Bengaluru CityCinemaKarnatakaLatestMain PostSandalwood

ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

ಸ್ಯಾಂಡಲ್‌ವುಡ್ ನಟ ಚೇತನ್(Actor Chetan) ಇತ್ತೀಚೆಗೆ `ಕಾಂತಾರ’ (Kantara Film) ಸಿನಿಮಾ ನೋಡಿ, ವಿವಾದಾತ್ಮಕ ಹೇಳಿಕೆ ನೀಡಿದ್ದರು. ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಅವರ ಹೇಳಿಕೆಗೆ ರಿಷಬ್ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಪ್ರತಿಕ್ರಿಯೆ ನೀಡಿದ್ದಾರೆ. ಪಬ್ಲಿಕ್ ಟಿವಿ ಡಿಜಿಟಲ್‌ಗೆ ಈ ಕುರಿತು ಮಾತನಾಡಿದ್ದಾರೆ.

ಸದಾ ವಿವಾದಾತ್ಮಕ ಹೇಳಿಕೆಯ ಮೂಲಕ ಸದ್ದು ಮಾಡುವ ನಟ ಚೇತನ್ ಇದೀಗ ಭೂತಾರಾಧನೆ ಕುರಿತಾಗಿ ನೀಡಿರುವ ಹೇಳಿಕೆಯಿಂದ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನೂ `ಕಾಂತಾರ’ (Kantara Film) ಚಿತ್ರದಲ್ಲಿ ಫ್ಯಾಷನ್ ಡಿಸೈನರ್ ಆಗಿ ಪ್ರಗತಿ ಶೆಟ್ಟಿ ಕೆಲಸ ಮಾಡಿದ್ದಾರೆ. ಚೇತನ್ ವಿವಾದದ ಕುರಿತು ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ:ದೇವರು ಮೆಚ್ಚೋದಿಲ್ಲ ಎಂದು ಸಾನ್ಯ ವಿರುದ್ಧ ರಾಂಗ್ ಆದ ಸಂಬರ್ಗಿ

ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಜನಗಳೇ ಇದಕ್ಕೆ ಉತ್ತರ ಕೊಡ್ತಿದ್ದಾರೆ. ಆ ಉತ್ತರ ಕೊಡಬೇಕೋ ಅವರೇ ಕೊಡುತ್ತಾರೆ ಎಂದು ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಚೇತನ್ ವಿವಾದದ ಕುರಿತು ಮಾತನಾಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button