ಕಲಬುರಗಿ: ಶೀಲವನ್ನು ಶಂಕಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ (Kalaburagi) ನಗರದ ಅಂಬಿಕಾ ಕಾಲೋನಿಯಲ್ಲಿ ನಡೆದಿದೆ.
ನಗರದ ಅಂಬಿಕಾ ಕಾಲೋನಿಯ ಫರೀದಾ ಬೇಗಂ (39) ಪತಿ ಎಜಾಜ್ ಅಹ್ಮದ್ನಿಂದ ಕೊಲೆಯಾದ ದುರ್ದೈವಿ. ಕಳೆದ 13 ವರ್ಷದ ಹಿಂದೆ ಈಕೆಯ ಜೊತೆಗೆ ವಿವಾಹ ಆಗಿದ್ದ ಅಹ್ಮದ್, ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಸೇತುವೆ ತಡೆಗೋಡೆಗೆ ಕಾರು ಡಿಕ್ಕಿ – ನಾಲ್ವರು ಸ್ಥಳದಲ್ಲೇ ಸಾವು
Advertisement
Advertisement
ಅನೈತಿಕ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.
Advertisement
Advertisement
ಪತಿ-ಪತ್ನಿ ಇಬ್ಬರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ನಿತ್ಯ ಶಾಲೆಗೆ ಹೋಗದಂತೆ ಪತಿ ಪೀಡಿಸುತ್ತಿದ್ದ ಎಂದು ಮಾಹಿತಿ ಬಂದಿದ್ದು, ಸ್ಟೇಶನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲವ್ವರ್ ಹತ್ಯೆಗೂ ಮುನ್ನ ಗೆಳೆಯರ ಜೊತೆ ಎಂಗೇಜ್ಮೆಂಟ್ ಪಾರ್ಟಿ ಮಾಡಿದ್ದ ಕೊಲೆಗಡುಕ!
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k