ತಿರುವನಂತಪುರಂ: ಸಾವರ್ಕರ್ (Savarkar) ಅವರನ್ನು ಸ್ವಾತಂತ್ರ್ಯ ಹೋರಾಟಗಾರ (Freedom Fighter) ಎಂದು ಪರಿಗಣಿಸದ ಕಾಂಗ್ರೆಸ್ (Congress) ಇಂದು ಒಂದು ನಿರೀಕ್ಷೆಯೇ ಮಾಡಿರದ ಪ್ರಮಾದವನ್ನು ಎದುರಿಸಿದೆ. ಕಾಂಗ್ರೆಸ್ ಜೋಡೋ ಯಾತ್ರೆಯ (Bharat Jodo Yatra) ಹಿನ್ನೆಲೆ ಮಾಡಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಪೋಸ್ಟರ್‌ನಲ್ಲಿ (Poster) ಸಾವರ್ಕರ್ ಅವರ ಚಿತ್ರವೂ ಕಂಡುಬಂದಿದೆ. ಆದರೆ ಕಾಂಗ್ರೆಸ್ ಇದನ್ನು ಪ್ರಿಂಟಿಂಗ್ ಮಿಸ್ಟೇಕ್ (Printing Mistake) ಎಂದು ಸಮರ್ಥಿಸಿಕೊಂಡಿದೆ.
ಕಾಂಗ್ರೆಸ್‌ನ ಮಹಾತ್ವಾಕಾಂಕ್ಷೆಯ ರ‍್ಯಾಲಿ ಭಾರತ್ ಜೋಡೋ ಯಾತ್ರೆ ಕೇರಳದ (Kerala) ಎರ್ನಾಕುಲಂ ಜಿಲ್ಲೆ ತಲುಪಿದಾಗ ಸ್ವಾತಂತ್ರ್ಯ ಹೋರಾಟಗಾರರ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ ಬಳಸಿರುವುದು ಕಂಡುಬಂದಿದೆ. ಆದರೆ ಕಾಂಗ್ರೆಸ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ, ಅವರು ಬ್ರಿಟಿಷರ ವಿರುದ್ಧ ಹೋರಾಡುವ ಬದಲು ಅವರಿಗೆ ಕ್ಷಮೆ ಯಾಚಿಸಿದವರು ಎಂದು ವಾದಿಸಿದ್ದಾರೆ.
Advertisement
Advertisement
ಕೇರಳದ ಸ್ವತಂತ್ರ ಶಾಸಕ ಪಿ.ವಿ ಅನ್ವರ್ ಅವರು ಈ ಪೋಸ್ಟರ್ ಅನ್ನು ಗಮನಿಸಿ, ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಚೆಂಗಮನಾಡಿನಲ್ಲಿ ಇರಿಸಲಾದ ಪೋಸ್ಟರ್‌ನಲ್ಲಿ ಸಾವರ್ಕರ್ ಅವರ ಫೋಟೋವನ್ನು ಹಾಕಲಾಗಿದೆ. ಈ ವಿಚಾರ ಕಾರ್ಯಕರ್ತರ ಗಮನಕ್ಕೆ ಬರುತ್ತಿದ್ದಂತೆ ಸಾವರ್ಕರ್ ಅವರ ಫೋಟೋ ಮೇಲೆ ಮಹಾತ್ಮ ಗಾಂಧೀಜಿಯವರ ಚಿತ್ರವನ್ನು ಅಂಟಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹೃದಯ ಸಮಸ್ಯೆ- ಮೆಗ್ಗಾನ್ ಆಸ್ಪತ್ರೆಗೆ ಮುರುಘಾ ಶ್ರೀ ಶಿಫ್ಟ್
Advertisement
#WATCH | Kerala: Picture of VD Savarkar being covered by a picture of Mahatma Gandhi on the campaign poster of ‘Bharat Jodo Yatra’ that was put up in Kochi earlier today pic.twitter.com/krjnX1r0Uy
— ANI (@ANI) September 21, 2022
Advertisement
ತಕ್ಷಣವೇ ಈ ಬಗ್ಗೆ ಸ್ಪಷ್ಟನೆ ನೀಡಿದ ಕಾಂಗ್ರೆಸ್, ಇದು ಪ್ರಿಂಟಿಂಗ್ ಮಿಸ್ಟೇಕ್‌ನಿಂದ ಆಗಿದೆ. ನಾವು ಮುದ್ರಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳಿರುವ ಪೋಸ್ಟರ್ ತಯಾರಿಸಲು ಹೇಳಿದಾಗ ಅವರು ಕ್ರಾಸ್ ಚೆಕ್ ಮಾಡದೇ ಆನ್‌ಲೈನ್‌ನಲ್ಲಿ ಲಭ್ಯವಿದ್ದ ಎಲ್ಲಾ ಫೋಟೋಗಳನ್ನೂ ಹಾಕಿ ಪೋಸ್ಟರ್ ಮಾಡಿದ್ದಾರೆ. ಬಳಿಕ ಸಾವರ್ಕರ್ ಫೋಟೋ ಮೇಲೆ ಗಾಂಧೀಜಿಯವರ ಚಿತ್ರವನ್ನು ಹಾಕುವ ಮೂಲಕ ತಪ್ಪನ್ನು ಸರಿಪಡಿಸಿದ್ದೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ