ನಟ ಶಂಕರ್ ನಾಗ್ (Shankar Nag) ಅಭಿನಯದ “ಗೀತಾ” ಚಿತ್ರದಿಂದ ಈತನಕ ಸಂಜು ಮತ್ತು ಗೀತಾ (Geeta and Sanju) ಎಂಬ ಹೆಸರು ಜನಪ್ರಿಯ. ಈಗ ಅದೇ ಹೆಸರಿನ ಚಿತ್ರವೊಂದು ನಿರ್ಮಾಣವಾಗುತ್ತಿದೆ.ಆರ್ ಕೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ (Muhurta) ಸಮಾರಂಭ ಇತ್ತೀಚೆಗೆ ನಡೆಯಿತು.
ಇದೊಂದು ನವೀರಾದ ಪ್ರೇಮಕಥೆ. ಕುಟುಂಬ ಸಮೇತ ನೋಡಬಹುದಾದ ಉತ್ತಮ ಚಿತ್ರ. ಈ ಹಿಂದೆ ನನ್ನ ನಿರ್ದೇಶನದ “ಕಾಣೆಯಾಗಿದ್ದಾಳೆ” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ವಿನಯ್ ಕಾರ್ತಿಕ್ (Vinay Karthik) ಈ ಚಿತ್ರದಲ್ಲೂ ನಾಯಕನಾಗಿ ಅಭಿನಯಿಸಿದ್ದಾರೆ. “ಮಂಗಳ ಗೌರಿ” ಧಾರಾವಾಹಿಯಲ್ಲಿ ಅಭಿನಯಿಸಿದ್ದ ಸನ್ಮಿತ ಈ ಚಿತ್ರದ ನಾಯಕಿ. ರಾಘವೇಂದ್ರ ರಾಜಕುಮಾರ್ ಈ ಚಿತ್ರದಲ್ಲಿ ನಾಯಕಿಯ ತಂದೆ ಪಾತ್ರದಲ್ಲಿ, ಹಿರಿಯ ನಟಿ ಭವ್ಯ ನಾಯಕನ ತಾಯಿಯಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಹಿತಿ ದೊಡ್ಡರಂಗೇಗೌಡ , ಸ್ವಾತಿ ಸೇರಿದಂತೆ ಅನೇಕ ಕಲಾವಿದರು ನಮ್ಮ ಚಿತ್ರದ ತಾರಾಬಳಗದಲ್ಲಿದ್ದಾರೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಆರ್ ಕೆ ಮಾಹಿತಿ ನೀಡಿದರು. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ
ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದೆ ಎಂದರು ಹಿರಿಯ ನಟಿ ಭವ್ಯ. ನನಗೆ ಆರ್ ಕೆ ಅವರ ಜೊತೆ ಎರಡನೇ ಚಿತ್ರ. ರಾಘವೇಂದ್ರ ರಾಜಕುಮಾರ್, ಭವ್ಯ ಅವರಂತಹ ಹಿರಿಯ ನಟರೊಡನೆ ಅಭಿನಯಿಸುತ್ತಿರುವುದು ಖುಷಿಯಾಗಿದೆ ಎಂದು ನಾಯಕ ವಿನಯ್ ಕಾರ್ತಿಕ್ ಹೇಳಿದರು.
ತಮ್ಮ ಪಾತ್ರದ ಬಗ್ಗೆ ನಾಯಕಿ ಸನ್ಮಿತ ಮಾತನಾಡಿದರು. ನಾನು ಈ ಚಿತ್ರದಲ್ಲೂ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ “ಮಹಾಭಾರತ” ದ ರಾಘವೇಂದ್ರ (Raghavendra)ತಿಳಿಸಿದರು. ನಿರ್ಮಾಪಕ ಸಂಜಯ್ ಮಾಗನೂರು ಹಾಗೂ ಸಂಗೀತ ನಿರ್ದೇಶಕ ಕೌಶಿಕ್ ಚಿತ್ರದ ಬಗ್ಗೆ ಮಾಹಿತಿ ನೀಡಿದರು. ಛಾಯಾಗ್ರಾಹಕ ನಾಗರಾಜ್, ಸಂಕಲನಕಾರ ಶಿವರಾಜು ಮೇಹು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥತರಿದ್ದರು.