ಬೆಂಗಳೂರು: ಸುರಂಗ ರಸ್ತೆ ಯೋಜನೆ ವಿರುದ್ಧ ವಾಕರ್ಸ್ ಅಸೋಷಿಯೇಷನ್ ವಿಭಿನ್ನವಾಗಿ ಪ್ರತಿಭಟನೆ (Protest) ನಡೆಸಿದೆ. ಲಾಲ್‌ಬಾಗ್‌ನಲ್ಲಿರುವ ಬಂಡೆಯನ್ನು ತಬ್ಬಿಕೊಂಡು ಲಾಲ್‌ಬಾಗ್ (Lalbagh) ಉಳಿಸಿ ಎಂದು ವಾಕಾರ್ಸ್ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ʻಬಂಡೆಯನ್ನು ತಬ್ಬಿಕೊಳ್ಳಿʼ ಹೆಸರಿನಲ್ಲಿ ಪ್ರತಿಭಟನೆ ನಡೆದಿದೆ. ಸುರಂಗ ರಸ್ತೆ ಯೋಜನೆಯಿಂದ ಲಾಲ್‌ಬಾಗ್‌ಗೆ ಸಮಸ್ಯೆಯಾಗಲಿದೆ. ಯಾವುದೇ ಕಾರಣಕ್ಕೂ ಲಾಲ್‌ಬಾಗ್‌ಗೆ ಧಕ್ಕೆ ಆಗಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವಿಧಾನಸೌಧದ ಮುಂದೆ ಮನಮೋಹಕ ಮ್ಯೂಸಿಕಲ್ ನೈಟ್ – ಶಕ್ತಿಸೌಧಕ್ಕೆ ಹೊಸ ಕಳೆ ತಂದು ಕೊಟ್ಟ ಫ್ರೀಡಂಹಬ್ಬ
ಅನುಮತಿ ಇಲ್ಲದೇ ಪ್ರತಿಭಟನೆ ಮಾಡೋ ಹಾಗಿಲ್ಲ ಎಂದು ಪೊಲೀಸರು ಪ್ರತಿಭಟನಾಕಾರರಿಗೆ ಮಾಹಿತಿ ನೀಡಿ ಕಳುಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಫ್ರೀಡಂಪಾರ್ಕ್ ಪ್ರತಿಭಟನೆ ಮಾಡೋದಾಗಿ ಹೇಳಿ ಪ್ರತಿಭಟನಾಕಾರರು ಅಲ್ಲಿಂದ ತೆರಳಿದ್ದಾರೆ.
ಈ ಹಿಂದೆ ಮಾನವ ಸರಪಳಿ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಈಗ ಮತ್ತೊಮ್ಮೆ ಲಾಲ್ ಬಾಗ್ ಉಳಿಸಬೇಕು ಅಂತ ಸರ್ಕಾರಕ್ಕೆ ವಾಕರ್ಸ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ವಿವಿಯ ಎಲ್ಲಾ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ – ಕುಲಪತಿಗಳಿಂದ ಮಹತ್ವದ ನಿರ್ಧಾರ!
