ರಿಯಾದ್: ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ (Saudi Arabia) ಸ್ವಿಮ್ ಸೂಟ್ ಮಾಡೆಲ್‌ಗಳನ್ನು (Swimsuit Models) ಒಳಗೊಂಡ ಮೊದಲ ಫ್ಯಾಶನ್ ಶೋ (Fashion Show) ನಡೆಸಿದೆ.
ಸೌದಿ ಅರೇಬಿಯಾದ ಪಶ್ಚಿಮ ಕರಾವಳಿಯಲ್ಲಿ ನೆಲೆಗೊಂಡಿರುವ ಸೇಂಟ್ ರೆಗಿಸ್ ರೆಡ್ ಸೀ ರೆಸಾರ್ಟ್‌ನಲ್ಲಿ ಉದ್ಘಾಟನಾ ರೆಡ್ ಸೀ ಫ್ಯಾಶನ್ ವೀಕ್‌ನ ಎರಡನೇ ದಿನ ಸ್ವಿಮ್ ಸೂಟ್ ಫ್ಯಾಶನ್ ಶೋ ನಡೆಯಿತು.
Advertisement
ಸೌದಿ ಅರೇಬಿಯಾ ವಿಷನ್ 2020 ಅಡಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಈ ಯೋಜನೆಯ ಭಾಗವಾಗಿ ವಿಶ್ವದ ಪ್ರವಾಸಿಗರು ಸೌದಿ ಅರೇಬಿಯಾಗೆ ಆಗಮಿಸಲು ರೆಡ್ ಸಿ ಗ್ಲೋಬಲ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಮೇಲ್ವಿಚಾರಣೆಯಲ್ಲಿ ಈ ಯೋಜನೆ ತಯಾರುತ್ತಿದೆ.
Advertisement
2022 ರಲ್ಲಿ ಫ್ಯಾಶನ್ ಉದ್ಯಮವು 12.5 ಶತಕೋಟಿ ಡಾಲರ್ ಅಥವಾ ರಾಷ್ಟ್ರೀಯ ಜಿಡಿಪಿಯ 1.4% ಹೊಂದಿದೆ ಮತ್ತು 230,000 ಜನರಿಗೆ ಉದ್ಯೋಗ ನೀಡಿದೆ ಎಂದು ಸೌದಿ ಫ್ಯಾಶನ್ ಆಯೋಗವು ಕಳೆದ ವರ್ಷ ಅಧಿಕೃತ ವರದಿ ಪ್ರಕಟಿಸಿತ್ತು. ಇದನ್ನೂ ಓದಿ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಟ್ಯಾಂಪರಿಂಗ್ ಮಾಡಲಾಗುತ್ತಿದೆ: ಸ್ವಾತಿ ಮಲಿವಾಲ್
Advertisement
Advertisement
ಅತಿಯಾದ ಧಾರ್ಮಿಕತೆಯಿಂದ ದೂರ
ಮಧ್ಯ ಏಷ್ಯಾದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅತಿಯಾದ ಧಾರ್ಮಿಕತೆಯನ್ನು ಅಳವಡಿಸಿಕೊಂಡರೆ ಮುಂದೆ ಉಗ್ರರ ದೇಶವಾಬಹುದು ಎಂಬ ಭಯ ಸೌದಿ ಅರೇಬಿಯಾವನ್ನು ಕಾಡುತ್ತಿದೆ. ಯಾಕೆಂದರೆ ಐಸಿಸ್, ತಾಲಿಬಾನ್, ಅಲ್ ಕೈದಾ, ಹೌತಿ, ಬೊಕೊ ಹರಾಮ್ ಉಗ್ರರು ಏನು ಮಾಡಿದ್ದಾರೆ ಎನ್ನುವುದು ಸೌದಿಗೆ ಗೊತ್ತಿದೆ.
ದೇವರೇ ದೊಡ್ಡವನು, ರಾಜರು ಹೇಳಿದಂತೆ ಕೇಳಬೇಕಿಲ್ಲ ಎಂದು ಐಸಿಸ್‌ನಂತಹ ಉಗ್ರ ಸಂಘಟನೆಗಳು ಪ್ರಬಲವಾದರೆ ರಾಜರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಈ ಕಾರಣಕ್ಕೆ ಉಗ್ರ ಸಂಘಟನೆಗಳನ್ನು ಬೆಂಬಲಿಸುವ ದೇಶಗಳ ಜೊತೆ ಮಾತುಕತೆ ನಡೆಸಲು ಸೌದಿ ಅರೇಬಿಯಾ ಮೊದಲಿನಿಂದಲೂ ಹಿಂದೇಟು ಹಾಕುತ್ತಿದೆ. ಉಗ್ರ ಸಂಘಟನೆಗಳಿಗೆ ಬೆಂಬಲ ನೀಡಿದರೆ ಪಾಕ್ ದಿವಾಳಿಯಾದಂತೆ ನಾವು ದಿವಾಳಿಯಾಬಹುದು ಎಂಬ ಭಯ ಸೌದಿಗಿದೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಜನರ ಶಿರಚ್ಛೇದ – 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ
ಸೌದಿ ಅರೇಬಿಯಾ ಈ ಹಿಂದೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಸೌದಿ ಅರೇಬಿಯಾದಲ್ಲಿ ಮೊದಲ ಬಾರಿಗೆ ಮದ್ಯದ ಅಂಗಡಿಯನ್ನು ತೆರೆಯಲಾಗಿದೆ.ರಿಯಾದ್‌ನ ಸೂಪರ್ ಮಾರ್ಕೆಟ್‌ನಲ್ಲಿ ವಿದೇಶಿ ಅತಿಥಿಗಳಿಗಾಗಿ ಮದ್ಯದ ಅಂಗಡಿಯನ್ನು ಓಪನ್ ಮಾಡುವ ಮೂಲಕ ಇಲ್ಲಿಯವರೆಗಿನ ಧಾರ್ಮಿಕ ಕಟ್ಟುಪಾಡುಗಳಿಗೆ ಬ್ರೇಕ್ ಹಾಕಿದೆ. ನಿಧಾನವಾಗಿ ಸೌದಿ ಅರೇಬಿಯಾ ಮಹಿಳೆಯರಿಗೆ ವಿಧಿಸಿದ್ಧ ನಿರ್ಬಂಧವನ್ನು ತೆಗೆಯುತ್ತಿದೆ.