕಾರ ತಿಳಿಸಿದೆ.
Advertisement
Advertisement
ಭಾನುವಾರ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದ್ದರೂ ವಾರಾಂತ್ಯವಾದ ಕಾರಣ ಕಚೇರಿಗಳಿಗೆ ರಜೆ ಇತ್ತು. ಆದರೆ ಸೋಮವಾರ ಕೆಲಸದ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಂಚರಿಸಿದ್ದಾರೆ.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy), ಭಾನುವಾರ ಒಟ್ಟು 5 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಉಚಿತ ಸೇವೆಯನ್ನ ಬಳಿಸಿಕೊಂಡಿದ್ದರೆ ಸೋಮವಾರ ಈ ಸಂಖ್ಯೆ 41 ಲಕ್ಷಕ್ಕೆ ಏರಿಕೆಯಾಗಿದೆ ಎಂದರು.
Advertisement
ಜನರಿಂದ ಉತ್ತಮ ಬೆಂಬಲ ಮತ್ತು ಪ್ರತಿಕ್ರಿಯೆ ಸಿಗುವುದರ ಜೊತೆ ಕೆಲ ದೂರುಗಳು ಸಹ ಬಂದಿದೆ. ನಮ್ಮ ಬಸ್ಸುಗಳನ್ನು ಎಲ್ಲಾ ನಿಲ್ದಾಣಗಳಲ್ಲಿ ನಿಲ್ಲಿಸಬೇಕು. ನಿಯಮಗಳನ್ನು ಪಾಲನೆ ಮಾಡದೇ ಹೋದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಚಾಲಕ ನಿರ್ವಾಹಕರಿಗೆ ಎಚ್ಚರಿಕೆ ನೀಡಿದರು.