ಬೆಂಗಳೂರು: ಕ್ರಿಮಿನಲ್ ಪ್ರಕರಣಗಳ ಆರೋಪಿ ಸ್ಯಾಂಟ್ರೋ ರವಿ (Santro Ravi) ಆರೋಗ್ಯದಲ್ಲಿ ಏರುಪೇರಾಗಿದ್ದು, ವಿಕ್ಟೋರಿಯಾ (Victoria Hospital) ಗೆ ಶಿಫ್ಟ್ ಮಾಡಲಾಗಿದೆ.
ಮಧುಮೇಹ (Ssugar Patient) ಖಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಟ್ರೋ ರವಿಯನ್ನು ಸಿಐಡಿ ಪೊಲೀಸರು ಗುರುವಾರ ಸಂಜೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಶುಗರ್ 400 ಕ್ಕೂ ಅಧಿಕವಾಗಿತ್ತು. ಈ ಹಿನ್ನೆಲೆ ವಿಕ್ಟೋರಿಯಾಗೆ ದಾಖಲಿಸಲಾಗಿದೆ.
Advertisement
Advertisement
ಸದ್ಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ನಿಯಮಿತ ಮಾತ್ರೆಗಳಿಗಿಂತ ಹೆಚ್ಚಿನ ಮಾತ್ರೆಗಳನ್ನು ಸೇವಿಸಿದ ಅನುಮಾನ ಬಂದಿದೆ. ಸದ್ಯಕ್ಕೆ ವೈದ್ಯರ ಬಳಿ ಅಧಿಕಾರಿಗಳು ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ಹಿಂದೆ ಇರೋ ಮುಖವಾಡಗಳು ಕಳಚಿ ಬೀಳಬೇಕು – ಆರಗ ಜ್ಞಾನೇಂದ್ರ
Advertisement
Advertisement
ಶುಗರ್, ಬಿಪಿ ಸೇರಿ ಹಲವು ಸಮಸ್ಯೆ ಯಿಂದ ಬಳಲುತ್ತಿರುವ ಸ್ಯಾಂಟ್ರೋ ರವಿ, ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ನಾ ಎಂಬ ಅನುಮಾನ ಮೂಡಿದೆ. ಸ್ಯಾಂಟ್ರೋ ರವಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಡಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆ ಬಳಿ ಭದ್ರತೆ ಹೆಚ್ಚಿಸಿದ್ದಾರೆ. ಭದ್ರತೆಗೆ ಕೆಎಸ್ ಆರ್ ಪಿ ತುಕಡಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಸ್ಯಾಂಟ್ರೋ ರವಿಯನ್ನು ಜನವರಿ 30 ರವರೆಗೂ ಸಿಐಡಿ ಕಸ್ಟಡಿಗೆ ನ್ಯಾಯಾಲಯ ಅದೇಶ ಮಾಡಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k